newsfirstkannada.com

Watch: ಮೊಮ್ಮಗನೊಂದಿಗೆ ಸ್ಟೆಪ್ಸ್ ಹಾಕಿದ ನವರಸನಾಯಕ ಜಗ್ಗೇಶ್.. ಇದು ಯಾವ ಸಿನಿಮಾ ಮ್ಯೂಸಿಕ್​ಗೆ ಗೊತ್ತಾ?

Share :

Published August 31, 2023 at 8:54am

    ಮೊಮ್ಮಗನನ್ನು ಹರಸಿ ಆಶೀರ್ವದಿಸಿ ಎಂದ ನಟ ಜಗ್ಗೇಶ್

    ಬ್ಯುಸಿ ನಡುವೆಯೂ ಶೂಟಿಂಗ್​ ಸ್ಪಾಟ್​ಗೆ ಜಗ್ಗೇಶ್ ಭೇಟಿ

    ಮುದ್ದಿನ ಮೊಮ್ಮಗ ಅರ್ಜುನ್​ ಆಸೆ ನೆರವೇರಿಸಿದ ತಾತಾ

ಸ್ಯಾಂಡಲ್​ವುಡ್​ನ ನವರಸನಾಯಕ ಜಗ್ಗೇಶ್ ಅವರು ರಾಜಕೀಯ, ಸಿನಿಮಾರಂಗದಲ್ಲಿ ಬ್ಯುಸಿ ಆಗಿರೋ ನಟ. ಕಿರುತೆರೆ, ಸಿನಿಮಾ ಶೂಟಿಂಗ್​ ಅಂತ ಬ್ಯುಸಿ ಶೆಡ್ಯೂಲ್ಡ್​ ನಡುವೆಯೂ ತಮ್ಮ ಫ್ಯಾಮಿಲಿಗೆ ಹೆಚ್ಚು ಸಮಯ ಮೀಸಲಿಡುತ್ತಿರುತ್ತಾರೆ. ಪ್ರೀತಿಯ ಮೊಮ್ಮಗನ ಜೊತೆ ಸಖತ್ ಆಗಿರೋ ಮ್ಯೂಸಿಕ್​ಗೆ ಸ್ಟೆಪ್ಸ್​ಗಳನ್ನು ಹಾಕಿ ನವರಸನಾಯಕ ಎಂಜಾಯ್ ಮಾಡಿದ್ದಾರೆ.

ಜಗ್ಗೇಶ್ ಅವರ ಸಹೋದರ ನಟ ಕೋಮಲ್ ನಿರ್ಮಾಣದಲ್ಲಿ ಕಾಲಾಯನಮಃ ಸಿನಿಮಾ ಮಾಡಲಾಗುತ್ತಿದೆ. ಈ ಸಿನಿಮಾದ ಶೂಟಿಂಗ್​ ಅನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಲ್ಲಿಗೆ ಮೊಮ್ಮಗ ಅರ್ಜುನ್​ನೊಂದಿಗೆ ಜಗ್ಗೇಶ್ ಅವರು ಭೇಟಿ ನೀಡಿದ್ದರು. ಆಗ ಕಾಲಾಯನಮಃ ಸಿನಿಮಾದ ಸಾಂಗ್​ ಅನ್ನು ಶೂಟ್ ಮಾಡುತ್ತಿದ್ದರಿಂದ ಮೊಮ್ಮಗ ಅರ್ಜುನ್​ ಒಂದೆರಡು ಸ್ಟೆಪ್ಸ್​ ಹಾಕೋಣ ಎಂದು ಜಗ್ಗೇಶ್​ರನ್ನು ಒತ್ತಾಯಿಸಿದ್ದಾರೆ. ಹೀಗಾಗಿ ಅರ್ಜುನ್​ ಜೊತೆ ಜಗ್ಗೇಶ್ ಅವರು ಡ್ಯಾನ್ಸ್ ಮಾಡಿ ಮೊಮ್ಮಗನ ಆಸೆಯನ್ನು ನೆರವೇರಿಸಿದ್ದಾರೆ.

ಡ್ಯಾನ್ಸ್ ಮಾಡಿರೋ ವಿಡಿಯೋವನ್ನು ಜಗ್ಗೇಶ್​ ಅವರು ತಮ್ಮ ಸೋಷಿಯಲ್​ ಮೀಡಿಯಾ ಅಕೌಂಟ್​ಗಳಲ್ಲಿ ಶೇರ್ ಮಾಡಿದ್ದಾರೆ. ಅರ್ಜುನ್​, ತಾತನೊಂದಿಗೆ ಹೆಜ್ಜೆ ಹಾಕಿ ಸಂತಸಗೊಂಡ. ಮಕ್ಕಳು ದೇವರ ಪ್ರತಿರೂಪ. ನೀವು ಅವನನ್ನು ಹರಸಿ ಆಶೀರ್ವದಿಸಿ ಎಂದು ಫೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಮೊಮ್ಮಗನೊಂದಿಗೆ ಸ್ಟೆಪ್ಸ್ ಹಾಕಿದ ನವರಸನಾಯಕ ಜಗ್ಗೇಶ್.. ಇದು ಯಾವ ಸಿನಿಮಾ ಮ್ಯೂಸಿಕ್​ಗೆ ಗೊತ್ತಾ?

https://newsfirstlive.com/wp-content/uploads/2023/08/JAGGESH_SON.jpg

Load More