newsfirstkannada.com

Breaking News: ‘ಅಮೃತ ವರ್ಷಿಣಿ‘ ಖ್ಯಾತಿಯ ನಟ ಶರತ್​ ಬಾಬು ನಿಧನ

Share :

22-05-2023

  ಬಹುಭಾಷಾ ನಟ ಶರತ್​ ಬಾಬು ನಿಧನ

  ಅಮೃತ ವರ್ಷಿಣಿಯಲ್ಲಿ ಮನಗೆದ್ದಿದ್ದ ನಟ

  40 ವರ್ಷ ಬಣ್ಣದ ಲೋಕದಲ್ಲಿ ಬಾಬು ಚಿತ್ತಾರ

ಅಮೃತ ವರ್ಷಿಣಿ, ನಮ್ಮ ಯಜಮಾನ್ರು ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ ಬಹುಭಾಷಾ ನಟ ಶರತ್​ ಬಾಬು ನಿಧನರಾಗಿದ್ದಾರೆ.

ನಟ ಶರತ್​ ಬಾಬು ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರು ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಬಳಿಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಹೈದರಾಬಾದ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದೇ ವಿಚಾರ ತಿಳಿದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವರ ಸಾವಿನ ವದಂತಿಯನ್ನು ಹಬ್ಬಿಸಿದ್ದರು. ಅವರ ಸಹೋದರಿ ಇದೊಂದು ಸುಳ್ಳು ಸುದ್ದಿ, ಯಾರೂ ಕೂಡ ಇಂತಹ ಸುದ್ದಿಯನ್ನು ಹಬ್ಬಿಸಬೇಡಿ ಎಂದು ಮನವಿ ಕೂಡ ಮಾಡಿಕೊಂಡಿದ್ದರು. ಆದರೀಗ 71 ವರ್ಷ ವಯಸ್ಸಿನ ನಟ ಶರತ್​ ಬಾಬು ಅಸೌಖ್ಯದಿಂದ ನಿಧನರಾಗಿದ್ದಾರೆ. ಇವರ ಸಾವಿಗೆ ಸಿನಿ ತಾರೆಯರು ಕಂಬನಿ ಸುರಿಸಿದ್ದಾರೆ.

ಇದನ್ನೂ ಓದಿ: ₹2000 ನೋಟಿನಿಂದ ಚಿನ್ನಕ್ಕೆ ಡಿಮ್ಯಾಂಡ್‌; ಬಂಗಾರ ಕೊಳ್ಳಲು ಜನ ಮುಗಿಬಿದ್ದಿದ್ದು ಯಾಕೆ?

ಶರತ್​ ಬಾಬು ಅವರು 1973 ರಲ್ಲಿ ಚಿತ್ರರಂಗ ಪ್ರವೇಶಿಸಿದರು ತೆಲುಗು, ತಮಿಳು ಚಿತ್ರದಲ್ಲಿ ಮಾತ್ರವಲ್ಲದೆ, ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. 200ಕ್ಕೂ ಹೆಚ್ಚು ಸಿನಿಮಾಗಲ್ಲಿ ಇವರು ನಟಿಸಿದ್ದು, ಸುಮಾರು 40 ವರ್ಷಗಳ ಕಾಲ ತೆರೆ ಮೇಲೆ ಬಣ್ಣ ಹಚ್ಚಿದ್ದಾರೆ.

ಕನ್ನಡ ಸಿನಿಮಾದಲ್ಲೂ ನಟಿಸಿದ ಶರತ್​ ಬಾಬು ಅಮೃತವರ್ಷಿಣಿ, ಹೃದಯ-ಹೃದಯ, ನೀಲ, ನಮ್ಮ ಯಜಮಾನ್ರು, ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ ಸಿನಿಮಾದಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದರು. ಅಂದಿನ ಕಾಲದಲ್ಲಿ ಬಹುತೇಕರಿಗೆ ಇವರು ಫೇವರೇಟ್​ ನಟ ಎಂದೆನಿಸಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Breaking News: ‘ಅಮೃತ ವರ್ಷಿಣಿ‘ ಖ್ಯಾತಿಯ ನಟ ಶರತ್​ ಬಾಬು ನಿಧನ

https://newsfirstlive.com/wp-content/uploads/2023/05/Sharath-Babu.jpg

Load More