newsfirstkannada.com

ಸ್ಯಾಂಡಲ್‌ವುಡ್​​ನ ಪ್ರಚಂಡ ಕುಳ್ಳ ದ್ವಾರಕೀಶ್‌ ಅವರ ಮೊದಲ ಸಿನಿಮಾ ಯಾವುದು?

Share :

Published April 16, 2024 at 12:51pm

  ಅಣ್ಣಾವ್ರ ಸಿನಿಮಾ ಮಾಡಿದ ಮೇಲೆ ದ್ವಾರಕೀಶ್‌ ಲೈಫ್ ಚೇಂಜ್

  ದ್ವಾರಕೀಶ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಯಾವ ವರ್ಷ?

  ಪೋಷಕ ನಟನಾಗಿ ಈವರೆಗೆ ನೂರಾರು ಚಿತ್ರಗಳಲ್ಲಿ ಅಭಿನಯ

ಕರ್ನಾಟಕದ ಕುಳ್ಳ ಎಂದೇ ಖ್ಯಾತಿ ಪಡೆದಿದ್ದ ದ್ವಾರಕೀಶ್ ಅವರು ತಮ್ಮ ನಟನೆ ಮೂಲಕ ಕನ್ನಡದ ಜನರನ್ನು ರಂಜಿಸಿದ್ದರು. ನಟರಾಗಿ ಅಷ್ಟೇ ಅಲ್ಲದೇ, ನಿರ್ಮಾಪಕರಾಗಿ, ಡೈರೆಕ್ಟರ್ ಕೂಡ ಆಗಿದ್ದ ಅವರು ಸಿನಿಮಾದಲ್ಲಿ ಎಲ್ಲವನ್ನು ಬಲ್ಲವರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಮೊದಲ ಸಿನಿಮಾ ಯಾವುದು ಆಗಿತ್ತು?.

ಕರ್ನಾಟಕದ ಪ್ರಚಂಡ ಕುಳ್ಳ ದ್ವಾರಕೀಶ್ ಅವರು 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಹಾಸ್ಯದಿಂದ ಕರುನಾಡಿನ ಜನರನ್ನ ನಕ್ಕು ನಲಿಸಿದ್ದಾರೆ.

ಹುಣಸೂರು ಕೃಷ್ಣಮೂರ್ತಿಯವರು ವೀರ ಸಂಕಲ್ಪ ಸಿನಿಮಾವನ್ನು ನಿರ್ದೇಶನದ ಜೊತೆಗೆ ಬಂಡವಾಳವನ್ನು ಹೂಡಿದ್ದರು. ಈ ಸಿನಿಮಾದಲ್ಲಿ ದ್ವಾರಕೀಶ್, ಸೀತಾರಾಮ್, ಬಿಎಂ ವೆಂಕಟೇಶ್ ಹಾಗೂ ಕೃಷ್ಣಮೂರ್ತಿಯವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಜಯನಗರ ಸಾಮ್ರಾಜ್ಯದ ಕಥೆಯ ತಿರುಳನ್ನು ಈ ಸಿನಿಮಾ ಹೊಂದಿತ್ತು. 

ಡಾ.ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾವನ್ನು ದ್ವಾರಕೀಶ್ ಅವರು 1969ರಲ್ಲಿ ನಿರ್ಮಾಣ ಮಾಡಿದ್ದರು. ಇಲ್ಲಿಂದಲೇ ಅವರು ಸ್ವತಂತ್ರವಾಗಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದರು. ಮೇಯರ್ ಮುತ್ತಣ್ಣ ಬಾಕ್ಸ್​ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿದ್ದೆ ಆಗಿದ್ದು ದ್ವಾರಕೀಶ್ ಗಲ್ಲಾ ಪೆಟ್ಟಿಗೆ ತುಂಬಿ ಹೋಗಿತ್ತು. ಈ ಸಿನಿಮಾದ ನಂತರ ಅವರು ಹಲವಾರು ಸಿನಿಮಾಗಳನ್ನು ನಿರ್ಮಿಸಿ ಯಶಸ್ಸು ಗಳಿಸಿದರು. ಡಾ.ರಾಜ್‌ ಜೊತೆಗಿನ ಸಿನಿಮಾ ಯಶಸ್ಸಿನ ಜೊತೆಗೆ ಇನ್ನಷ್ಟು ಖ್ಯಾತಿ ತಂದು ಕೊಟ್ಟಿತು. ಹೀಗಾಗಿಯೇ ಸಿನಿಮಾ ರಂಗದಲ್ಲಿ 40ಕ್ಕೂ ಹೆಚ್ಚು ಚಿತ್ರಗಳನ್ನು ದ್ವಾರಕೀಶ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಇಂಜಿನಿಯರಿಂಗ್ ಮುಗಿಸಿದ್ದ ದ್ವಾರಕೀಶ್ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದೇಗೆ?

ಇದನ್ನೂ ಓದಿ: Breaking: ಕನ್ನಡ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ

ಸ್ಯಾಂಡಲ್‌ವುಡ್ ಸಿನಿಮಾವನ್ನು ವಿದೇಶದಲ್ಲಿ ನಿರ್ಮಾಣ ಮಾಡಿದ ಮೊದಲ ನಿರ್ಮಾಪಕ ದ್ವಾರಕೀಶ್ ಆಗಿದ್ದಾರೆ. ವಿಷ್ಣುವರ್ಧನ್ ಜೊತೆ ತಾವೇ ನಟಿಸಿದ ರಾಜ ಕುಳ್ಳ ಸಿನಿಮಾವನ್ನು ಸಿಂಗಾಪುರದಲ್ಲಿ ಚಿತ್ರೀಕರಿಸಿದ ಮೊದಲ ನಿರ್ಮಾಪಕರು ದ್ವಾರಕೀಶ್ ಆಗಿದ್ದಾರೆ. ರಾಜ ಕುಳ್ಳ ಸಿನಿಮಾವು 1978ರಲ್ಲಿ ರಿಲೀಸ್ ಆಗಿತ್ತು. ಚಿತ್ರದಲ್ಲಿ ನಟ ಡಾ.ವಿಷ್ಣುವರ್ಧನ್, ಮಂಜುಳಾ ಪ್ರಮುಖ ಪಾತ್ರಗಳಲ್ಲಿ ಅಭಿನಯ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಯಾಂಡಲ್‌ವುಡ್​​ನ ಪ್ರಚಂಡ ಕುಳ್ಳ ದ್ವಾರಕೀಶ್‌ ಅವರ ಮೊದಲ ಸಿನಿಮಾ ಯಾವುದು?

https://newsfirstlive.com/wp-content/uploads/2024/04/Dwarakish_9.jpg

Load More