newsfirstkannada.com

×

ಡಾರ್ಲಿಂಗ್ ಕೃಷ್ಣ ‘ಶುಗರ್ ಫ್ಯಾಕ್ಟರಿ’ಯಿಂದ ಮತ್ತೊಂದು ಸಾಂಗ್ ಔಟ್​.. ಭಾವನೆಗಳ ಬಿಂಬಿಸಿದ ‘ಹಣೆಬರಹ’

Share :

Published November 3, 2023 at 11:26am

    ಈಗಾಗಲೇ ಚಿತ್ರದ ಟೀಸರ್​, ಟ್ರೈಲರ್​ನಿಂದ ಡಾರ್ಲಿಂಗ್ ಕೃಷ್ಣ ಹವಾ

    ಹಣೆಬರಹ ಹಾಡನ್ನು ಇಂಪಾಗಿ ಹಾಡಿರುವ ಅರ್ಮಾನ್ ಮಲಿಕ್

    ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣಗೆ ರಾಧೆಯರು ಆಗಿದ್ದು ಯಾಱರು.?

ದೀಪಕ್ ಅರಸ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯಿಸಿರುವ ‘ಶುಗರ್ ಫ್ಯಾಕ್ಟರಿ’ ಸಿನಿಮಾ ಈಗಾಗಲೇ ಟೀಸರ್​, ಟ್ರೈಲರ್​ನಿಂದ ಅಭಿಮಾನಿಗಳ ಮನ ಗೆದ್ದಿದೆ. ಈ ಸಿನಿಮಾದ ಸಾಂಗ್ ಕೂಡ ರಿಲೀಸ್ ಆಗಿದ್ದು ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.  ​

ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಡಾರ್ಲಿಂಗ್ ಕೃಷ್ಣರ ‘ಶುಗರ್ ಫ್ಯಾಕ್ಟರಿ’ ಸಿನಿಮಾಕ್ಕೆ ರಾಘವೇಂದ್ರ ಕಾಮತ್ ‘ಹಣೆಬರಹ’ ಎಂದು ಆರಂಭವಾಗುವ ಹಾಡನ್ನು ಬರೆದಿದ್ದಾರೆ. ಭಾವನೆಗಳನ್ನು ಬಿಂಬಿಸುವ ಈ ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲಿಕ್ ಇಂಪಾಗಿ ಹಾಡಿದ್ದು ಕಬೀರ್ ರಫಿ ಕೈಚಳಕದ ಸಂಗೀತವಿದೆ. ಆನಂದ್ ಆಡಿಯೋ ಮೂಲಕ ರಿಲೀಸ್ ಆಗಿರುವ ಸಾಂಗ್ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಶುಗರ್ ಫ್ಯಾಕ್ಟರಿ ಚಿತ್ರದ ಸಾಂಗ್ಸ್​, ಟೀಸರ್ ಹಾಗೂ ಟ್ರೇಲರ್ ಅಭಿಮಾನಿಗಳ ಮನ ಗೆದ್ದಿದ್ದು ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ‌.

ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತದ ಶುಗರ್​ ಫ್ಯಾಕ್ಟರಿ ಮೂವಿ ನವೆಂಬರ್ 24 ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಡಾರ್ಲಿಂಗ್ ಕೃಷ್ಣ ಈವರೆಗೂ ಅಭಿನಯಿಸಿರುವ ಮೂವಿಗಳಿಗಿಂತ ಶುಗರ್ ಫ್ಯಾಕ್ಟರಿ ಸಿನಿಮಾಕ್ಕೆ ಹೆಚ್ಚಿನ ಬಂಡವಾಳ ಹೂಡಲಾಗಿದೆ. ಆರ್.ಗಿರೀಶ್ ನಿರ್ಮಾಣದಲ್ಲಿ ಸಿನಿಮಾ ರೆಡಿಯಾಗಿದ್ದು ಕೃಷ್ಣಗೆ ಜೋಡಿಯಾಗಿ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ನಟಿಸಿದ್ದಾರೆ. ಇನ್ನು ರಂಗಾಯಣ ರಘು ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಾರ್ಲಿಂಗ್ ಕೃಷ್ಣ ‘ಶುಗರ್ ಫ್ಯಾಕ್ಟರಿ’ಯಿಂದ ಮತ್ತೊಂದು ಸಾಂಗ್ ಔಟ್​.. ಭಾವನೆಗಳ ಬಿಂಬಿಸಿದ ‘ಹಣೆಬರಹ’

https://newsfirstlive.com/wp-content/uploads/2023/11/DARLING_KRISHNA_1.jpg

Load More