newsfirstkannada.com

×

ನನ್ನ ಜೊತೆ ಇರು ಹೀರೋಯಿನ್​ ಮಾಡ್ತೀನಿ ಅಂದಿದ್ರಂತೆ.. ಸಹ ಕಲಾವಿದೆಯ ಕಣ್ಣೀರಿನ ಕತೆ ಹೇಳಿದ ಚೈತ್ರಾ ಜೆ ಆಚಾರ್

Share :

Published September 19, 2024 at 11:28am

    ಚಿತ್ರರಂಗದಲ್ಲಿ ನಡೆಯುತ್ತಿರೋ ಶೋಷಣೆ ಬಗ್ಗೆ ನಟಿ ಏನಂದ್ರು?

    ಸೋಷಿಯಲ್​ ಮೀಡಿಯಾದಲ್ಲಿ ಹಾಟ್​ ಹಾಪಿಕ್​ ಆಗಿರುತ್ತಾರೆ ಚೈತ್ರಾ

    ನನಗೆ ಯಾವತ್ತೂ ಆ ರೀತಿ ಅನುಭವ ಆಗಿಲ್ಲ ಎಂದ ಹಾಟ್ ಬ್ಯೂಟಿ

ಸ್ಯಾಂಡಲ್​ವುಡ್​ ಬೋಲ್ಡ್​ ನಟಿ ಚೈತ್ರಾ ಜೆ ಆಚಾರ್ ಯಾವಾಗಲೂ ಹಾಟ್​ ಟಾಪಿಕ್​ ಆಗಿರುತ್ತಾರೆ. ತಮ್ಮ ಗ್ಲಾಮರಸ್​ ಲುಕ್​ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಚೈತ್ರಾ ಜೆ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ನನ್ನ ಜೊತೆ ಇರು ಹೀರೋಯಿನ್​ ಮಾಡ್ತೀನಿ ಅಂದಿದ್ರು ಎಂದು ಹೇಳುವ ಮೂಲಕ ಶಾಕ್ ಕೊಟ್ಟಿದ್ದಾರೆ.

ಇದನ್ನೂ ಓದಿ: ನಂಗೂ ಪ್ರೀತಿ ಆಗಿತ್ತು ಆದ್ರೆ.. ಲವ್​ ಬ್ರೇಕಪ್ ಬಗ್ಗೆ ಫಸ್ಟ್ ಟೈಂ ಮಾತಾಡಿದ ಚೈತ್ರಾ ಜೆ ಆಚಾರ್; ಹೇಳಿದ್ದೇನು?

ಮಲಯಾಳಂ ಇಂಡಸ್ಟ್ರಿಯಲ್ಲಿನ ಹೇಮಾ ಕಮಿಟಿ ಮಾದರಿಯಲ್ಲೇ ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚನೆ ಆಗ್ಬೇಕು ಎಂಬ ಮಾತು ಕೇಳಿ ಬರ್ತಿದೆ. ಇದೇ ವಿಚಾರಕ್ಕೆ ಮಾತಾಡಿದ ನಟಿ ಚೈತ್ರಾ ಅಚಾರ್, ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಇಲ್ಲ ಅಂತ ಹೇಳೋಕೆ ಆಗಲ್ಲ. ಶೋಷಣೆ ಇಲ್ಲ ಅಂತ ಹೇಳೋದು ಪ್ರಪಂಚದಲ್ಲಿ ಕಳ್ಳತನ ಇಲ್ಲ ಎಂದಂತೆ. ನನಗೆ ಯಾವತ್ತೂ ಈ ರೀತಿಯ ಅನುಭವ ಆಗಿಲ್ಲ. ಅದ್ರೆ ಶೋಷಣೆ ಆಗಿರೋರು ನನ್ನ ಬಳಿ ಹೇಳಿಕೊಂಡಿದ್ದಾರೆ. ನನ್ನ ಎರಡನೇ ಚಿತ್ರದ ಶೂಟಿಂಗ್ ವೇಳೆ ಜೂನಿಯರ್ ಆರ್ಟಿಸ್ಟ್ ತಮಗಾದ ಅನುಭವ ಹಂಚಿಕೊಂಡಿದ್ದರು ಎಂದು ನಟಿ ಚೈತ್ರಾ ಆಚಾರ್​ ಹೇಳಿದ್ದಾರೆ.

ಜೂನಿಯರ್ ಆರ್ಟಿಸ್ಟ್ ಒಬ್ಬರು ಯಾವುದೇ ಸಿನಿಮಾಗಾಗಿ ಆಡಿಷನ್ ಕೊಟ್ಟಿದ್ರಂತೆ. ಮೊದಲ ರೌಂಡ್​ನಲ್ಲಿ ಸೆಲೆಕ್ಟ್ ಆಗಿದ್ದೀರಾ ಅಂತ ಅವ್ರು ಆಕೆಗೆ ಹೇಳಿದ್ದರಂತೆ. ಬಳಿಕ ಕಾಲ್ ಮಾಡಿ ನಮ್ಮ ಜೊತೆ ಟ್ರಿಪ್​ಗೆ ಬನ್ನಿ ನಿಮ್ಮನ್ನೇ ಹೀರೋಯಿನ್​ ಮಾಡ್ತೀನಿ ಅಂದಿದ್ದರಂತೆ. ನನಗೆ ಯಾವತ್ತೂ ಈ ರೀತಿ ಅನುಭವ ಆಗಿಲ್ಲ. ಕಮಿಟಿ ಅಂತ ಆದ್ರೆ ಮುಂದೆ ಬರೋ ನಟಿಯರಿಗೆ ಅನುಕೂಲ ಅಗುತ್ತೆ, ಯಾರಿಗೆ ಏನೇ ಸಮಸ್ಯೆಯಾದರೂ ಕಮಿಟಿ ಗಮನಕ್ಕೆ ತರಬಹುದು ಎಂದು ಚೈತ್ರಾ ಆಚಾರ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಜೊತೆ ಇರು ಹೀರೋಯಿನ್​ ಮಾಡ್ತೀನಿ ಅಂದಿದ್ರಂತೆ.. ಸಹ ಕಲಾವಿದೆಯ ಕಣ್ಣೀರಿನ ಕತೆ ಹೇಳಿದ ಚೈತ್ರಾ ಜೆ ಆಚಾರ್

https://newsfirstlive.com/wp-content/uploads/2024/09/Chaithra-J-Achar-1.jpg

Load More