/newsfirstlive-kannada/media/post_attachments/wp-content/uploads/2024/10/LOVE-1.jpg)
ಸ್ಯಾಂಡಲ್​ವುಡ್​ ನಟಿ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ 2 ಸಿನಿಮಾದ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಸಿಹಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದ ನಟಿ ರೆಚೆಲ್ ಡೇವಿಡ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/10/LOVE5.jpg)
ಲವ್ ಮಾಕ್ಟೇಲ್ ಸಿನಿಮಾದಲ್ಲಿ ಆದಿಯನ್ನು ಬಾಲ್ಯದಿಂದಲೇ ಇಷ್ಟಪಡುತ್ತಿದ್ದ, ಆದಿಯ ಪ್ರತಿ ಹಂತವನ್ನು ಗಮನಿಸಿಕೊಂಡು ಬಂದು ಲವ್ ಸ್ಟೋರಿ ಬ್ರೇಕ್ ಅಪ್ ಸ್ಟೋರಿ, ಮದುವೆ, ಹೆಂಡ್ತಿ ಸಾವು ಎಲ್ಲಾದ್ರ ಬಗ್ಗೆಯೂ ತಿಳ್ಕೊಂಡು, ಇವತ್ತಿಗೂ ಆದಿಗಾಗಿ ಕಾಯ್ತಿರೋ ಹುಡುಗಿಯಾಗಿ ರೆಚೆಲ್ ಅಭಿನಯಿಸಿದ್ದರು.
/newsfirstlive-kannada/media/post_attachments/wp-content/uploads/2024/10/LOVE3.jpg)
ಸದ್ಯ ನಟಿ ರೆಚೆಲ್ ಡೇವಿಡ್ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಇನ್ನೂ ನಟಿಯೂ ಚರ್ಚ್​ವೊಂದರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆ ನಡೆದಿದೆ.
/newsfirstlive-kannada/media/post_attachments/wp-content/uploads/2024/10/LOVE4.jpg)
ನಟಿ ರೇಚೆಲ್ ವೈಟ್ ಗೌನ್ ಜೊತೆಗೆ ವೈಟ್ ಸ್ನೀಕರ್ ಧರಿಸಿಕೊಂಡಿದ್ದಾರೆ. ಪತಿ ಬ್ಲ್ಯಾಕ್ ಆಂಡ್ ವೈಟ್ ಫಾರ್ಮಲ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯೂ ಅಂಟೋ ಫಿಲಿಪ್ ಎಂಬುವವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/10/LOVE2.jpg)
ಇನ್ನೂ ನಟಿ ರೆಚೆಲ್​ ಮದುವೆಗೆ ನಟಿ ಮಿಲನಾ ನಾಗರಾಜ್, ಅಮೃತ ಅಯ್ಯಂಗಾರ್ ಸೇರಿದಂತೆ ಸಾಕಷ್ಟು ಮಂದಿ ಮಧುವೆಗೆ ಶುಭ ಕೋರಿದ್ದಾರೆ. ಮೂಲತಃ ಬೆಂಗಳೂರಿನ ರೆಚೆಲ್ ಡೇವಿಡ್, ಮಲಯಾಲಂ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು.
/newsfirstlive-kannada/media/post_attachments/wp-content/uploads/2024/10/LOVE1.jpg)
ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ಜೊತೆ ಇರುಪತಿಯೊನ್ನಾಮ್ ನೂಟಾನ್ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದರು. ಇದಾದ ಬಳಿಕ ಮತ್ತೊಂದು ಮಲಯಾಲಂ ಸಿನಿಮಾ ಒರೊನೊನ್ನಾರ ಪ್ರಣಯಕಥಾ ಹಾಗೂ ಕಾವಲ್ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು. ಇದಾದ ನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಚೇಲ್ ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ನಟಿಸಿ ಫೇಮಸ್​ ಆದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us