newsfirstkannada.com

ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆಯುತ್ತಿದ್ದ ದರ್ಶನ್​ ಸ್ಟೇಷನ್​ ದಿನಚರಿ ಕೇಳಿದ್ರೆ ಶಾಕ್ ಆಗ್ತೀರಾ? ​​

Share :

Published June 19, 2024 at 9:37pm

  ಸ್ನಾನ ಇಲ್ಲ, ವರ್ಕೌಟ್​​ ಇಲ್ಲ ಎರಡು ಹೊತ್ತು ಅನ್ನ ಸಾಂಬರೇ ಗತಿ

  ದರ್ಶನ್​​​​ಗೆ ಮಲಗಲು ದಿಂಬನ್ನೂ ಕೊಡದ ಪೊಲೀಸ್ ಅಧಿಕಾರಿಗಳು

  ಪೊಲೀಸ್​​​ ಟ್ರೀಟ್ ಕಂಡು ಕರುನಾಡ ದಾಸ್​​​​​ಗೆ ಪಶ್ಚಾತ್ತಾಪದ ಟೆನ್ಶನ್​​

ಬೆಂಗಳೂರು: ದರ್ಶನ್​ ಅಲಿಯಾಸ್​ ಡಿಬಾಸ್. ಪೊಲೀಸ್​ ರಿಮ್ಯಾಂಡ್​ ಅರ್ಜಿಯಲ್ಲಿ ಥೇಟ್​​ ರೌಡಿ ಹೆಸರಿನ ರೀತಿ ನಮೂದಾಗಿದೆ. 9 ದಿನಗಳಿಂದ ಲಾಕಪ್​ನಲ್ಲಿರುವ ದರ್ಶನ್​​, ಫುಲ್​​ ಟೆನ್ಶನ್​​ನಲ್ಲಿದ್ದಾರೆ. ಅದಕ್ಕೆ ಕಾರಣ ಠಾಣೆಯಲ್ಲಿ ವಿಐಪಿ ಟ್ರೀಟ್​ಮೆಂಟ್​​ ಇಲ್ಲ ಅನ್ನೋದು.

ದಾಸನ ದಿನಚರಿ ಹೇಗಿದೆ?

ಬೆಳಗ್ಗೆ 6 ಗಂಟೆಗೆ ಎದ್ದೇಳಬೇಕು. ಠಾಣೆಯ ಎಲ್ಲರೂ ಬಳಸುವ ಶೌಚಾಲಯವನ್ನೆ ಬಳಸಬೇಕು. ಜಿಮ್ ಇಲ್ಲ. ಸ್ನಾನ ಕೂಡ ಪ್ರತಿ ದಿನ ಇಲ್ಲ. ಇಡ್ಲಿ ವಡೆ ತಿನ್ನಬೇಕು. ನೆಲದ ಮೇಲೆ ಕೂರವಂತಾಗಿದೆ. ಇನ್ನು ಮಧ್ಯಾಹ್ನ ಅನ್ನ ಸಾಂಬರ್ ಸವಿಯಬೇಕು. ರಾತ್ರಿಗೂ ಅದೇ ಅನ್ನ ಸಾಂಬಾರ್. ಲಾಕಪ್​​​ನಲ್ಲಿ ಮಲಗಲು ಕೂಡ ಯಾವುದೇ ಸವಲತ್ತು ಕೊಡ್ತಿಲ್ಲ. ಮಲಗಲು ದಿಂಬನ್ನೂ ಕೊಟ್ಟಿಲ್ಲ. ತನ್ನ ಕೈಯನ್ನೇ ದಿಂಬನ್ನಾಗಿ ಮಾಡ್ಕೊಂಡು ನಿದ್ದೆ ಹೋಗ್ತಿದ್ದಾರೆ. ಬೇರೆ ಎಲ್ಲಾ ಹೊತ್ತು ಲಾಕಪ್​ನಲ್ಲೇ ಕಳೆಯುತ್ತಿರುವ ದರ್ಶನ್, ವಿಚಾರಣೆ ವೇಳೆ ಮಾತ್ರ ಲಾಕಪ್​ನಿಂದ ಕರೆದು ತರಲಾಗ್ತಿದೆ.

ಜೂನ್ 11, ಮಂಗಳವಾರ ಬಂಧನವಾಗಿದ್ದ ದರ್ಶನ್, ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಒಂಭತ್ತು ದಿನ ಕಳೆದಂತಾಗಿದೆ. ಸಿನಿಮಾ, ಶೂಟಿಂಗ್ ಅಂತಾ ಓಡಾಡ್ತಿದ್ದ ನಟನಿಗೆ ಈಗ ಲಾಕಪ್​​​ನಲ್ಲೆ ವಾಸ ಆಗಿದೆ. ನಾಳೆ ದರ್ಶನ್ ಅಂಡ್​ ಗ್ಯಾಂಗ್​ನ ಪೊಲೀಸ್ ಕಸ್ಟಡಿ ಅಂತ್ಯ ಆಗ್ತಿದೆ. ಹಾಗಾಗಿ ನಾಳೆ ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. ತನಿಖೆ ಪೂರ್ಣಗೊಂಡ ಹಿನ್ನೆಲೆ, ಪುನಃ ಕಸ್ಟಡಿಗೆ ಕೇಳುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಬಹುತೇಕ ದರ್ಶನ್, ಪವಿತ್ರ ಸೇರಿ ಎಲ್ಲರು ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆಯುತ್ತಿದ್ದ ದರ್ಶನ್​ ಸ್ಟೇಷನ್​ ದಿನಚರಿ ಕೇಳಿದ್ರೆ ಶಾಕ್ ಆಗ್ತೀರಾ? ​​

https://newsfirstlive.com/wp-content/uploads/2024/06/dboss32.jpg

Load More