8 ಸಿನಿಮಾ ಅನೌನ್ಸ್.. ನಾಲ್ಕೈದು ಪ್ರಾಜೆಕ್ಟ್ ಒಪ್ಪಿಕೊಂಡಿರುವ ಬ್ಯೂಟಿ
ಕನ್ನಡದ ನಟಿಗೆ ಟಾಲಿವುಡ್ನಲ್ಲಿ ಇನ್ನು ಬರ್ತಾನೇ ಇದೆ ಡಿಮ್ಯಾಂಡ್!
100 ಕೋಟಿ ಕೊಟ್ರು ಆ ಚಿತ್ರ ಮಾಡಲ್ಲ ಅಂದಿದ್ದೇಕೆ ನಟಿ ಶ್ರೀಲೀಲಾ?
ಶ್ರೀಲೀಲಾ ಸದ್ಯ ಟಾಲಿವುಡ್ನ ನಂ 1 ಚಾಯ್ಸ್ ಆಗಿದ್ದಾರೆ. ಸಿಕ್ಕಾಪಟ್ಟೆ ಬೇಡಿಕೆ, ಕೈ ತುಂಬಾ ಸಿನಿಮಾಗಳು, ಶ್ರೀಲೀಲಾ ಮುಂದೆ ಈಗ ರಶ್ಮಿಕಾ, ಪೂಜಾ ಹೆಗ್ಡೆ ಎಲ್ಲರೂ ಠುಸ್ ಪಟಾಕಿ ಥರಾ ಆಗೋಗಿದ್ದಾರೆ. ಇಂಥಾ ಸಮಯದಲ್ಲಿ ಶ್ರೀಲೀಲಾಗೆ 10 ಕೋಟಿಯ ಆಫರ್ವೊಂದು ಬಂದಿತ್ತಂತೆ. ಆದ್ರೆ ಈ ಆಫರ್ ಒಪ್ಕೊಂಡಿಲ್ವಂತೆ ಕಿಸ್ ಬೆಡಗಿ. ಶ್ರೀಲೀಲಾ ಸದ್ಯ ಟಾಲಿವುಡ್ ಇಂಡಸ್ಟ್ರಿಯ ಸೆನ್ಸೇಷನ್. ತೆಲುಗು ಚಿತ್ರರಂಗದ ಟಾಪ್ ಹೀರೋಯಿನ್. ಸ್ಟಾರ್ ನಟರು ಹಾಗೂ ಪ್ರೊಡ್ಯೂಸರ್ಸ್ ಪಾಲಿಗೆ ಸ್ವೀಟ್ ಗುಲ್ಕನ್ ಅಂತಾನೇ ಹೇಳಬಹುದು.
ತೆಲುಗು ಸಿನಿಮಾಗಳಲ್ಲಿ ಪ್ರಸ್ತುತ ಶ್ರೀಲೀಲಾ ನಂಬರ್ 1 ಚಾಯ್ಸ್ ಆಗಿದ್ದಾರೆ. ಅದೃಷ್ಟ ಲಕ್ಷ್ಮಿ ಶ್ರೀಲೀಲಾ ಮನೆಯಲ್ಲಿ ಚಾಪೆ ಹಾಸ್ಕೊಂಡು ಮಲ್ಕೊಂಡು ಬಿಟ್ಟಿದ್ದಾಳೆ ಅನಿಸುತ್ತಿದೆ. ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ, ಸಮಂತಾ, ಸಾಯಿ ಪಲ್ಲವಿ ಅಂತ ಸ್ಟಾರ್ ಹೀರೋಯಿನ್ಸ್ ಇದ್ದರು ಕೂಡ ಅವರನ್ನೆಲ್ಲಾ ಹಿಂದಿಕ್ಕಿರೋ ಶ್ರೀಲೀಲಾ ಸ್ಟಾರ್ ನಟರ ಚಿತ್ರಗಳಿಗೆ ಲಕ್ಕಿ ಹೀರೋಯಿನ್ ಎನ್ನಿಸಿಕೊಳ್ತಿದ್ದಾರೆ. ಸದ್ಯಕ್ಕೆ ಯಾವುದೇ ಸ್ಟಾರ್ ನಟರ ಹೊಸ ಚಿತ್ರಗಳನ್ನ ನೋಡಿದ್ರು ಶ್ರೀಲೀಲಾ ನಾಯಕಿ ಆಗಿ ಕಾಣಿಸಿಕೊಳ್ಳುತ್ತಾರೆ. ಅಥವಾ ನಾಯಕಿಯನ್ನಾಗಿಸೋ ಮೊದಲ ಆಯ್ಕೆಯಾಗಿರುತ್ತಾರೆ. ಅಷ್ಟರ ಮಟ್ಟಿಗೆ ಕಿಸ್ ಬೆಡಗಿ ಟಾಲಿವುಡ್ ಬೆಳಗ್ತಾ ಇದ್ದಾರೆ.
