ಉದಯನಿಧಿ ವಿರುದ್ಧ I.N.D.I.A ಮೈತ್ರಿಯಲ್ಲೂ ಅಪಸ್ವರ!
ಉದಯಯನಿಧಿ ಹೇಳಿಕೆ ಜೊತೆ ಶ್ರೀಗಳ ವಿಡಿಯೋ ತಳುಕು!
ಮಂತ್ರಾಲಯ ಶ್ರೀಗಳ ವಿರುದ್ಧ ಜಾಲತಾಣದಲ್ಲಿ ಆಕ್ರೋಶ
ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ಅನ್ನೋ ಮಾತಿದೆ. ಆದರೆ ತಮಿಳುನಾಡಿನ ಕ್ರೀಡಾ ಸಚಿವರು ನುಡಿದ ಮಾತು ಈಗ ಹದ್ದಾಗಿ ಅವರನ್ನೇ ಕುಕ್ಕಲು ಶುರುಮಾಡಿದೆ. ಸನಾತನ ಧರ್ಮದ ವಿರುದ್ಧ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ದೇಶದೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೇ ಒಂದು ಮಾತು ಎತೆಂತಾ ಅನಾಹುತಗಳನ್ನ ಸೃಷ್ಟಿಸಬಹುದು. ಓರ್ವ ವ್ಯಕ್ತಿಯ ಮೇಲೆ ಹೇಗೆಲ್ಲಾ ಪರಿಣಾಮ ಬೀರಬಹುದು ಅನ್ನೋದಕ್ಕೆ ಇವತ್ತು ಸಾಕ್ಷಿಯಾಗಿ ನಿಂತಿರೋದು ತಮಿಳಿನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಅನ್ನೋ ಮಾತು ಸದ್ಯ ಉದಯನಿಧಿ ಸ್ಟಾಲಿನ್ ಬದುಕಲ್ಲಿ ಸತ್ಯವಾಗೋ ಕಾಲ ಬಂದಿದೆ. ಸನಾತನ ಧರ್ಮದ ವಿರುದ್ಧ ಉದಯನಿಧಿ ನೀಡಿದ ಹೇಳಿಕೆ ತಮಿಳುನಾಡಿನ ಗಡಿದಾಟಿ ಸದ್ದು ಮಾಡತೊಡಗಿದೆ. ಹಿಂದೂಪರ ಸಂಘಟನೆಗಳ ಆಕ್ರೋಶದ ಕಟ್ಟೆಯನ್ನ ಒಡೆಯುವಂತೆ ಮಾಡಿದೆ.
ಉದಯನಿಧಿ ವಿರುದ್ಧ ದೇಶವ್ಯಾಪಿ ದೂರು ದಾಖಲು!
ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಹಿಂದೂಪರ ಸಂಘಟನೆಗಳು ಆಂದೋಲನ ಆರಂಭಿಸಲು ಮುಂದಾಗಿವೆ. ಉದಯನಿಧಿ ವಿರುದ್ಧ ರಾಷ್ಟ್ರವ್ಯಾಪಿ ದೂರು ದಾಖಲು ಮಾಡಲು ನಿರ್ಧಾರ ಮಾಡಲಾಗಿದೆ. ಉದಯನಿಧಿ ಜನಪ್ರತಿನಿಧಿ ಆಗಿರುವ ಹಿನ್ನೆಲೆ ಎಫ್ಐಆರ್ ದಾಖಲು ಮಾಡಿಕೊಳ್ಳುವಂತೆ ರಾಜ್ಯಪಾಲರಿಗೆ ಈಗಾಗಲೇ ಮನವಿ ಸಲ್ಲಿಕೆ ಮಾಡಲಾಗಿದೆ. ಆನ್ಲೈನ್ ಮೂಲಕ ಸನಾತನ ಧರ್ಮದ ಧಾರ್ಮಿಕ ಭಾವನೆಗಳಿಗೆ ದಕ್ಕೆ ಎಂದು ದೂರು ದಾಖಲಿಸಲು ಸಂಘಟನೆ ಕರೆ ನೀಡಿದೆ. ರಾಜ್ಯದಲ್ಲೂ ದೂರು ದಾಖಲು ಮಾಡಲು ನಿರ್ಧರಿಸಲಾಗಿದೆ.
