newsfirstkannada.com

ಒಗ್ಗದ ಜೈಲೂಟ.. ಕಾಫಿ ಕುಡಿಯಲು ಒದ್ದಾಟ; ಕೈದಿ ಜೊತೆ ಮೌನಕ್ಕೆ ಶರಣಾದ ದರ್ಶನ್; ಜೈಲ್​ ಡೈರಿ ಹೇಗಿದೆ?

Share :

Published June 23, 2024 at 4:14pm

Update June 23, 2024 at 4:20pm

  ಜೀವ ತೆಗೆದು 4 ಗೋಡೆಗಳ ಮಧ್ಯೆ ಕಂಬಿ ಎಣಿಸುತ್ತಿರೋ ಡಿ ಗ್ಯಾಂಗ್​!

  2ನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿ ಮೌನಕ್ಕೆ ಶರಣಾದ ನಟ ದರ್ಶನ್

  ಕೆಲವು ಭದ್ರತಾ ದೃಷ್ಟಿಯಿಂದಾಗಿ A2 ಆರೋಪಿ ದರ್ಶನ್​ಗೆ ಪ್ರತ್ಯೇಕ ಸೆಲ್ ವ್ಯವಸ್ಥೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್​​ ಸೇರಿ ಇಡೀ ಗ್ಯಾಂಗ್ ಈಗ ಜೈಲು ಪಾಲಾಗಿದೆ. ಮೂರು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ಬಳಿಕ ನಿನ್ನೆ ಕೋರ್ಟ್​ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ನಟ ದರ್ಶನ್​, ಪವಿತ್ರ ಗೌಡ ಸೇರಿ ಒಟ್ಟು 17 ಆರೋಪಿಗಳು ಕೊಲೆ ಕೇಸ್ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್​ನಿಂದ ಸೀಕ್ರೆಟ್ ಮೆಂಟೇನ್.. ಈ ಪ್ರಶ್ನೆಗಳಿಗೆ ಇನ್ನೂ ಪೊಲೀಸರಿಗೆ ಉತ್ತರ ಸಿಕ್ಕಿಲ್ಲ

ನಟ ದರ್ಶನ್​ 13 ವರ್ಷಗಳ ನಂತರ ಮತ್ತೆ ಪರಪ್ಪನ ಅಗ್ರಹಾರಕ್ಕೆ ಹೋಗಿದ್ದಾರೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿ 28 ದಿನಗಳ ಕಾಲ ಪರಪ್ಪನ ಅಗ್ರಹಾರಕ್ಕೆ ಸೇರಿದ್ದರು. ಸದ್ಯ ಜೈಲಿನಲ್ಲಿರೋ ದರ್ಶನ್​ಗೆ ವಿಚಾರಣಾಧೀನ ಖೈದಿ 6106 ನಂಬರ್​ ಕೊಟ್ಟಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ್ದ. ಹೀಗಾಗಿ ಇದೇ ಕೋಪದಲ್ಲಿ ದರ್ಶನ್​ ಮತ್ತು ಸಹಚರರು ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ್ದಾರೆ ಎಂಬ ಆರೋಪ ಇತ್ತು. ಇದೇ ಪ್ರಕರಣವನ್ನು ಕೈಗೆತ್ತಿಕೊಂಡ ಅನ್ನಪೂರ್ಣೇಶ್ವರಿ ನಗರ ಪೊಲೀಸರು​ ಈ ಕೊಲೆ ಹಿಂದಿನ ಅಸಲಿ ಸತ್ಯವನ್ನು ಬೆಳಕಿಗೆ ತಂದಿದ್ದರು.

