ಡಾ.ರಾಜಕುಮಾರ್‌ಗೆ ಅಪ್ಪಟ ಅಭಿಮಾನಿಯಾಗಿದ್ದ ಡಾ.ವಿಷ್ಣುವರ್ಧನ್
ರಾಜಕುಮಾರ್, ವಿಷ್ಣುವರ್ಧನ್ ಜೊತೆಗೆ ನೋಡಿದ ಸಿನಿಮಾಗಳು ಇವೆ
ಈ ಬಾರಿಯ ಡಾ.ರಾಜ್ ಕಪ್ ಕ್ರಿಕೆಟ್ ಟೂರ್ನಿ ವಿದೇಶದಲ್ಲಿ ನಡೆಯುತ್ತೆ
ಹಲವು ವರ್ಷಗಳಿಂದ ಡಾ.ರಾಜ್ ಕಪ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸದ್ಯ ಈ ವರ್ಷವು ಈ ಡಾ.ರಾಜ್ ಕಪ್ ಕ್ರಿಕೆಟ್ ಟೂರ್ನಿ ಅದ್ಧೂರಿಯಾಗಿ ನಡೆಸಲು ಭಾರೀ ಸಿದ್ಧತೆ ನಡೆದಿದೆ. ಟೂರ್ನಿ ಕೂಡ ಭಾರತ ಬಿಟ್ಟು ವಿದೇಶದಲ್ಲಿ ನಡೆಯಲಿದೆ ಎಂದು ಈಗಾಗಲೇ ಹೇಳಲಾಗಿದೆ. ಇದರ ಜೊತೆ ಜೊತೆಗೆ ಡಾ.ರಾಜಕುಮಾರ್ ಬಗ್ಗೆ ಸ್ಯಾಂಡಲ್ವುಡ್ ನಟ ಅನಿರುದ್ಧ ಜಟ್ಕರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪ್ರತಿಯೊಬ್ಬ ಕನ್ನಡಿಗರು ಡಾ.ರಾಜಕುಮಾರ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದಾರೆ. ಅದರಂತೆ ನಾನು ಕೂಡ ಅವರ ಸಿನಿಮಾಗಳನ್ನು ನೋಡಿಯೇ ಬೆಳೆದಿದ್ದೇನೆ. ನಮ್ಮ ತಂದೆ ಡಾ.ವಿಷ್ಣುವರ್ಧನ್ ಜೊತೆ ಕೂತು ರಾಜಕುಮಾರ್ ಅವರ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಸಿನಿಮಾಗಳನ್ನು ಟಿವಿಯಲ್ಲಿ ನೋಡಿದ್ದೇನೆ ಎಂದು ಹೇಳಿದರು.
ನಮ್ಮ ಅಪ್ಪಾಜಿ ವಿಷ್ಣುದಾದಾ ಅವರು ಡಾ.ರಾಜಕುಮಾರ್ ಅವರನ್ನು ಹೊಗಳುತ್ತಿದ್ದರು. ಅವರ ಕಲೆ, ಅಭಿನಯ, ಸಿನಿಮಾಗಳು ಮತ್ತೆ ಎಲ್ಲಿ ಸಿಗುತ್ತವೆ ಹೇಳಿ. ರಾಜಕುಮಾರ್ ನಟಿಸಿದಂತ ಸಿನಿಮಾಗಳು ಮತ್ತೆ ಬರಲು ಸಾಧ್ಯವಿಲ್ಲ. ಅವರಂತೆ ನಟನೆ ಮಾಡಲು ಪ್ರಯತ್ನ ಕೂಡ ನಾವು ಮಾಡಬಾರದು. ಅಣ್ಣವ್ರು ನಟಿಸಿದಂತ ಸಿನಿಮಾಗಳನ್ನು ನೋಡಿ ಆಸ್ವಾದಿಸಬೇಕು ಅಷ್ಟೇ. ಅಪ್ಪಾಜಿಯಂತೂ ಅಣ್ಣವರ ಅಭಿಮಾನಿಯಾಗಿದ್ರು. ನಾನು ಅವರ ಮಗನ ತರ ಎಂದು ಡಾ.ವಿಷ್ಣುವರ್ಧನ್ ಹೇಳಿಕೊಂಡಿದ್ದಾರೆ. ಅಲ್ಲದೇ ಅವರ ಜೊತೆ ಅಭಿನಯಿಸುವ ಅವಕಾಶ ಕೂಡ ವಿಷ್ಣುವರ್ಧನ್ ಅವರಿಗೆ ಸಿಕ್ಕಿತು ಎಂದು ನಟ ಅನಿರುದ್ಧ ತಮ್ಮ ಮನದಾಳವನ್ನು ಬಿಚ್ಚಿಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