‘ಧರ್ಮವನ್ನ ಅವಹೇಳನ ಮಾಡಿದವರೆಲ್ಲರೂ ನಾಶವಾದ್ರು’!
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ
ಉದಯನಿಧಿ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ರಾಮ ಕುಡುಕ ಅಂತಾ ಕರುಣಾನಿಧಿಯೇ ಹೇಳಿದ್ದರು. ಧರ್ಮವನ್ನ ಅವಹೇಳನ ಮಾಡಿದವರೆಲ್ಲರೂ ನಾಶವಾದರು. ಮುಂದಿನ ದಿನಗಳಲ್ಲಿ ಡಿಎಂಕೆ ಕೂಡ ಸರ್ವನಾಶ ಆಗುತ್ತೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಪುತ್ರನ ಹೇಳಿಕೆಗೆ ಮಮತಾ ಬ್ಯಾನರ್ಜಿ ಅಸಮಾಧಾನ!
ಇಂಡಿಯಾ ಮೈತ್ತಿಕೂಟದ ಭಾಗವಾಗಿರೋ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಉದಯನಿಧಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವರ್ಗದ ಜನರನ್ನ ನೋಯಿಸುವ ಯಾವುದೇ ವಿಷಯದಲ್ಲಿ ನಾವು ಭಾಗಿಯಾಗಬಾರದು, ನಾನು ಸನಾತನ ಧರ್ಮವನ್ನ ಗೌರವಿಸುತ್ತೇನೆ ಅಂತ ತಿಳಿಸಿದ್ದಾರೆ.
ತಮಿಳುನಾಡಿನ ಜನರ ಬಗ್ಗೆ ಅಪಾರ ಗೌರವವಿದೆ. ಆದರೆ ಅವರಿಗೆ ನನ್ನ ವಿನಮ್ರ ವಿನಂತಿ, ಪ್ರತಿಯೊಂದು ಧರ್ಮಕ್ಕೂ ಅವರವರ ಪ್ರತ್ಯೇಕ ಭಾವನೆಗಳಿವೆ. ಭಾರತ ಜಾತ್ಯತೀತ ದೇಶ, ಇದು ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಅದೇ ಸಮಯದಲ್ಲಿ, ವಿವಿಧತೆಯಲ್ಲಿ ಏಕತೆ ನಮ್ಮ ಮೂಲ. ಹಾಗಾಗಿ ನಾನು ಸನಾತನ ಧರ್ಮವನ್ನು ಗೌರವಿಸುತ್ತೇನೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ

ಉದಯನಿಧಿ ವಿವಾದಾತ್ಮಕ ಹೇಳಿಕೆ ಮಧ್ಯೆ ಮಂತ್ರಾಲಯದ ಶ್ರೀಗಳ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ರಾಯರ ಮಠದಲ್ಲಿ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರಿಗೆ ಕೈಗೆ ವಸ್ತ್ರ ನೀಡದೆ ಅದನ್ನು ಎಸೆಯುತ್ತಿರೋ ವಿಡಿಯೋ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ವಿಡಿಯೋವನ್ನು ನೆಟ್ಟಿಗರು ಉದಯನಿಧಿ ಹೇಳಿಕೆ ಜೊತೆ ಲಿಂಕ್ ಮಾಡ್ತಿದ್ದು, ಇದೇನಾ ಸನಾತನ ಧರ್ಮ ಅಂತ ಕಿಡಿಕಾರುತ್ತಿದ್ದಾರೆ.
ಉದಯನಿಧಿ ‘ಸನಾತನ’ ಹೇಳಿಕೆಗೆ ದೇಶದೆಲ್ಲೆಡೆ ಆಕ್ರೋಶ!
