/newsfirstlive-kannada/media/post_attachments/wp-content/uploads/2024/11/timaya1.jpg)
ಸ್ಯಾಂಡಲ್‌ವುಡ್‌ನ ಹಿರಿಯ ನಟ ಟಿ.ತಿಮ್ಮಯ್ಯ ಇಂದು ನಿಧನರಾಗಿದ್ದಾರೆ. 92 ವರ್ಷದ ಟಿ ತಿಮ್ಮಯ್ಯನವರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಡಾ. ರಾಜುಕುಮಾರ್, ವಿಷ್ಣುವರ್ಧನ್, ಅನಂತನಾಗ್ ಅವರ ಜೊತೆ ಇವರು ನಟನೆ ಮಾಡಿದ್ದರು.
ಖ್ಯಾತ ನಿರ್ದೇಶಕರಾದ ದೊರೆ ಭಗವಾನ್, ಸುನೀಲ್ ಕುಮರ್ ದೇಸಾಯಿ, ಭಾರ್ಗವ ಹೀಗೆ ಹಲವು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಚಲಿಸುವ ಮೋಡಗಳು, ಬಂಧನ, ಬೆಂಕಿಯ ಬಲೆ, ಕಾಮನಬಿಲ್ಲು, ಪರಮೇಶಿ ಪ್ರೇಮ ಪ್ರಸಂಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಇದನ್ನೂ ಓದಿ:ಧನುಷ್ ವಿರುದ್ಧ ತಿರುಗಿಬಿದ್ದ ಲೇಡಿ ಸೂಪರ್ ಸ್ಟಾರ್.. ನಯನತಾರಾ ಬಹಿರಂಗ ಸವಾಲು; ಕಾರಣವೇನು?
ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್. ಹೆಸರಾಂತ ನಿರ್ದೇಶಕರಾದ ದೊರೈ ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಭಾರ್ಗವ, ಸಂಗೀತಂ ಶ್ರೀನಿವಾಸ್ ರಾವ್, ಕೆವಿ ಜಯರಾಮ್ ಅವರೊಂದಿಗೆ ಕೆಲಸ ಮಾಡಿದ್ದಾರೆ.
ಚಲಿಸುವ ಮೋಡಗಳು, ಪ್ರತಿಧ್ವನಿ, ಬಂಧನ, ಬೆಂಕಿಯ ಬಲೆ, ಕಾಮನ ಬಿಲ್ಲು, ಪರಮೇಶಿ ಪ್ರೇಮ ಪ್ರಸಂಗ, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ , ಕರ್ಣ, ಈ ಜೀವ ನಿನಗಾಗಿ, ಕುರುಕ್ಷೇತ್ರ, ನಿಶ್ರ್ಕರ್ಷ, ಬೆಳದಿಂಗಳ ಬಾಲೆ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us