newsfirstkannada.com

ಕ್ಯಾಪ್ಟನ್ ಗೆಟಪ್‌ನಲ್ಲಿ ಮಿಂಚಿದ ಶಿವಣ್ಣ, ರಜನಿಕಾಂತ್ ‘ಜೈಲರ್’ ಇವೆಂಟ್​ಗೆ ಮಹಾ ವೇದಿಕೆ ಸಿದ್ಧ; ಇಲ್ಲಿವೆ ಟಾಪ್​​ 5 ಸಿನಿ ಸುದ್ದಿಗಳು

Share :

22-07-2023

  'ಕಲ್ಕಿ' ಚಿತ್ರದ ಫಸ್ಟ್​ ಗ್ಲಿಂಪ್ಸ್​ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ S.S​​ ರಾಜಮೌಳಿ

  ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ 'ಜೈಲರ್' ಚಿತ್ರಕ್ಕೆ ಮಹಾ ವೇದಿಕೆ ಸಿದ್ಧ

  ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘UI’ ಕೊನೇ ಹಂತದ ಚಿತ್ರೀಕರಣ ಶುರು

‘UI’ ಕೊನೆ ಹಂತದ ಶೂಟಿಂಗ್ ಶುರು

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡ್ತಿರುವ ಯುಐ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಶುರುವಾಗಿದೆ. ಈ ಶೆಡ್ಯೂಲ್ ಮುಗಿಯುತಿದ್ದಂತೆ ಚಿತ್ರದ ಪೋಸ್ಟ್ ಪ್ರೊಡಕ್ಷನ್​ ಕೆಲಸಕ್ಕೆ ಚಾಲನೆ ಸಿಗಲಿದ್ದು, ಶೀಘ್ರದಲ್ಲೇ ಚಿತ್ರದ ಫಸ್ಟ್​ ಟೀಸರ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. ಇನ್ನು ಕೆಪಿ ಶ್ರೀಕಾಂತ್ ಮತ್ತು ಲಹರಿ ಸಂಸ್ಥೆ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡ್ತಿದ್ದು, ದಸರಾ ವೇಳೆಗೆ ಸಿನಿಮಾನ ರಿಲೀಸ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ ಉಪೇಂದ್ರ.

‘ಜೈಲರ್’ ಮೆಗಾ ಇವೆಂಟ್​ಗೆ ವೇದಿಕೆ ಸಿದ್ಧ

ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಆಗಸ್ಟ್​ 10ಕ್ಕೆ ವರ್ಲ್ಡ್​ವೈಡ್​ ತೆರೆಗೆ ಬರ್ತಿದ್ದು, ಅದಕ್ಕೂ ಮುಂಚೆ ಆಡಿಯೋ ರಿಲೀಸ್ ಕಾರ್ಯಕ್ರಮವನ್ನ ಬಹಳ ಅದ್ಧೂರಿಯಾಗಿ ಮಾಡೋಕೆ ನಿರ್ಧರಿಸಿದೆ. ಜುಲೈ 28ಕ್ಕೆ ಚೆನ್ನೈನ ನೆಹರೂ ಇಂಡೋರ್​ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಜರುಗಿಲಿದ್ದು, ರಜಿನಿಕಾಂತ್ ಜೊತೆ ಮೋಹನ್ ಲಾಲ್, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ಸುನಿಲ್, ರಮ್ಯಾಕೃಷ್ಣ ಸೇರಿ ಇಡೀ ಚಿತ್ರತಂಡ ಭಾಗಿಯಾಗಲಿದೆ.

