ಪ್ರತಿಷ್ಠಿತರ ಮನೆಗಳಿಗೆ ಲಗ್ಗೆ ಹಾಕಿ ಜಾಲಾಡಿದ ಸಿಬ್ಬಂದಿ
‘ಬೀರುವಲ್ಲಿ ಬಿದ್ದಿದ್ದ’ ಪೆಂಡೆಂಟ್ ಒಪ್ಪಿಸಿದ ಕುಮಾರಸ್ವಾಮಿ
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ಗೆ ನೋಟಿಸ್
ರಾಜ್ಯದಲ್ಲಿ ಹುಲಿ ಉಗುರು ಸಖತ್ ಸದ್ದು ಮಾಡುತ್ತಿದೆ. ಬಿಗ್ಬಾಸ್ನಿಂದ ಶುರುವಾದ ವ್ಯಾಘ್ರ ಘರ್ಜನೆ, ಸ್ಯಾಂಡಲ್ವುಡ್ಗೂ ಬಂದು ನಿಂತಿದೆ. ಸ್ವಾಮೀಜಿಗಳ ಹೆಸರು ಪ್ರಕರಣದಲ್ಲಿ ಕೇಳಿಸಿದೆ. ಸದ್ಯ ಅರಣ್ಯ ಇಲಾಖೆಗೆ ನಟ ಜಗ್ಗೇಶ್, ಮಾಜಿ ಸಿಎಂ ಹೆಚ್ಡಿಕೆ ಹುಲಿ ಉಗುರು ಒಪ್ಪಿಸಿದ್ದಾರೆ ಎಂದು ಗೊತ್ತಾಗಿದೆ. ಆದರೆ, ರಾಕ್ಲೈನ್ ಮನೆಯಲ್ಲಿ ಎಷ್ಟೇ ಸರ್ಚಿಂಗ್ ಮಾಡಿದ್ರು ಪೆಂಡೆಂಟ್ ಸಿಕ್ಕಿಲ್ಲ.
ಹೊಂಬಣ್ಣದ ರೋಮ, ಕಡುಗಪ್ಪು ಪಟ್ಟಿಗಳಿಂದ ಅಲಂಕೃತಗೊಂಡ ಪ್ರಖ್ಯಾತ ಪ್ರಾಣಿ. ಕಪ್ಪು ಕರ್ಣ, ಕಣ್ಣು ಮಿಟುಕಿಸುವ ಬಿಳಿ ಚುಕ್ಕೆ, ಶಕ್ತಿಯುತ ಮುಂಗಾಲು.. ಇದ್ದಷ್ಟು ಹೊತ್ತು ಕರ್ನಾಟಕದ ಕಗ್ಗಾಡನ್ನ ಘನತೆಯಿಂದ ಆಳುತ್ತಿರುವ ಸಮರ್ಥ ಮಾರ್ಜಾಲ. ಶತಮಾನಗಳಿಂದ ತನ್ನ ಉಳಿವಿಗಾಗಿ ಹೋರಾಡಿರುವ ಪ್ರಾಣಿ. ಈ ಘನ ಗಂಭೀರ ಹುಲಿರಾಯನಿಗೆ ಮಾನವನ ಆತೀ ಆಸೆಗಳೇ ಶತ್ರು.
‘ಮಾರ್ಜಾಲ’ ಉಗುರಿನ ಹಿಂದೆ ಬಿದ್ದ ಅರಣ್ಯ ಇಲಾಖೆ!
ಹುಲಿಯ ಉಸಿರು, ಘರ್ಜನೆಯಷ್ಟೇ ಭಯ-ಭೀಕರ. ಆದರೆ, ರಾಜ್ಯದಲ್ಲಿ ಉಸಿರು ನಿಲ್ಲಿಸಿದ ಹುಲಿಗಳ ಘರ್ಜನೆ ಕೇಳಿಸ್ತಿದೆ. ಈ ಘರ್ಜನೆಗೆ ತೆರೆ ಮೇಲೆ ಅಬ್ಬರಿಸ್ತಿದ್ದ ನಟ ಭಯಂಕರರ ನಿದ್ದೆಯೇ ಉಡುಗಿದೆ. ಕಳೆದ ಎರಡು ದಿನಗಳಿಂದ ಪ್ರತಿಷ್ಠಿತರ ಪಾಲಿಗೆ, ಈ ಪಟ್ಟೆವೀರನ ರಣಬೇಟೆ ಪಂಜಿನ ಉಗುರು ಮಾಸದ ಗಾಯ ಮಾಡ್ತಿದೆ. ಅಂದಹಾಗೆಯೇ ನಿನ್ನೆ ಇಡೀ ದಿನ ವ್ಯಾಘ್ರನಖ ಹೊಂದಿದ್ದವರ ಮನೆ ಎಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಜಾಲಾಡಿದ್ದಾರೆ.
