newsfirstkannada.com

VIDEO- ‘ನನ್‌ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ’- ದರ್ಶನ್‌ ಬಗ್ಗೆ ಕಿಚ್ಚ ಸುದೀಪ್ ಯಾಕ್ ಹಿಂಗೆ ಹೇಳಿದ್ರು?

Share :

02-09-2023

    ಎಲ್ಲವೂ ಸರಿ ಹೋಗಬೇಕು ಎಂದಾಗ ಸರಿ ಹೋಗುತ್ತೆ

    ದರ್ಶನ್​ ಪಾರ್ಟಿಗೆ ಬರ್ತಾರಾಂತ ಮೊದಲೇ ಗೊತ್ತಿತ್ತು

    ನಾವಿಬ್ಬರು ಜಗಳ ಮಾಡಿಕೊಂಡಿದ್ವಿ ಅನ್ನೋದು ಕಲ್ಪನೆ

ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ, ಅಭಿಮಾನಿಗಳ ಪ್ರೀತಿಯ ಕಿಚ್ಚ ನಟ ಸುದೀಪ್ ಅವರು ಬರ್ತ್​ ಡೇ ಸಲೆಬ್ರೆಷನ್​ ಮೂಡ್​ನಲ್ಲಿದ್ದಾರೆ. ನಿನ್ನೆಯಿಂದಲೂ ಫುಲ್​ ಬ್ಯುಸಿ ಇರೋ ಸುದೀಪ್ ಅವರು ಹಲವಾರು ಕಾರ್ಯಕ್ರಮಗಳಿಗೆ ತೆರಳಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಸದ್ಯ ಈ ಸಂಭ್ರಮದ ಖುಷಿಯಲ್ಲಿರೋ ‘ಹೆಬ್ಬುಲಿ’ ತನ್ನ ಕುಚುಕು ಗೆಳೆಯ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಕುರಿತು ಪ್ರತಿಕ್ರಿಯೆ ನೀಡಿದ್ದು ಅವರ ಮಾತುಗಳನ್ನು ಕೇಳಿದ್ರೆ ಇಬ್ಬರು ಶೀಘ್ರದಲ್ಲೇ ಒಂದಾಗಬಹುದು ಎಂದೆನಿಸುತ್ತದೆ.

ಬೆಂಗಳೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಸುದೀಪ್​, ಕಳೆದ ಒಂದೇರಡು ದಿನಗಳ ಹಿಂದೆ ಸಂಸದೆ, ನಟಿ ಸುಮಲತಾ ಅವರ ಬರ್ತ್​ ಡೇ ಪಾರ್ಟಿಗೆ ಹೋಗಿದ್ದೆ. ಆ ಪಾರ್ಟಿಗೆ ದರ್ಶನ್ ಬರುತ್ತಾರೆಂದು ಮೊದಲೇ ಗೊತ್ತಿತ್ತು. ಆದರೂ ನಾನು ಅಲ್ಲಿಗೆ ಹೋಗಿದ್ದೆ. ನಾವೀಬ್ಬರು ಕಿತ್ತಾಡಿಕೊಂಡ್ರು, ಜಗಳ ಮಾಡಿಕೊಂಡ್ರು ಅನ್ನೊಂದು ಕಲ್ಪನೆ. ಗೋಡೆ ಮುರಿಯಬೇಕು, ಆದರೆ ಕಲ್ಪನೆ ಇರಬಾರದು. ನನ್ನ ಕಣ್ಣಲ್ಲಿ, ಕಣ್ಣಿಟ್ಟು ಹೇಳಿದ್ರೆ ಒಪ್ತಿನಿ ಎಂದು ಸುದೀಪ್ ಅವರು ಹೇಳಿದ್ದಾರೆ.

ನಟ ಕಿಚ್ಚ ಸುದೀಪ್ ಮತ್ತು ದರ್ಶನ್

ಇನ್ನು ಮಾತು ಮುಂದುವರೆಸಿದ ಸುದೀಪ್ ಅವರು ಪ್ರಶ್ನೆಗಳು ಬರುತ್ತಾವೆ. ಅದರಲ್ಲಿ ಒಳ್ಳೆಯದು, ಕೆಟ್ಟದು ಇರುತ್ತಾವೆ. ಪಾರ್ಟಿಯಲ್ಲಿ ಸಿಕ್ಕ ತಕ್ಷಣ ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ. ನಾವಿಬ್ಬರು ಮೆಚುಡ್​ (Matured) ಇದ್ದೀವಿ. ಎಲ್ಲವೂ ಸರಿ ಹೋಗಬೇಕು ಎಂದಾಗ ಅದಾಗೇ ಸರಿ ಹೋಗುತ್ತೆ ಎಂದು ದರ್ಶನ್ ಮತ್ತು ತಮ್ಮ ನಡುವಿನ ಬಿರುಕಿನ ಬಗ್ಗೆ ಸುದೀಪ್ ಮಾತನಾಡಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO- ‘ನನ್‌ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ’- ದರ್ಶನ್‌ ಬಗ್ಗೆ ಕಿಚ್ಚ ಸುದೀಪ್ ಯಾಕ್ ಹಿಂಗೆ ಹೇಳಿದ್ರು?

https://newsfirstlive.com/wp-content/uploads/2023/09/Sudeep-2.jpg

Load More