ಸದ್ಯ ಈ ಕೊಲೆ ಸಂಬಂಧ ದರ್ಶನ್ ಅಂಡ್​ ಗ್ಯಾಂಗ್​ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇನ್ನು, ನಿನ್ನೆ ಸಂಜೆಯಿಂದಲೂ ನಟ ದರ್ಶನ್ ಜೈಲಿನಲ್ಲೇ ಇದ್ದಾರೆ. ನಿನ್ನೆ ರಾತ್ರಿ, ಇವತ್ತು ಬೆಳಗ್ಗೆ ಹಾಗೂ ಮಧ್ಯಾಹ್ನ ಜೈಲಿನಲ್ಲಿ ಮಾಡುವ ಆಹಾರವನ್ನೇ ನಟ ಸೇವಿಸುತ್ತಿದ್ದಾರೆ. ಭದ್ರತಾ ದೃಷ್ಟಿಯಿಂದಾಗಿ ದರ್ಶನ್​ಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಜೈಲಿನ ಸೆಕ್ಯೂರಿಟಿ ರೂಂ. ನಂ. 3ರಲ್ಲಿ ನಟ ದರ್ಶನ್ ಹಾಗೂ ವಿನಯ್ ಕಾಲ ಕಳೆಯುತ್ತಿದ್ದಾರೆ. ಜೈಲಿನ ಮೆನುನಲ್ಲಿರುವಂತೆ ಆರೋಪಿಗಳಿಗೆ ಆಹಾರ ನೀಡಲಾಗುತ್ತಿದೆ.

ನಟ ದರ್ಶನ್‌ಗೆ ಒಗ್ಗಟ ಜೈಲೂಟ!
ನಿನ್ನೆ ಸಂಜೆಯೇ ಸೆಂಟ್ರಲ್ ಜೈಲು ಸೇರಿದ್ದ ನಟ ದರ್ಶನ್ ಗ್ಯಾಂಗ್‌ಗೆ ರಾತ್ರಿ ಜೈಲೂಟ ನೀಡಲಾಗಿತ್ತು. ಇಷ್ಟು ದಿನ ಸರಿಯಾಗಿ ಆಹಾರ ಸೇವಿಸದೆ ಬಳಲಿದ್ದ ದರ್ಶನ್ ಅವರು ಮುದ್ದೆ, ಚಪಾತಿ, ಸಾಂಬಾರ್ ಮತ್ತು ಮಜ್ಜಿಗೆ ಸೇವಿಸಿದ್ದರು. ತಡರಾತ್ರಿವರೆಗೂ ಕುಳಿತಲ್ಲೇ ಮಂಕಾಗಿದ್ದರು ಎನ್ನಲಾಗಿದೆ.

ನಿನ್ನೆ ರಾತ್ರಿ 11:30ರ ಸುಮಾರಿಗೆ ನಿದ್ರಿಸಿದ್ದ ದರ್ಶನ್ ಅವರು ಬೆಳಗ್ಗೆ ಕಾಫಿ ಕುಡಿಯೋದಕ್ಕೆ ಬೇಡ ಎಂದಿದ್ದಾರೆ. ಕಾಫಿ ಸೇವಿಸದೆ ನ್ಯೂಸ್ ಪೇಪರ್ ಓದದೆ ಕೊಠಡಿಯಲ್ಲಿ ಸಹಕೈದಿ ವಿನಯ್ ಜೊತೆ ಸೆರೆವಾಸ ಅನುಭವಿಸುತ್ತಿದ್ದಾರೆ.

ಮತ್ತೊಂದು ಕಡೆ ಆರೋಪಿ ದರ್ಶನ್​ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರಂತೆ. ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದ ದರ್ಶನ್​​ ನಾಳೆ ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ದರ್ಶನ್​​ ವಕೀಲರು ಆದೇಶದ ಸರ್ಟಿಫೈಡ್ ಕಾಪಿ ಅಪ್ಲೇ ಮಾಡಿದ್ದಾರೆ. ಸರ್ಟಿಫೈಡ್ ಕಾಪಿ ಸಿಗುತ್ತಿದ್ದಂತೆ ಅರ್ಜಿ ಸಲ್ಲಿಕೆಗೆ ಸಿದ್ಧತೆ ಮಾಡಲಾಗುತ್ತದೆ. ಕೇಸ್ ಲಿಸ್ಟ್ ಬಂದ ತಕ್ಷಣ ಕೋರ್ಟ್​ನಲ್ಲಿ​ ಅರ್ಜಿ ವಿಚಾರಣೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಗ್ಗದ ಜೈಲೂಟ.. ಕಾಫಿ ಕುಡಿಯಲು ಒದ್ದಾಟ; ಕೈದಿ ಜೊತೆ ಮೌನಕ್ಕೆ ಶರಣಾದ ದರ್ಶನ್; ಜೈಲ್​ ಡೈರಿ ಹೇಗಿದೆ?

https://newsfirstlive.com/wp-content/uploads/2024/06/darshan47.jpg

Load More