‘ಕಲ್ಕಿ’ ಮೆಚ್ಚಿದ ರಾಜಮೌಳಿಗೆ ಒಂದು ಪ್ರಶ್ನೆ

ಪ್ರಭಾಸ್​ ನಟನೆಯ ‘ಕಲ್ಕಿ’ ಚಿತ್ರದ ಫಸ್ಟ್​ ಗ್ಲಿಂಪ್ಸ್​ ಬಿಡುಗಡೆಯಾಗಿದ್ದು, ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ. ಕಲ್ಕಿ ಟೀಸರ್​ ಬಗ್ಗೆ ರಾಜಮೌಳಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ನಿರ್ದೇಶಕ ನಾಗ್ ಅಶ್ವಿನ್ ಅವರ ಪ್ರಯತ್ನ ಹಾಗೂ ನಟ ಪ್ರಭಾಸ್​ರ ಪರ್ಫಾಮೆನ್ಸ್​ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನು ಫಸ್ಟ್​ ಗ್ಲಿಂಪ್ಸ್​ ಬಗ್ಗೆ ಪ್ರಶಂಸಿರುವ ರಾಜಮೌಳಿ, ಬಟ್ ರಿಲೀಸ್ ಯಾವಾಗ ಎನ್ನುವ ಪ್ರಶ್ನೆಯನ್ನ ಮುಂದಿಟ್ಟಿದ್ದಾರೆ.

ಕುತೂಹಲ ಹೆಚ್ಚಿಸಿದ ಶಿವಣ್ಣನ ಲುಕ್ 

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಲೇಟೆಸ್ಟ್​​ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕುತೂಹಲ ಹೆಚ್ಚಾಗಿದೆ. ಒಂದ್ಕಡೆ ಸ್ಟೇಷನ್ ಮಾಸ್ಟರ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ರೆ, ಮತ್ತೊಂದಡೆ ಕ್ಯಾಪ್ಟನ್​ ಗೆಟಪ್​ನಲ್ಲಿ ಮಿಂಚಿದ್ದಾರೆ. ಶಿವಣ್ಣ ಅವ್ರ ಫೋಟೋಗಳನ್ನ ನೋಡಿದ ಫ್ಯಾನ್ಸ್​ ಅರೆ ಇದ್ಯಾವ ಚಿತ್ರದ್ದು ಅಂತ ಕನ್​ಫ್ಯೂಸ್ ಆಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಇದು ಆ್ಯಡ್​ ಶೂಟ್​ ಎನ್ನಲಾಗಿದೆ.

ಕಾಶ್ಮೀರಿ ಫೈಲ್ಸ್​: ಅನ್​ರಿಪೋರ್ಟೆಡ್​ ಟೀಸರ್

ಕಳೆದ ವರ್ಷ ತೆರೆಕಂಡು ಪ್ಯಾನ್ ಇಂಡಿಯಾ ಸೆನ್ಸೇಷನ್ ಸೃಷ್ಟಿಸಿದ್ದ ‘ದಿ ಕಾಶ್ಮೀರಿ ಫೈಲ್ಸ್’​ ಚಿತ್ರದ ಮುಂದುವರಿದ ಭಾಗ ಬರ್ತಿದೆ. ಸದ್ಯ ‘ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್’ ಎನ್ನುವ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾದಲ್ಲಿ ತೋರಿಸಲಾಗದ ಇನ್ನಷ್ಟು ವಿಷಯಗಳನ್ನ ಈ ಚಿತ್ರದಲ್ಲಿ ಸೇರಿಸಲಾಗಿದೆಯಂತೆ. ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಾಗಿ ಮಾಡಿದ ಸಂಶೋಧನೆ, ಘಟನೆಯ ಕುರಿತಾಗಿ ಮಾತನಾಡಿಸಿದವರು ವಿಡಿಯೋ ಮತ್ತು ಆ ಹೊತ್ತಿನ ಕೆಲವು ಮಹತ್ವದ ದಾಖಲೆಗಳನ್ನು ಇದರಲ್ಲಿ ಸೇರಿಸಲಾಗಿದ್ದು, ZEE5 ಒಟಿಟಿಯಲ್ಲಿ ರಿಲೀಸ್ ಮಾಡಲಾಗುವುದಂತೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕ್ಯಾಪ್ಟನ್ ಗೆಟಪ್‌ನಲ್ಲಿ ಮಿಂಚಿದ ಶಿವಣ್ಣ, ರಜನಿಕಾಂತ್ ‘ಜೈಲರ್’ ಇವೆಂಟ್​ಗೆ ಮಹಾ ವೇದಿಕೆ ಸಿದ್ಧ; ಇಲ್ಲಿವೆ ಟಾಪ್​​ 5 ಸಿನಿ ಸುದ್ದಿಗಳು

https://newsfirstlive.com/wp-content/uploads/2023/07/ravichara-3.jpg

Load More