8 ಸಿನಿಮಾ ಅನೌನ್ಸ್.. ನಾಲ್ಕೈದು ಪ್ರಾಜೆಕ್ಟ್ ಮಾತುಕತೆ!
ಬೇಡಿಕೆಯ ನಟಿಗೆ ಇನ್ನೂ ಬರ್ತಾನೇ ಇದೆ ಡಿಮ್ಯಾಂಡ್!
ಶ್ರೀಲೀಲಾ ಸದ್ಯ ತೆಲುಗಿನ 8 ಸಿನಿಮಾಗಳಲ್ಲಿ ನಾಯಕಿಯಾಗಿ ನಟನೆ ಮಾಡ್ತಿದ್ದಾರೆ. ಮಹೇಶ್ ಬಾಬು ಜೊತೆ ‘ಗುಂಟುರು ಖಾರಂ’, ಬಾಲಕೃಷ್ಣ ಜೊತೆ ‘ಭಗವಂತ್ ಕೇಸರಿ’, ಪವನ್ ಕಲ್ಯಾಣ್ ಜೊತೆ ‘ಉಸ್ತದ್ ಭಗತ್ ಸಿಂಗ್’ ಚಿತ್ರಗಳಲ್ಲಿ ಶ್ರೀಲೀಲಾ ನಟಿಸ್ತಾ ಇದ್ದಾರೆ. ರಾಮ್ ಪೋತಿನೇನಿ, ವೈಷ್ಣವ್ ತೇಜ್ ಚಿತ್ರಗಳಿಗೂ ಶ್ರೀಲೀಲಾ ಹೀರೋಯಿನ್. ವಿಜಯ್ ದೇವರಕೊಂಡ, ನಿತೀನ್, ನವೀನ್ ಪೋಲಿಶೆಟ್ಟಿ ಜೊತೆಯೂ ಒಂದೊಂದು ಸಿನಿಮಾ ಅಧಿಕೃತವಾಗಿದೆ. ಇನ್ನು, ನಾಲ್ಕೈದು ಚಿತ್ರಗಳು ಮಾತುಕತೆ ಹಂತದಲ್ಲಿದ್ದು, ಶೀಘ್ರದಲ್ಲೇ ಅದು ಕೂಡ ಫೈನಲ್ ಆಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಈ ನಡುವೆ ಮತ್ತಷ್ಟು ಹೊಸ ನಿರ್ಮಾಪಕರು ಶ್ರೀಲೀಲಾ ಮನೆ ಬಾಗಿಲಿಗೆ ಬಂದಿದ್ದಾರಂತೆ. ನಮಗೂ ಒಂದು ಸಿನಿಮಾ ಮಾಡಿ ಕೊಡಿ, ಡೇಟ್ಸ್ ಕೊಡಿ ಅಂತ ಕೇಳ್ತಿದ್ದಾರಂತೆ. ಅದರಲ್ಲಿ ಓರ್ವ ನಿರ್ಮಾಪಕನಂತೂ ಎಷ್ಟೇ ಕೋಟಿಯಾದ್ರು ಪರವಾಗಿಲ್ಲ ನನ್ನದೊಂದು ಚಿತ್ರವನ್ನ ನೀವು ಮಾಡಲೇಬೇಕು ಅಂತಾ ಹೇಳ್ತಾ ಇದ್ದಾರಂತೆ.
