newsfirstkannada.com

ಸ್ಟೂಡೆಂಟ್ ಲೈಫ್ ಫೋಟೋ ಹಂಚಿಕೊಂಡ ನವರಸನಾಯಕ; ಈ ಫೋಟೋದಲ್ಲಿ ಜಗ್ಗೇಶ್ ಎಲ್ಲಿದ್ದಾರೆ ಗುರುತಿಸುವಿರಾ..?​​

Share :

27-08-2023

    ನಟ ಜಗ್ಗೇಶ್ 2ನೇ ತರಗತಿ ಓದಿರೋದು ಎಲ್ಲಿ?

    ಶಾಲಾ ದಿನಗಳನ್ನು ನೆನಪಿಸಿಕೊಂಡ ನಟ ಜಗ್ಗೇಶ್

    ಈ ಫೋಟೋದಲ್ಲಿ ನವರಸನಾಯಕ ಯಾರು?

ಸ್ಯಾಂಡಲ್​ವುಡ್​ನ ಖ್ಯಾತ ನಟ ಜಗ್ಗೇಶ್ ಅವರು ಸೋಷಿಯಲ್​ ಮೀಡಿಯಾದಲ್ಲಿ ಯಾವಾಗಲೂ ಆಕ್ಟೀವ್ ಆಗಿರುತ್ತಾರೆ. ಸಿನಿಮಾ ರಂಗ ಹಾಗೂ ರಾಜಕೀಯ ಕಣದಲ್ಲಿ ಫುಲ್​ ಬ್ಯುಸಿ ನಡುವೆಯು ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸಾಕಷ್ಟು ಕುತೂಹಲ ಹೊಂದಿರುತ್ತಾರೆ. ಆಗಾಗ ಸಭೆ, ಸಮಾರಂಭಗಳಲ್ಲಿ ವಿದ್ಯಾರ್ಥಿಗಳಿಗೆ, ಫ್ಯಾನ್ಸ್​ಗೆ ಜೀವನದ ಪ್ರೋತ್ಸಾಹದ ಮಾತುಗಳನ್ನು ಹೇಳುತ್ತಿರುತ್ತಾರೆ.

ಡಾ. ರಾಜ್​ಕುಮಾರ್

ನವರಸನಾಯಕ ಜಗ್ಗೇಶ್ ಅವರು ಸದ್ಯ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಾವು ಚಿಕ್ಕವರಿದ್ದಾಗ ಹೇಗಿದ್ದೆ ಎಂಬುವುದನ್ನು ಫೋಟೋವನ್ನು ರೀಟ್ವೀಟ್ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮಕ್ಕಳೆಲ್ಲ ಬೆಂಚ್​ ಮೇಲೆ ಕುಳಿತ್ತಿದ್ದಾರೆ. ಇದರಲ್ಲಿ ಜಗ್ಗೇಶ್ ಕೂಡ ಇದ್ದಾರೆ. ಆದ್ರೆ ಯಾರೆಂಬುವುದು ಪತ್ತೆ ಹಚ್ಚಲು ಕಷ್ಟವಾಗಬಹುದು. ಏಕೆಂದರೆ ಆ ಫೋಟೋ 1970ರಲ್ಲಿ ಕ್ಲಿಕ್ ಮಾಡಿದಂತದ್ದು ಆಗಿದೆ.

ಇಂಡಿಯನ್ ಹಿಸ್ಟರಿ ಪಿಕ್ಸ್​ ಎನ್ನುವ ಅಧಿಕೃತ ಎಕ್ಸ್​ನಲ್ಲಿ ಜಗ್ಗೇಶ್​ ಅವರು ಬಾಲಕನಾಗಿದ್ದಾಗ ಶಾಲೆಯಲ್ಲಿ ತೆಗೆದಂತಹ ಫೋಟೋವನ್ನು ಶೇರ್ ಮಾಡಿದೆ. ಈ ಫೋಟೋವನ್ನು ರೀಎಕ್ಸ್ ಮಾಡಿರುವ ನಟ ಜಗ್ಗೇಶ್​ ಅವರು, 1970ರಲ್ಲಿ ಹಿಮಮಾಂಶು ಜ್ಯೋತಿ ಕಲಾ ಪೀಠ ಮಲ್ಲೇಶ್ವರಂ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದೆ. ಆಗ ಟೀಚರ್ ಮುಂದೆ ನೀನು ಏನಾಗುತ್ತಿಯಾ ಎಂದು ಕೇಳಿದ್ದರು. ಅದಕ್ಕೆ ನಾನು ಡಾ. ರಾಜಕುಮಾರ್​ನಂತೆ ಹೀರೋ ಆಗುತ್ತೇನೆ ಎಂದು ಹೇಳಿದ್ದೆ ಎಂಬುದನ್ನ ಜಗ್ಗೇಶ್ ಮೆಲುಕು ಹಾಕಿದ್ದಾರೆ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಟೂಡೆಂಟ್ ಲೈಫ್ ಫೋಟೋ ಹಂಚಿಕೊಂಡ ನವರಸನಾಯಕ; ಈ ಫೋಟೋದಲ್ಲಿ ಜಗ್ಗೇಶ್ ಎಲ್ಲಿದ್ದಾರೆ ಗುರುತಿಸುವಿರಾ..?​​

https://newsfirstlive.com/wp-content/uploads/2023/08/ACTORE_JAGGESH.jpg

Load More