newsfirstkannada.com

×

ಮೇಘನಾ ರಾಜ್ ಅಭಿನಯದ ‘ತತ್ಸಮ ತದ್ಭವ’ ಟ್ರೈಲರ್ ಲಾಂಚ್; ಅತ್ತಿಗೆಯ ಡೈಲಾಗ್​​ಗೆ ಭಾವುಕರಾದ ಧ್ರುವ ಸರ್ಜಾ

Share :

Published August 27, 2023 at 2:43pm

    ಅತ್ತಿಗೆಯ ಸಿನಿಮಾದ ಟ್ರೈಲರ್​ ಲಾಂಚ್ ಮಾಡಿದ ಧ್ರುವ

    ಸಿನಿಮಾ ಟ್ರೈಲರ್​ ಬಗ್ಗೆ ಡಾಲಿ ಧನಂಜಯ್ ಹೇಳಿದ್ದೇನು?

    ತತ್ಸಮ ತದ್ಭವ ಚಿತ್ರದ ಕಾನ್ಸೆಪ್ಟ್​ ಹುಟ್ಟಿಕೊಳ್ಳಲು ಕಾರಣ?

ನಟಿ ಮೇಘನಾ ರಾಜ್​ ಅವರು ನಟಿಸಿರುವ ‘ತತ್ಸಮ ತದ್ಭವ’ ಮೂವಿಯ ಟ್ರೈಲರ್​ ಅನ್ನು ಇಂದು ಸ್ಯಾಂಡಲ್​ವುಡ್​ನ ಆ್ಯಕ್ಷನ್‌ ಫ್ರಿನ್ಸ್​ ಧ್ರುವ ಸರ್ಜಾ ಅವರು ರಿಲೀಸ್ ಮಾಡಿದರು. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಟ್ರೈಲರ್ ರಿಲೀಸ್​ ಕಾರ್ಯಕ್ರಮಕ್ಕೆ ಡಾಲಿ ಧನಂಜಯ್, ಪ್ರಜ್ವಲ್​ ದೇವರಾಜ್ ಸೇರಿದಂತೆ​ ಅನೇಕರು ಭಾಗಿಯಾಗಿ ಶುಭ ಹಾರೈಸಿದರು.

ನಟ ಧ್ರುವ ಸರ್ಜಾ, ಡಾಲಿ ಧನಂಜಯ್, ಮೇಘನಾ ರಾಜ್, ಪ್ರಜ್ವಲ್​ ದೇವರಾಜ್

ಚಿರಂಜೀವಿ ಸರ್ಜಾ ಅಗಲಿದ ನಂತರ ಇದೇ ಮೊದಲ ಬಾರಿಗೆ ನಟಿ ಮೇಘನಾ ರಾಜ್ ಅವರು ಚಿತ್ರರಂಗಕ್ಕೆ ಕಂಬ್ಯಾಕ್​ ಮಾಡುತ್ತಿರೋ ಸಿನಿಮಾವಿದು. ಶೂಟಿಂಗ್ ಮುಗಿಸಿ, ರಿಲೀಸ್ ಹಂತಕ್ಕೆ ತಲುಪಿರುವ ತತ್ಸಮ- ತದ್ಭವ ಸಿನಿಮಾದ ಟ್ರೈಲರ್​ ಅನ್ನು ಸದ್ಯ ಆ್ಯಕ್ಷನ್​ ಫ್ರಿನ್ಸ್​ ಧ್ರುವ ಸರ್ಜಾ ಅವರು ರಿಲೀಸ್ ಮಾಡಿ, ಮಾತನಾಡಿದ ಅವರು ಅಣ್ಣನನ್ನು ನೆನಪಿಸಿಕೊಂಡರು.

