newsfirstkannada.com

K46 ಮೂವಿಯ ಕ್ಲೈಮ್ಯಾಕ್ಸ್.. ಕಿಚ್ಚ ಹುರಿಗೊಳಿಸಿರೋ ಬಾಡಿ ಹೇಗಿದೆ ಗೊತ್ತಾ..? ಸಖತ್ ಫೋಟೋಗಳು

Share :

27-08-2023

    ಜಿಮ್​ನಲ್ಲಿ ಬೆವರಿಳಿಸುತ್ತಿರೋ ನಟ ಕಿಚ್ಚ ಸುದೀಪ್

    K46 ಮೂವಿಯಲ್ಲಿ ಈಗಾಗಲೇ ರಗಡ್ ಆಗಿ ಲುಕ್​

    ಫೋಟೋ ಹಂಚಿಕೊಂಡ ನಟ ಅಭಿನಯ ಚಕ್ರವರ್ತಿ

ಕನ್ನಡ ಚಿತ್ರರಂಗದ ಬಹುಬೇಡಿಕೆ ಸ್ಟಾರ್ ನಟ ಕಿಚ್ಚ ಸುದೀಪ್​ ಸಿನಿಮಾ ಶೂಟಿಂಗ್​ಗಳಲ್ಲಿ ಫುಲ್ ಬ್ಯುಸಿಯಾಗಿರುತ್ತಾರೆ. ಫ್ಯಾನ್ಸ್​ ಅವರ ಹೊಸ ಸಿನಿಮಾವನ್ನ ಬೆಳ್ಳಿ ತೆರೆ ಮೇಲೆ ನೋಡಿ ಆನಂದಿಸಲು ಕಾತರದಿಂದ ಕಾಯುತ್ತಿರುತ್ತಾರೆ. ಸದ್ಯ ಅಭಿನಯ ಚಕ್ರವರ್ತಿ ಕಿಚ್ಚ ಪ್ಯಾನ್ ಇಂಡಿಯಾ K46 ಸಿನಿಮಾ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದು ಈಗಾಗಲೇ ಇದು ಅಂತಿಮ ಹಂತಕ್ಕೆ ಬಂದಿದೆ. ಕೇವಲ ಕ್ಲೈಮ್ಯಾಕ್ಸ್​ ಸೀನ್ ಅಷ್ಟೇ ಬಾಕಿ ಇದೆ ಎನ್ನಲಾಗಿದೆ.

ಕಿಚ್ಚ ಸುದೀಪ್

K46 ಮೂವಿಯ ಕ್ಲೈಮ್ಯಾಕ್ಸ್​ ಸೀನ್​ಗಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಖತ್​ ವರ್ಕೌಟ್ ಮಾಡ್ತಿದ್ದಾರೆ. ರಗಡ್ ಲುಕ್​ನಲ್ಲಿ ಕಾಣಿಸಿಕೊಳ್ಳಲು ಕಬ್ಬಿಣದಂತೆ ದೃಢವಾಗಿ ಮೈಯನ್ನು ಹುರಿಗೊಳಿಸಿದ್ದಾರೆ. ಮೊದಲಿಗಿಂತ ಕಿಚ್ಚ ಸುದೀಪ್ ಈಗ ಮಸ್ತ್​ ಆಗಿ ಕಾಣಿಸುತ್ತಿದ್ದಾರೆ. ತಾವು ಮೈಯನ್ನು ಸದೃಢ ಕಾಯವಾಗಿ ರೆಡಿ ಮಾಡಿಕೊಂಡಿದ್ದಾರೆ. ಈ ಬಗೆಗಿನ ನಾಲ್ಕು ಫೋಟೋಗಳನ್ನು ಸುದೀಪ್ ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಈ ರೀತಿ ಬರೆದುಕೊಂಡಿದ್ದಾರೆ.

ನನ್ನ ಸಂತಸದ ಸ್ಥಳ ವರ್ಕೌಟ್ ಮಾಡುವುದಾಗಿದೆ. ಸದ್ಯದಲ್ಲೇ ಕ್ಲೈಮ್ಯಾಕ್ಸ್​ ಫೈಟಿಂಗ್​ ಸೀನ್​ ಇದೆ. ಇದಕ್ಕಾಗಿ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದೇನೆ ಎಂದಿದ್ದಾರೆ.

View this post on Instagram

A post shared by KicchaSudeepa (@kichchasudeepa)

ಈಗಾಗಲೇ K46 ಸಿನಿಮಾದ ಪ್ರೋಮೋ ರಿಲೀಸ್ ಆಗಿದ್ದು ಇದರಲ್ಲಿ ಕಿಚ್ಚ ಸುದೀಪ್‌ ಹೊಸ ಅವಾತಾರದಲ್ಲಿ ರಗಡ್ ಲುಕ್‌ನಲ್ಲಿ ಅಬ್ಬರಿಸಿದ್ದಾರೆ. ಈ ಸಿನಿಮಾ ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ 5 ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ. ರಿಲೀಸ್​ ಆಗಿರುವ ಪ್ರೋಮೋದಲ್ಲಿ ರಕ್ತಸಿಕ್ತ ದೃಶ್ಯದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು​ ಗಮನ ಸೆಳೆಯುತ್ತಿದೆ. ಸಿನಿಮಾಗೆ ವಿಜಯ್​ ಕಾರ್ತಿಕೇಯ ನಿರ್ದೇಶನ ಮಾಡುತ್ತಿದ್ದಾರೆ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

K46 ಮೂವಿಯ ಕ್ಲೈಮ್ಯಾಕ್ಸ್.. ಕಿಚ್ಚ ಹುರಿಗೊಳಿಸಿರೋ ಬಾಡಿ ಹೇಗಿದೆ ಗೊತ್ತಾ..? ಸಖತ್ ಫೋಟೋಗಳು

https://newsfirstlive.com/wp-content/uploads/2023/08/SUDEEP.jpg

Load More