ನೆಚ್ಚಿನ ಸ್ಥಳಕ್ಕೆ ಭೇಟಿಕೊಟ್ಟ ನಟ ಡಾಲಿ ಧನಂಜಯ್
ಶೂಟಿಂಗ್ನಿಂದ ಬಿಡುವು.. ಫುಲ್ ಟೈಮ್ ಪಾಸ್..!
ತಂದೆ, ಸ್ನೇಹಿತರ ಜೊತೆ ಡಾಲಿ ಫೋಟೋಗೆ ಫೋಸ್
ಸ್ಯಾಂಡಲ್ವುಡ್ನ ಡಾಲಿ ಧನಂಜಯ್ ಸದ್ಯ ಸಿನಿಮಾ ಶೂಟಿಂಗ್ನಲ್ಲಿ ಫುಲ್ ಬ್ಯುಸಿಯಾಗಿರುವ ನಟ. ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗ ಹೊಂದಿರುವ ಇವರು, ನವರಸ ನಾಯಕ ನಟ ಜಗ್ಗೇಶ್ ಜೊತೆ ತೋತಾಪುರಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಡಾಲಿ ಇದೇ ಸಿನಿಮಾದ ಭಾಗ- 2ರಲ್ಲೂ ಇದ್ದಾರೆ.
ಈಗಾಗಲೇ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಸದ್ಯ ಇದೆಲ್ಲದರ ನಡುವೆ ನೆಚ್ಚಿನ ಸ್ಥಳಕ್ಕೆ ಡಾಲಿ ತಮ್ಮ ಅಪ್ಪ ಹಾಗೂ ಸ್ನೇಹಿತರೊಂದಿಗೆ ಭೇಟಿಕೊಟ್ಟಿದ್ದಾರೆ.
ಹೌದು, ಧನಂಜಯ್ ಸಿನಿಮಾ ಕೆಲಸಗಳಿಂದ ಬಿಡುವು ಪಡೆದುಕೊಂಡು ತನ್ನ ಹುಟ್ಟೂರಿನಲ್ಲಿ ಟೈಮ್ ಪಾಸ್ ಮಾಡ್ತಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಫೋಟೋಗಳನ್ನು ಶೇರ್ ಮಾಡಿರುವ ಡಾಲಿ ಧನಂಜಯ್, ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನಾನು ಚಿಕ್ಕವನಿದ್ದಾಗ ಆಡಿ ಬೆಳೆದ ಜಾಗ ಈ ಅರಸೀಕೆರೆಯ ಯಾದಾಪುರದ ಶ್ರೀಜೇನುಕಲ್ಲು ಸಿದ್ದಪ್ಪನ ಬೆಟ್ಟ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಶ್ರೀಜೇನುಕಲ್ಲು ಸಿದ್ದಪ್ಪ ದೇವರ ಆಶೀರ್ವಾದ ಪಡೆದಿರುವ ಡಾಲಿಗೆ ದೇವಾಲಯದ ಪೂಜಾರಿ ಊವಿನ ಹಾರ ಹಾಕಿ ಶುಭ ಹಾರೈಸಿದ್ದಾರೆ. ಕೆಲ ಸಮಯ ಬೆಟ್ಟದಲ್ಲೇ ಕಳೆದಿದ್ದಾರೆ. ಬಳಿಕ ತಂದೆ ಹಾಗೂ ಸ್ನೇಹಿತರೊಂದಿಗೆ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ. ಇನ್ನು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿ ಬರುತ್ತಿರುವ ಟಗರು ಪಲ್ಯ ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದ್ದು ಆಗಸ್ಟ್ 7 ರಂದು ಫಸ್ಟ್ ಲುಕ್ ರಿಲೀಸ್ ಮಾಡಲಾಗುವುದು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
ಚಿಕ್ಕಂದಿನಿಂದ ಆಡಿ ಬೆಳೆದ ಜಾಗ, ನಮ್ಮ ಅರಸೀಕೆರೆಯ, ಯಾದಾಪುರದ ಶ್ರೀ ಜೇನುಕಲ್ಲು ಸಿದ್ದಪ್ಪನ ಬೆಟ್ಟದಲ್ಲಿ🙏 pic.twitter.com/MXLRM5ByVH
— Dhananjaya (@Dhananjayaka) August 4, 2023