newsfirstkannada.com

ಟಾಲಿವುಡ್​ನಲ್ಲಿ ಕಿಸ್​ ಬೆಡಗಿಯ ಮಸ್ತ್ ಮೇನಿಯಾ: ಬೈಟು ಲವ್ ಸುಂದರಿ ಶ್ರೀಲೀಲಾಗೆ ಪ್ಲಸ್​ ಆಗಿರೋದೇನು?

Share :

01-07-2023

    ಸ್ಯಾಂಡಲ್​ವುಡ್​ ಶ್ರೀಲೀಲಾಗೆ ಖುಲಾಯಿಸುತ್ತಿದೆ ಲಕ್​ ಮೇಲೆ ಲಕ್​!

    ಬರೋಬ್ಬರಿ 12 ತೆಲುಗು ಸಿನಿಮಾಗಳಲ್ಲಿ ನಟಿಸೋಕೆ ಸೈ ಎಂದ ನಟಿ

    ಸ್ಟಾರ್​​ ನಟಿಯರನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ ಬೈಟು ಲವ್ ಸುಂದರಿ

ಟಾಲಿವುಡ್​ನಲ್ಲಿ ಇದೀಗ ಶ್ರೀಲೀಲಾ ಉತ್ಸವ ನಡೆಯುತ್ತಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 12 ತೆಲುಗು ಸಿನಿಮಾಗಳಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಸ್​​​ ನಟಿ ಶ್ರೀಲೀಲಾ ಎಷ್ಟು ಬ್ಯುಸಿ ಇದ್ದಾರೆ ಅಂದ್ರೆ ದಿನಕ್ಕೆ ಮೂರು ಶಿಫ್ಟ್​ನಲ್ಲಿ ಶೂಟಿಂಗ್ ಮಾಡ್ತಿದ್ದಾರಂತೆ. ಬೆಳಗ್ಗೆ ಒಂದು ಕಡೆ ಒಂದು​ ಸಿನಿಮಾದ ಶೂಟಿಂಗ್ ಮಾಡಿದರೆ, ಮಧ್ಯಾಹ್ನದವೊತ್ತಿಗೆ ಇನ್ನೊಂದು ಸಿನಿಮಾದ ಚಿತ್ರೀಕರಣಕ್ಕೆ ಹೋಗ್ತಾರಂತೆ. ಸಂಜೆ ಆ ಸಿನಿಮಾ ಪ್ಯಾಕೇಪ್ ಆಗ್ತಿದ್ದಂತೆ ರಾತ್ರಿ ಮತ್ತೊಂದು ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗ್ತಿದ್ದಾರಂತೆ ಬೈಟು ಲವ್ ಸುಂದರಿ.

ತೆಲುಗಿಗೆ ಶ್ರೀಲೀಲಾ ಎಂಟ್ರಿ ಆದ್ಮೇಲೆ ಸ್ಟಾರ್​ ಹೀರೋಯಿನ್​ಗಳನ್ನ ಕೇಳೋರೇ ಇಲ್ಲ ಎನ್ನಲಾಗ್ತಿದೆ. ಪೂಜಾ ಹೆಗ್ಡೆಗೆ ಲಕ್ ಕೈ ಹಿಡಿತಿಲ್ಲ. ಸಮಂತಾ, ತಮನ್ನಾ ವೆಬ್ ಸಿರೀಸ್​ ಕಡೆ ಫೋಕಸ್ ಮಾಡ್ತಿದ್ರೆ, ಸಾಯಿ ಪಲ್ಲವಿ ತುಂಬಾ ಚ್ಯೂಸಿಯಾಗಿ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ, ಶ್ರೀಲೀಲಾಗೆ ಹೆವಿ ಡಿಮ್ಯಾಂಡ್​ ಕ್ರಿಯೇಟ್ ಆಗಿದ್ದು, ಸೂಪರ್​ಸ್ಟಾರ್​ಗಳಿಂದ ಹಿಡಿದು ಹೊಸಬರ ಚಿತ್ರಗಳಿಗೂ ಶ್ರೀಲೀಲಾನೇ ಹೀರೋಯಿನ್ ಆಗಬೇಕು ಅಂತ ನಿರ್ಮಾಪಕರು ಪಟ್ಟು ಹಿಡಿದು ಕೂತಿದ್ದಾರೆ.

ಮಹೇಶ್ ಬಾಬು ನಟನೆಯ ‘ಗುಂಟುರು ಖಾರಂ’, ಬಾಲಕೃಷ್ಣ ನಟನೆಯ ‘ಭಗವಂತ್ ಕೇಸರಿ’, ಪವನ್ ಕಲ್ಯಾಣ್ ನಟನೆಯ ‘ಉಸ್ತದ್ ಭಗತ್ ಸಿಂಗ್’ ಚಿತ್ರಗಳಲ್ಲಿ ಶ್ರೀಲೀಲಾ ನಟಿಸ್ತಾಯಿದ್ದಾರೆ. ರಾಮ್ ಪೋತಿನೇನಿ, ವೈಷ್ಣವ್ ತೇಜ್ ನಟನೆಯ ಚಿತ್ರಗಳಿಗೂ ಶ್ರೀಲೀಲಾ ಹೀರೋಯಿನ್. ವಿಜಯ್ ದೇವರಕೊಂಡ, ನಿತೀನ್, ನವೀನ್ ಪೋಲಿಶೆಟ್ಟಿ ಜೊತೆಯೂ ಒಂದೊಂದು ಸಿನಿಮಾ ಅಧಿಕೃತವಾಗಿದೆ.

ಇನ್ನು, ನಾಲ್ಕೈದು ಚಿತ್ರಗಳು ಮಾತುಕತೆ ಹಂತದಲ್ಲಿದ್ದು, ಶೀಘ್ರದಲ್ಲೇ ಅದು ಕೂಡ ಫೈನಲ್ ಆಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಒಟ್ಟಿನಲ್ಲಿ, ಶ್ರೀಲೀಲಾಗೆ ತೆಲುಗು ಇಂಡಸ್ಟ್ರಿಯಲ್ಲಿ ಗೋಲ್ಡನ್ ಟೈಮ್ ಬಂದಿದೆ. ಡೇಟ್​ ಇಲ್ಲ ಸರ್, ಬ್ಯುಸಿ ಇದ್ದೇನೆ ಅಂದ್ರು ಪರವಾಗಿಲ್ಲ ಮೇಡಂ ಕಾಯ್ತೀವಿ ಅಂತೇಳಿ ಅಡ್ವಾನ್ಸ್ ಕೊಟ್ಟು ಹೋಗ್ತಿದ್ದಾರಂತೆ ನಿರ್ಮಾಪಕರು. ಇದನ್ನೇ ಅಲ್ವಾ ಅದೃಷ್ಟ ಅನ್ನೋದು.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಾಲಿವುಡ್​ನಲ್ಲಿ ಕಿಸ್​ ಬೆಡಗಿಯ ಮಸ್ತ್ ಮೇನಿಯಾ: ಬೈಟು ಲವ್ ಸುಂದರಿ ಶ್ರೀಲೀಲಾಗೆ ಪ್ಲಸ್​ ಆಗಿರೋದೇನು?

https://newsfirstlive.com/wp-content/uploads/2023/07/srilila.jpg

Load More