ಸಂಕಷ್ಟಕ್ಕೆ ಸಿಲುಕಿದ ಅಭಿಮಾನಿಗೆ ನಟ ದರ್ಶನ್ ಸಹಾಯ ಹಸ್ತ
ಚಿಕಿತ್ಸೆಯ ವೆಚ್ಚವನ್ನ ನೀಡಿ, ಧೈರ್ಯ ತುಂಬಿದ್ದಾರೆ ಚಾಲೆಂಜಿಂಗ್ ಸ್ಟಾರ್
ಎರಡೂ ಕಿಡ್ನಿ ಫೇಲ್ಯೂರ್ ಆಗಿದ್ದ ಅಭಿಮಾನಿ ‘ದಚ್ಚು’ ಬಗ್ಗೆ ಹೇಳಿದ್ದೇನು?
ಬೆಂಗಳೂರು: ಎರಡೂ ಕಿಡ್ನಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಅಭಿಮಾನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಹಸ್ತ ನೀಡಿದ್ದಾರೆ. ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನೋ ಹಾಗೇ ನಟ ದರ್ಶನ್ ಅವರು ಸಂಕಷ್ಟಕ್ಕೆ ಸಿಲುಕಿರುವ ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ.
ಎಷ್ಟೋ ಅಭಿಮಾನಿಗಳು ಸಾಯುವ ಮೊದಲು ನಾನು ನೆಚ್ಚಿನ ನಟನನ್ನು ಭೇಟಿ ಮಾಡಬೇಕು. ಅವರ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂದು ಸಾಕಷ್ಟು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಹೀಗೆ ನಟ ದರ್ಶನ್ ಅವರ ಅಪ್ಪಟ ಅಭಿಮಾನಿಯೊಬ್ಬರು ನೆಚ್ಚಿನ ಹೀರೋನನ್ನ ಭೇಟಿಯಾಗಿದ್ದಾರೆ. ತನ್ನ ಎರಡು ಕಿಡ್ನಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಅಭಿಮಾನಿಯೊಬ್ಬರಿಗೆ ಇತ್ತೀಚೆಗೆ ನಟ ದರ್ಶನ್ ಸಹಾಯ ಹಸ್ತ ನೀಡಿದ್ದಾರೆ. ರಕ್ಷಾಬಂಧನ ಸಂಭ್ರಮದ ವೇಳೆ ಆದರ್ಶ್ ಎಂಬ ಅಭಿಮಾನಿಯೊಬ್ಬರು ತಮ್ಮ ಕಷ್ಟವನ್ನು ನೆಚ್ಚಿನ ನಟನ ಬಳಿ ಕೇಳಿಕೊಂಡಿದ್ದರು. ಕೂಡಲೇ ಆತನಿಗೆ ದರ್ಶನ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಅಭಿಮಾನಿ ಆದರ್ಶ್ ಅವರು ವಿಡಿಯೋ ಮಾಡಿದ್ದಾರೆ. ವಿಡಿಯೋವನ್ನು ನಟ ದರ್ಶನ್ ಅಭಿಮಾನಿ ಸಾಮಾಜಿಕ ಜಾಲತಾಣದವಾದ X ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
LIVING GOD @dasadarshan BOSS🙏🏻#Kaatera #BossOfSandalwood #Dboss pic.twitter.com/aKSDD4SAQC
— K A L K I (@ItsKalkiTweets) September 7, 2023
ದರ್ಶನ್ ಅಭಿಮಾನಿ ಆದರ್ಶ್ ಹೇಳಿದ್ದೇನು..?
ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಆದರ್ಶ್. ನಾನು ದರ್ಶನ್ ಅವರ ಅಪ್ಪಟ ಅಭಿಮಾನಿ. ನನ್ನ ಎರಡೂ ಕಿಡ್ನಿ ಫೇಲ್ಯೂರ್ ಆಗಿತ್ತು. ದರ್ಶನ್ ಸರ್‌ನ ಭೇಟಿ ಮಾಡುವ ಆಸೆ ಇತ್ತು. ನಾಗರಾಜ್ ಅಣ್ಣನನ್ನು ಕೇಳಿಕೊಂಡೆ. ಅವರು ಭೇಟಿ ಮಾಡಿಸಲು ಸಹಾಯ ಮಾಡಿದರು. ದರ್ಶನ್ ಸರ್‌ಗೂ ಗೋವಿಂದಣ್ಣನಿಗೂ ಧನ್ಯವಾದ ಎಂದು ಆದರ್ಶ್ ಹೇಳಿದ್ದಾರೆ. ದರ್ಶನ್ ಅಭಿಮಾನಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