ಇದುವರೆಗೂ ಶ್ರೀಲೀಲಾ ನಟಿಸಿರುವ ಸಿನಿಮಾಗಳಲ್ಲಿ ಪೈಕಿ ರಿಲೀಸ್ ಆಗಿರೋದು ಕೇವಲ ಎರಡು ತೆಲುಗು ಚಿತ್ರ ಮಾತ್ರ. ಪೆಳ್ಳಿ ಸಂದಡಿ 2 ಹಾಗೂ ರವಿತೇಜ ಜೊತೆಗಿನ ಧಮಾಕ. ಮೊದಲನೇ ಸಿನಿಮಾ ಸಕ್ಸಸ್ ಆಗದೇ ಹೋದ್ರು ಶ್ರೀಲೀಲಾಗೆ ಪರ್ಸನಲ್ ಆಗಿ ಮೈಲೇಜ್ ತಂದುಕೊಡ್ತು. ಎರಡನೇ ಸಿನಿಮಾನೂ ಬ್ಲಾಕ್ಬಸ್ಟರ್ ಅಂತ ಹೇಳದಿದ್ರೂ ಸಿನಿಮಾ ಸೋತಿಲ್ಲ. ಆದರೂ ಶ್ರೀಲೀಲಾಗೆ ಇಷ್ಟೊಂದು ಕ್ರೇಜ್ ಯಾಕೆ? ಪ್ರೊಡ್ಯೂಸರ್ಸ್, ಸ್ಟಾರ್ ನಟರು ಯಾಕೆ ಶ್ರೀಲೀಲಾ ಮೇಲೆ ಇಷ್ಟೊಂದು ಫೋಕಸ್ ಮಾಡ್ತಿದ್ದಾರೆ ಅನ್ನೋದು ಬಹಳಷ್ಟು ಜನಕ್ಕೆ ಅರ್ಥ ಆಗ್ದೇ ಇರೋ ವಿಷ್ಯ. ಆದರೆ ಅರ್ಥ ಆಗಿದ್ದೇನು ಅಂದ್ರೆ ಶ್ರೀಲೀಲಾ ಟಾಲಿವುಡ್ನ ಫ್ಯೂಚರ್ ಸ್ಟಾರ್ ಅನ್ನೋದು. ಹಾಗಾಗಿಯೇ ಈ ಬೇಡಿಕೆ.
ಶ್ರೀಲೀಲಾಗೆ 10 ಕೋಟಿ ಆಫರ್ ಕೊಟ್ರಾ ನಿರ್ಮಾಪಕ?
100 ಕೋಟಿ ಕೊಟ್ರು ಆ ಚಿತ್ರ ಮಾಡಲ್ಲ ಅಂದಿದ್ದೇಕೆ ಶ್ರೀಲೀಲಾ?
ಆ್ಯಕ್ಟಿಂಗ್, ಡ್ಯಾನ್ಸ್, ಬ್ಯೂಟಿ ಎಲ್ಲದರಲ್ಲೂ ಟಾಪ್ ಕ್ಲಾಸ್ ಎನಿಸಿಕೊಂಡಿರುವ ಶ್ರೀಲೀಲಾಗೆ ಈಗ ಗೋಲ್ಡನ್ ಟೈಮ್. ಶ್ರೀಲೀಲಾ ಎಷ್ಟೇ ಕೋಟಿ ಕೇಳಿದ್ರು ಕೊಡೋ ನಿರ್ಮಾಪಕರು ಹುಟ್ಕೊಂಡಿದ್ದಾರೆ. ಹಾಗಂತ ಇರೋ ಬರೋ ಎಲ್ಲ ಚಿತ್ರಗಳನ್ನ ಮಾಡ್ತಿಲ್ಲ ಕಿಸ್ ಬೆಡಗಿ. ಸ್ಟಾರ್ಸ್, ಸ್ಕ್ರಿಪ್ಟ್, ಪೇಮೆಂಟ್ ಎಲ್ಲದರ ಬಗ್ಗೆಯೂ ಥಿಂಕ್ ಮಾಡಿಯೇ ಸೆಲೆಕ್ಟ್ ಮಾಡ್ಕೊಳ್ತಿರೋ ನಟಿ, ಆ ಒಂದು ವಿಚಾರದಲ್ಲಂತೂ ಸಿಕ್ಕಾಪಟ್ಟೆ ಸಿರೀಯಸ್ ಆಗಿದ್ದಾರಂತೆ. ಹಾಗಾಗಿ 10 ಕೋಟಿ ಅಲ್ಲ, 100 ಕೋಟಿ ಕೊಟ್ರು ನಾನು ಅಂಥ ಪಾತ್ರಗಳನ್ನ ಮಾಡೋದಿಲ್ಲ ಅಂತ ಖಡಕ್ ಆಗಿ ಹೇಳಿಬಿಟ್ಟಿದ್ದಾರೆ. ಶ್ರೀಲೀಲಾ ಅವರು ಈ ನಿರ್ಧಾರ ಈಗ ಸರ್ಪ್ರೈಸ್ ಅನಿಸ್ತಾ ಇದೆ.
ಬೋಲ್ಡ್ ಮಾತ್ರ ಮಾಡಲ್ಲವಂತೆ ಕನ್ನಡದ ಹುಡುಗಿ!
