/newsfirstlive-kannada/media/post_attachments/wp-content/uploads/2024/10/appu1.jpg)
ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನಗಲಿ ಇಂದಿಗೆ ಮೂರು ವರ್ಷ. ಅಪ್ಪು ಅವರ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ಸ್ಮಾರಕಕ್ಕೆ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ: ಇದು ಅಂತಿಂಥಾ ವಾಮಾಚಾರ ಅಲ್ಲ, ಕುಟ್ಟಿ ಸೈತಾನ್ ಪೂಜೆ.. ಮಗುವನ್ನೇ ಬ*ಲಿ ಕೊಡಲು ಮುಂದಾಗಿದ್ದ ತಂದೆ
/newsfirstlive-kannada/media/post_attachments/wp-content/uploads/2024/10/appu.jpg)
ಇನ್ನೂ, 3ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಪ್ಪು ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್​ ರಾಜ್​ಕುಮಾರ್​​ ಸಮಾಧಿಗೆ ನಮನ ಸಲ್ಲಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಸ್ಮಾರಕದ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ರಾಜ್ ಕುಟುಂಬಸ್ಥರು ಆಗಮಿಸಿ ಅಪ್ಪು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ.
ಪುಣ್ಯಸ್ಮರಣೆ ಹಿನ್ನೆಲೆ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಪುನೀತ್ ರಾಜ್‍ಕುಮಾರ್ ಅವರ ಅಕ್ಕ ಲಕ್ಷ್ಮೀ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ್ದಾರೆ. ಒಂದು ವಾರದ ಮುಂಚಿತವಾಗಿಯೇ ನಮ್ಮಗೆ ಒಂಥರ ನೋವಾಗುತ್ತೆ. ಅಯ್ಯೋ ಪೂಜೆ ಮಾಡಬೇಕು ಅಲ್ವಾ ಅಂತ ಬೇಸರ ಆಗುತ್ತೆ. ಇಲ್ಲಿ ಬಂದು ಅಭಿಮಾನಿಗಳನ್ನು ನೋಡಿದಾಗ ಖುಷಿ ಆಗುತ್ತೆ. ಆದರೆ ನಮ್ಮ ಅಪ್ಪು ಎಲ್ಲೂ ಹೋಗಿಲ್ಲ ನಿಮ್ಮಲ್ಲೇ ಇದ್ದಾನೆ. ನಾವು ಅವನ ಕೈಯಿಂದ ಪೂಜೆ ಮಾಡಿಸಿಕೊಳ್ಳಬೇಕಾಗಿತ್ತು ಆದರೆ, ಅವನಗೆ ನಾವು ಪೂಜೆ ಮಾಡುವಂತ ಸ್ಥಿತಿ ಬಂದಿದೆ ಅಂತ ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us