61ರ ಹುಟ್ಟುಹಬ್ಬದಲ್ಲೂ 21ರ ಯುವಕನಂತೆ ಕಾಣುವ ಶಿವಣ್ಣ
ನಾಳೆ ಸೆಂಚುರಿ ಸ್ಟಾರ್ ಎಲ್ಲಿಗೆ ಹೋಗ್ತಾರೆ? ಏನೇನ್ ಮಾಡ್ತಾರೆ?
ಶಿವಣ್ಣನ ಘೋಸ್ಟ್ ಸಿನಿಮಾದ ಟೀಸರ್ ಲಾಂಚ್ ಯಾವಾಗ?
ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಸ್ಯಾಂಡಲ್ವುಡ್ನ ಬಹುಬೇಡಿಕೆ ನಟ. ಸದಾ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಶಿವಣ್ಣ ನಾಳೆ 61ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ ಅಂದರೆ ಯಾರೂ ನಂಬೋದೇ ಇಲ್ಲ. ಯಾಕಂದ್ರೆ ಇನ್ನೂ ಯಂಗ್ & ಎನರ್ಜಿಯಾಗಿ ಶಿವಣ್ಣ ಕಾಣಿಸುತ್ತಿದ್ದಾರೆ. ಸದ್ಯ ಅವರ ಅಭಿಮಾನಿಗಳು ಬರ್ತ್ಡೇಯನ್ನು ಸಂಭ್ರಮದಿಂದ ಆಚರಣೆ ಮಾಡಲು ತೀರ್ಮಾನ ಮಾಡಿದ್ದಾರೆ. ಅಲ್ಲದೇ ಘೋಷ್ಟ್ ಸಿನಿಮಾದಲ್ಲಿ ಶಿವಣ್ಣ ನ್ಯೂ ಲುಕ್ನಲ್ಲಿ ಅಭಿನಯಿಸುತ್ತಿದ್ದು ಚಿತ್ರತಂಡ ಕೂಡ ಶಿವಣ್ಣ ಹುಟ್ಟು ಹಬ್ಬಕ್ಕೆ ಈಗಾಗಲೇ ಭರ್ಜರಿ ತಯಾರಿ ನಡೆಸಿದೆ.
ಜುಲೈ 12 ಅಂದರೆ ನಾಳೆಯೇ ಶಿವರಾಜ್ ಕುಮಾರ್ ಅವರು 61ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಇವರನ್ನು ನೋಡಿದವಱರು ಶಿವಣ್ಣಗೆ 61 ವರ್ಷನಾ..? ಆದರೂ ಎಷ್ಟೊಂದು ಯಂಗ್ ಆಗಿ ಇದ್ದರಲ್ಲ ಎಂದು ಹೇಳುವುದಂತು ಗ್ಯಾರಂಟಿ. ಇನ್ನು ಶಿವಣ್ಣನಿಗೆ ಅಭಿಮಾನ ಬಗಳ ತುಂಬಾ ದೊಡ್ಡದಿದ್ದು ಇಂದು ರಾತ್ರಿ 12 ಗಂಟೆಯಿಂದ ಬರ್ತ್ಡೇ ಸಂಭ್ರಮ ಮುಗಿಲು ಮುಟ್ಟಲಿದೆ. ರಾತ್ರಿ ಶಿವಣ್ಣ ಮನೆ ಮುಂದೆ ಪಟಾಕಿ ಸಿಡಿಸಿ, ಕೇಕ್ ಕಟ್ ಮಾಡಲು ಫ್ಯಾನ್ಸ್ ಪ್ಲಾನ್ ಮಾಡಿದ್ದಾರೆ.
ಶಿವಣ್ಣನ ನಾಳೆಯ ಕಾರ್ಯಕ್ರಮಗಳು..!
ಇನ್ನು ನಾಳೆ ವಿಶ್ ಮಾಡಲು ತಮ್ಮ ನಿವಾಸದ ಬಳಿ ಬರುವ ಅಭಿಮಾನಿಗಳನ್ನು ಬೆಳಗ್ಗೆ 7:30 ರಿಂದ 9:30ರ ತನಕ ಹ್ಯಾಟ್ರಿಕ್ ಹೀರೋ ಭೇಟಿಯಾಗಲಿದ್ದಾರೆ. 9:30ರ ನಂತರ ಮಾನ್ಯತಾ ಟೆಕ್ ಪಾರ್ಕ್ನಿಂದ ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜಕುಮಾರ್ ಅವರ ಸಮಾಧಿಗೆ ತೆರಳಿ ಅಲ್ಲಿ ಪೂಜೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.
ಸಂತೋಷ್ ಥಿಯೇಟರ್ನಲ್ಲಿ ಟೀಸರ್ ಲಾಂಚ್
ತಂದೆ ಮತ್ತು ಸಹೋದರನ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ 10 ಗಂಟೆಗೆ ನಗರದ ಸಂತೋಷ್ ಥಿಯೇಟರ್ಗೆ ಆಗಮಿಸಿ ತಮ್ಮ ಹೊಸ ಸಿನಿಮಾ ಘೋಸ್ಟ್ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಥಿಯೇಟರ್ ಬಳಿ ಅವರ ಅಭಿಮಾನಿಗಳು ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕಿದ್ದಾರೆ. ಈ ಸಿನಿಮಾದ ಟೀಸರ್ ಲಾಂಚ್ ಆಗುತ್ತಿದ್ದಂತೆ 12:30ಕ್ಕೆ ಮತ್ತೆ ತಮ್ಮ ನಿವಾಸಕ್ಕೆ ವಾಪಸ್ ಆಗಲಿದ್ದಾರೆ. ಈ ವೇಳೆ ಫ್ಯಾನ್ಸ್ಗೆ ಬಿರಿಯಾನಿ ಹಂಚುವ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ನಾಳೆ ದಿನ ಪೂರ್ತಿ ಶಿವಣ್ಣ ತನ್ನ ಅಭಿಮಾನಿಗಳ ಭೇಟಿಗಾಗಿಯೇ ಮೀಸಲಿರಿಸಲಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