newsfirstkannada.com

Rachita ram: ಹೂಗಳ ಲೋಕದಲ್ಲಿ ಡಿಂಪಲ್ ಕ್ವೀನ್.. ಅಭಿಮಾನಿ ಕೊಟ್ಟ ಸ್ಪೆಷಲ್‌ ಗಿಫ್ಟ್‌ಗೆ ರಚ್ಚು ಫಿದಾ

Share :

14-08-2023

    ಫ್ಲವರ್ ಶೋಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ

    ಸಸ್ಯಕಾಶಿಯಲ್ಲಿ ‘ರಚ್ಚು’ ಸೆಲ್ಫಿಗೆ ಮುತ್ತಿಕೊಂಡ ಫ್ಯಾನ್ಸ್‌

    ಅಭಿಮಾನಿ ಕೊಟ್ಟ ಉಡುಗೊರೆಗೆ ರಚಿತಾ ದಿಲ್‌ಖುಷ್

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ಗೆ ಇವತ್ತು ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ ಕೊಟ್ಟಿದ್ರು. ಫ್ಲವರ್ ಶೋನಲ್ಲಿ ಒಂದು ರೌಂಡ್ ಹಾಕಿದ ರಚ್ಚು ಹೂಗಳ ಅಲಂಕಾರ ವೀಕ್ಷಿಸಿದರು.

ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡ ನಟಿ ರಚಿತಾ ರಾಮ್ ತಮ್ಮ ಖುಷಿಯನ್ನು ಹಂಚಿಕೊಂಡರು. ಬಹಳ ವರ್ಷದ ನಂತರ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವನ್ನು ನೋಡುತ್ತಿದ್ದೇನೆ. ಈ ಬಾರಿಯ ಪ್ರದರ್ಶನ ತುಂಬಾ ಚೆನ್ನಾಗಿದೆ ಎಂದು ಸಂತಸ ಹಂಚಿಕೊಂಡರು.

ಲಾಲ್‌ಬಾಗ್‌ನಲ್ಲಿ ರಚಿತಾ ರಾಮ್‌ಗೆ ಗಿಫ್ಟ್ ಕೊಟ್ಟ ಅಭಿಮಾನಿ

ಲಾಲ್‌ಬಾಗ್ ಫ್ಲವರ್ ಶೋನಲ್ಲಿ ರಚಿತಾ ರಾಮ್‌ರನ್ನು ನೋಡಿದ ಅಭಿಮಾನಿಗಳು ಡಿಂಪಲ್ ಕ್ವೀನ್‌ರನ್ನು ನೋಡಲು ಮುಗಿಬಿದ್ದರು. ಫ್ಯಾನ್ಸ್‌ಗೆ ನಿರಾಸೆ ಮಾಡದ ರಚ್ಚು ಹಲವರಿಗೆ ಸೆಲ್ಫಿ ಕೊಟ್ಟರು.

ಲಾಲ್‌ಬಾಗ್ ಫ್ಲವರ್ ಶೋ ನೋಡುತ್ತಿದ್ದ ರಚಿತಾ ರಾಮ್‌ ಅವರಿಗೆ ಅಭಿಮಾನಿಯೊಬ್ಬರು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ರಚಿತಾ ರಾಮ್ ಅವರ ಫೋಟೋಫ್ರೇಮ್‌ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಗಿಫ್ಟ್ ನೋಡಿದ ರಚ್ಚು ಫುಲ್ ಖುಷಿಯಾಗಿದ್ದು, ಅಭಿಮಾನಿಗೆ ವಿಶೇಷ ಧನ್ಯವಾದ ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Rachita ram: ಹೂಗಳ ಲೋಕದಲ್ಲಿ ಡಿಂಪಲ್ ಕ್ವೀನ್.. ಅಭಿಮಾನಿ ಕೊಟ್ಟ ಸ್ಪೆಷಲ್‌ ಗಿಫ್ಟ್‌ಗೆ ರಚ್ಚು ಫಿದಾ

https://newsfirstlive.com/wp-content/uploads/2023/08/rachitha-ram-1.jpg

Load More