ಶ್ರೀಲೀಲಾ ಗ್ಲಾಮರ್ ಕ್ವೀನ್ ಆಗುವ ಎಲ್ಲಾ ಲಕ್ಷಣ ಇದೆ. ಅದಕ್ಕಾಗಿಯೇ ಸ್ಟಾರ್ ನಟರು ಶ್ರೀಲೀಲಾನ ಪಿಕ್ ಮಾಡಿಕೊಳ್ತಿರೋದು. ಹಾಗಂತ ಎಲ್ಲ ತರಹದ ಪಾತ್ರ ಮಾಡ್ತಾರೆ ಅಂದುಕೊಂಡ್ರೆ ಅದು ತಪ್ಪು. ಯಾಕಂದ್ರೆ ಶ್ರೀಲೀಲಾ ಗ್ಲಾಮರ್ ಆಗಿ ನಟಿಸ್ತಾರೆ ಹಾಗಂತ ಬೋಲ್ಡ್ ಸೀನ್ ಅಥವಾ ಇಂಟಿಮೆಟ್ ಸೀನ್ಗಳಲ್ಲಿ ನಟಿಸೋದಿಲ್ಲ ಎಂದು ಹೇಳಿದ್ದಾರೆ. ಅದು ಯಾವುದೇ ಸಿನಿಮಾ ಆಗಲಿ, ಯಾವುದೇ ನಟನ ಜೊತೆ ಆದರೂ ಸರಿ ಅನ್ನೋ ಗಟ್ಟಿ ನಿರ್ಧಾರದಲ್ಲಿದ್ದಾರಂತೆ. ಹಾಗಾಗಿಯೇ ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಅಂತ ಬಂದಿದ್ದ ನಿರ್ಮಾಪಕನನ್ನ ಖಾಲಿ ಕೈಯಲ್ಲಿ ಕಳುಹಿಸಿದಂತೆ.
ಇಂಡಸ್ಟ್ರಿ ಬಿಡ್ತೇನೆ.. ಆದ್ರೆ ಅಂಥ ಸಿನಿಮಾ ಮಾಡಲ್ಲ!
ಶ್ರೀಲೀಲಾ ಈ ವಿಚಾರದಲ್ಲಿ ಎಷ್ಟು ಸಿರೀಯಸ್ ಆಗಿದ್ದಾರೆ ಅಂದ್ರೆ ಸಿನಿಮಾ ಇಂಡಸ್ಟ್ರಿ ಬಿಟ್ಟು ಡಾಕ್ಟರ್ ಆಗಿ ಕೆಲಸ ಮಾಡ್ತೇನೆ ಹೊರತು ಬೋಲ್ಡ್ ಪಾತ್ರವನ್ನ ಯಾವುದೇ ಕಾರಣಕ್ಕೂ ಮಾಡಲ್ಲ ಎನ್ನುವ ಮಟ್ಟಿಗೆ ಸ್ಟ್ರಾಂಗ್ ಆಗಿದ್ದಾರಂತೆ. ಇದು ಸಿನಿಮಾ ಇಂಡಸ್ಟ್ರಿಗೆ ಸರ್ಪ್ರೈಸ್ ಜೊತೆ ಶಾಕ್ ಕೊಟ್ಟಿದೆ. ನಟಿ ಅಂದ್ಮೇಲೆ ಎಲ್ಲಾ ತರಹದ ಪಾತ್ರಗಳನ್ನ ಮಾಡಬೇಕು ಅನ್ನೋದು ಸಾಮಾನ್ಯ. ಹಾಗಂತ ಇಷ್ಟವಾಗದ, ಕಂಫರ್ಟ್ ಎನಿಸದೇ ಮಾತ್ರಗಳನ್ನ ಮಾಡಲೇಬೇಕು ಅಂತ ಏನೂ ಇಲ್ಲ. ಇನ್ನು ಒಬ್ಬೊಬ್ಬ ನಟಿಯೂ ಒಂದೊಂದು ವಿಷ್ಯದಲ್ಲಿ ಇಂಥಹದೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಿರುತ್ತಾರೆ. ಶ್ರೀಲೀಲಾ ಈ ವಿಷ್ಯದಲ್ಲಿ ತಗೊಂಡಿದ್ದಾರೆ ಅಷ್ಟೇ. ಇದನ್ನ ಸರಿ ತಪ್ಪು ಅಂತ ಜಡ್ಜ್ ಮಾಡೋಕೆ ಆಗಲ್ಲ. ಸದ್ಯದ ಮಟ್ಟಿಗಂತೂ ಟಾಲಿವುಡ್ ಪೂರ್ತಿ ಶ್ರೀಲೀಲಾಮಯಂ. ಶ್ರೀಲೀಲಾನೇ ಸರ್ವಂ ಅನ್ನೋಥರ ಆಗಿದೆ. ಈ ಕ್ರೇಜ್, ಈ ಡಿಮ್ಯಾಂಡ್ನ ಶ್ರೀಲೀಲಾ ಎಷ್ಟು ಬಳಸಿಕೊಳ್ತಾರೆ ಅಂತ ಕಾದುನೋಡೋಣ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