ನಟ ಧ್ರುವ ಸರ್ಜಾ ಮಾತನಾಡಿ, ನನಗೆ ತತ್ಸಮ- ತದ್ಭವ ಸಿನಿಮಾದ ಟ್ರೈಲರ್ ತುಂಬಾ ಕನೆಕ್ಟ್ ಆಯಿತು. ಸಿನಿಮಾದಲ್ಲಿ ಅತ್ತಿಗೆ ಮೇಘನಾ ರಾಜ್ ಅವರು ಹೇಳಿದ ಡೈಲಾಗ್ ಮೈ ಹಸ್ಬೆಂಡ್ ಈಸ್ ಮಿಸ್ಸಿಂಗ್ ಅನ್ನೋ ಡೈಲಾಗ್ ಮನಸನ್ನು ಕದಡಿತು. ನನ್ನ ಅಣ್ಣ ಇಲ್ಲಿ ಮಿಸ್ಸಿಂಗ್ ಆಗಿರೋದು ಎಂದು ಭಾವುಕರಾಗಿ ನುಡಿದರು. ಬಳಿಕ ಅತ್ತಿಗೆಗೆ ಇದು ಕಂಬ್ಯಾಕ್ ಅಲ್ಲ. ಅವರು ಯಾವಾಗಲೂ ಸ್ಯಾಂಡಲ್​ವುಡ್​ನಲ್ಲೇ ಇರುತ್ತಾರೆ ಎಂದು ಹೇಳಿದ್ದಾರೆ.

ಸಿನಿಮಾ ಶುರುವಾಗಲೂ ಚಿರುನೇ ಕಾರಣ..!

ಈ ಸಿನಿಮಾ ಶುರುವಾಗೋಕೆ ನನ್ನ ಪತಿ ಚಿರಂಜೀವಿ ಸರ್ಜಾ ಕಾರಣ ಎಂದು ನಟಿ ಮೇಘನಾ ರಾಜ್ ಹೇಳಿದರು. ಹಾಗೇ ಮಾತು ಮುಂದುವರೆಸಿ, 2020ರಲ್ಲಿ ಪ್ರಜ್ವಲ್, ಪನ್ನಗಾ ಜೊತೆ ಮೂವರೂ ಸೇರಿ ಸಿನಿಮಾ ಮಾಡೋಣ ಅಂತ ಚಿರು ಹೇಳಿದ್ದರು. ಆದರೆ ಅದಾದ ಮೇಲೆ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ದಿ ಶೋ ಮಸ್ಟ್ ಗೋ ಆನ್ ಅಲ್ವಾ?. ಸದ್ಯ ಗೆಳೆಯನ‌ ಮಾತನ್ನ ಪನ್ನಗಾಭರಣ ಈಡೇರಿಸಿದ್ದಾರೆ. ಪ್ರಜ್ವಲ್ ದೇವರಾಜ್ ಏನು ಮಾತನಾಡದೇ ಒಪ್ಪಿಕೊಂಡು ಬಿಟ್ಟರು. ಇನ್ನು ಸಿನಿಮಾ ಮಾಡಿದ್ದಕ್ಕೆ ತಂದೆ, ತಾಯಿ, ನಮ್ಮ ಅತ್ತೆ ಮಾವ ಹಾಗೂ ನನ್ನ ತಮ್ಮ ಧ್ರುವ ಜಾಸ್ತಿ ಖುಷಿ ಪಟ್ಟರು ಎಂದು ಹೇಳಿದರು.

ಇನ್ನು ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ನಟ ಡಾಲಿ ಧನಂಜಯ್ ಮಾತನಾಡಿ, ಟ್ರೈಲರ್ ನೋಡಿ ಖುಷಿ ಆಯಿತು. ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್, ಮೇಘನಾ ಇಂಟೆನ್ಸ್ ಆಗಿ ಕಾಣಿಸ್ತಾರೆ. ಈ ಹಿಂದೆ ಅಲ್ಲಮ ಚಿತ್ರದಲ್ಲಿ ಮೇಘನಾ ನಾನು ಅಭಿನಯಿಸಿದ್ದೇನೆ. ಸಸ್ಪೆನ್ಸ್ ಥ್ರಿಲ್ಲರ್ ಆಗಿರೋ ಈ ಸಿನಿಮಾ ದೊಡ್ಡ ಹಿಟ್ ಆಗಲಿ ಎಂದು ಹಾರೈಸಿದರು.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಘನಾ ರಾಜ್ ಅಭಿನಯದ ‘ತತ್ಸಮ ತದ್ಭವ’ ಟ್ರೈಲರ್ ಲಾಂಚ್; ಅತ್ತಿಗೆಯ ಡೈಲಾಗ್​​ಗೆ ಭಾವುಕರಾದ ಧ್ರುವ ಸರ್ಜಾ

https://newsfirstlive.com/wp-content/uploads/2023/08/DHRUVA_SARJA_2.jpg

Load More