ಉದಯನಿಧಿ ಹೇಳಿಕೆ ಬಗ್ಗೆ ಶ್ರೀರಾಮಸೇನೆ ರಾಷ್ಟ್ರೀಯ ಗೌರಾವಾಧ್ಯಕ್ಷ ಆಂದೋಲನ ಸಿದ್ಧಲಿಂಗ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ತಾಕತ್ತು, ಧಮ್ಮು ಇದ್ರೆ ಅನ್ಯ ಧರ್ಮದ ಬಗ್ಗೆ ಮಾತಾಡಲಿ ಸವಾಲು ಹಾಕಿದ್ದಾರೆ. ಇನ್ನೂ ಉದಯ ನಿಧಿ ಸ್ಟಾಲಿನ್ ಅವರು ಸಮಾಜದಲ್ಲಿ ಇಂತಹ ವಿಷ ಬೀಜವನ್ನು ಬಿತ್ತುವುದು ಸರಿಯಲ್ಲ ಅಂತ ಪೇಜಾವರ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಮಾತನಾಡುವ ಭರದಲ್ಲಿ ಉದಯನಿಧಿ ಬಾಯಿಂದ ಹೊರಬಿದ್ದ ಶಬ್ದಗಳು ದೇಶವ್ಯಾಪಿ ಕಿಚ್ಚುಹೊತ್ತಿಸಿದೆ. ಇವರೆಲ್ಲಾ ಬದಲಾಗೋದು ಯಾವಾಗ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ತಾರಕ್ಕೇರಿದೆ. ಉದಯನಿಧಿ ಹೇಳಿಕೆ ಡಿಎಂಕೆ ಸರ್ಕಾರ ಬುಡವನ್ನ ಅಲುಗಾಡಿಸುವ ಸೂಚನೆ ಸಹ ಸಿಕ್ಕಿದ್ದು, ಪಕ್ಷದ ನಾಯಕರಿಗೆ ಭಾರೀ ಮುಖಭಂಗವನ್ನು ಉಂಟುಮಾಡಿದೆ.
ಕ್ರಮಕ್ಕೆ ಆಗ್ರಹಿಸಿ ನ್ಯಾಯಮೂರ್ತಿಗಳಿಂದಲೂ ಪತ್ರ
ಇನ್ನೊಂದೆಡೆ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಜೆಐಗೆ ಪತ್ರ ಬರೆಯಲಾಗಿದೆ. 14 ನಿವೃತ್ತ ನ್ಯಾಯಮೂರ್ತಿಗಳಿಂದ ಪತ್ರ ರವಾನೆ ಆಗಿದೆ. ಜೊತೆಗೆ 262 ಮಂದಿ ಸಹಿ ಹಾಕಿ ಪತ್ರ ರವಾನೆ ಮಾಡಿದ್ದಾರೆ. ವಿವಿಧ ವಲಯಗಳಿಗೆ ಸೇರಿದ 262 ಗಣ್ಯರು ಮನವಿ ಮಾಡಿದ್ದು, 20 ಮಂದಿ ರಾಯಭಾರಿಗಳು, 130 ನಿವೃತ್ತ ಅಧಿಕಾರಿಗಳು ಹಾಗೂ 118 ಸಶಸ್ತ್ರ ಪಡೆ ಅಧಿಕಾರಿಗಳು ಸಹಿ ಹಾಕಿದ್ದಾರೆ.
ಉದಯನಿಧಿ ಹೇಳಿಕೆ ಸಾಮಾನ್ಯ ಭಾರತೀಯ ನಾಗರಿಕರು, ಅದರಲ್ಲಿಯೂ ಸನಾತನ ಧರ್ಮದಲ್ಲಿ ನಂಬಿಕೆ ಇರಿಸಿಕೊಂಡವರಿಗೆ ತಲ್ಲಣ ಉಂಟು ಮಾಡುತ್ತದೆ. ಈ ಮಾತುಗಳು ಕೋಮು ಸೌಹಾರ್ದಕ್ಕೆ ಧಕ್ಕೆ ತರಬಹುದು. ಜೊತೆಗೆ ಮತೀಯ ಹಿಂಸಾಚಾರಕ್ಕೂ ಕುಮ್ಮಕ್ಕು ನೀಡಬಹುದು. ಹೀಗಾಗಿ ಕ್ರಮ ತೆಗೆದುಕೊಳ್ಳಿ ಎಂದು ಪತ್ರ ಬರೆಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