ನಿನ್ನೆ ಸತತ ಎರಡು ಗಂಟೆಗೂ ಹೆಚ್ಚು ಕಾಲ ನವರಸ ನಾಯಕ ಜಗ್ಗೇಶ್ ಮನೆಯ ತಪಾಸಣೆ ಮಾಡಲಾಗಿದೆ. ಜಗ್ಗೇಶ್ರ ಮಲ್ಲೇಶ್ವರಂ ಮನೆಯಲ್ಲಿದ್ದ ಲಾಕೆಟ್ ವಶಕ್ಕೆ ಪಡೆಯಲಾಗಿದೆ. ಲಾಕೆಟ್ನಲ್ಲಿದ್ದ ಉಗುರು ಯಾವ ಪ್ರಾಣಿಯದ್ದು ಅನ್ನೋದನ್ನ ಚೆಕ್ ಮಾಡಲು ಲ್ಯಾಬ್ಗೆ ಕಳಿಸಲಾಗ್ತಿದೆ. ಈ ಬಗ್ಗೆ ಟ್ವೀಟ್ ಮಾಡಿದ ನಟ ಜಗ್ಗೇಶ್, ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ ಅಂತ ಹೇಳಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ನಡೆದ ಕ್ಯಾಂಪೇನ್ಗೂ ಟಾಂಗ್ ಕೊಟ್ಟಿದ್ದಾರೆ.
ಅಮ್ಮನ ಕಾಣಿಕೆ ಮೇಲೆ ಕಣ್ಣು!
‘ಕಾನೂನು ದೊಡ್ಡದು. ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು, ಸಮಾಜ ಘಾತಕರಿಗಿಂತ ನನ್ನ ತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲ, ಮಾಡೋದಿಲ್ಲಾ, ಪಾಚ್ಕೊಳಿ’
ಕಾನೂನು ದೊಡ್ಡದು🙏
ಅಧಿಕಾರಿಗಳು ಕೇಳಿದವಸ್ತು ಒಪ್ಪಿಸಲಾಗಿದೆ!
ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ!
ಎಷ್ಟೋ ದೋಚುವ ಮನುಷ್ಯರು,
ಕೊಲೆ ಪಾತಕರು,
ದೇಶದ್ರೋಹಿಗಳು,ಸಮಾಜ ಘಾತಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ🙏ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ!ಪಾಚ್ಕೊಳಿ. pic.twitter.com/mWu5aXpXmp— ನವರಸನಾಯಕ ಜಗ್ಗೇಶ್ (@Jaggesh2) October 25, 2023
ನಿಖಿಲ್ಗೆ ಎದುರಾಯ್ತಾ ಮದುವೆ ಉಡುಗೊರೆ ಕಂಟಕ!?
ಇನ್ನು, ಹುಲಿ ಉಗುರು, ನಿಖಿಲ್ ಕಂಠಕ್ಕೂ ಸುತ್ತಿದೆ. ಈ ಕುರಿತು ಮಾತ್ನಾಡಿದ ಮಾಜಿ ಸಿಎಂ ಮಾಜಿ ಸಿಎಂ ಕುಮಾರಸ್ವಾಮಿ, ಪುತ್ರನ ಹೆಸರು ಬಂದಾಕ್ಷಣ ಅಧಿಕಾರಿಗಳಿಗೆ ನಾನೇ ಕರೆದು ಪರಿಶೀಲನೆಗೆ ಅನುಮತಿ ನೀಡಿದ್ದೇನೆ ಅಂತ ತಿಳಿಸಿದ್ರು. ಮದುವೆಯಲ್ಲಿ ಗಿಫ್ಟ್ ಕೊಟ್ರು ಅಂತ ನಿಖಿಲ್ ಹಾಕಿದ್ದು ಬಿಟ್ರೆ ಬೀರುವಲ್ಲಿ ಬಿದ್ದಿತ್ತು. ಮಹಜರ್ಗೆ ನಾನೇ ಸಹಿ ಹಾಕಿದ್ದು, ಎಫ್ಎಸ್ಎಲ್ಗೆ ಕಳಿಸಿ ವಾಸ್ತವಾಂಶ ಪತ್ತೆ ಹಚ್ಚಿ ಅಂತ ತಿಳಿಸಿದ್ದಾಗಿ ಹೇಳಿದ್ದಾರೆ.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ಗೆ ನೋಟಿಸ್
ಇತ್ತ, ನಿರ್ಮಾಪಕ ರಾಕ್ಲೈನ್ ನಿವಾಸದಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆದಿದೆ. ಆದರೆ, ಮನೆಯಲ್ಲಿ ಯಾವುದೇ ಪೆಂಡೆಂಟ್ ಪತ್ತೆಯಾಗಿಲ್ಲ ಅಂತ ಗೊತ್ತಾಗಿದೆ. ವಿದೇಶ ಪ್ರವಾಸದಲ್ಲಿರುವ ರಾಕ್ಲೈನ್ ವೆಂಕಟೇಶ್ರನ್ನ ಸಂಪರ್ಕ ಮಾಡಲು ಯತ್ನಿಸಲಾಗಿದೆ. ಅಲ್ಲದೆ, ಪೆಂಡೆಂಟ್ಗಾಗಿ ನೋಟಿಸ್ ಕೂಡ ಸರ್ವ್ ಮಾಡಲಾಗಿದೆ.
ಒಟ್ಟಾರೆ, ನೈಸರ್ಗಿಕ ನಿಧಿಯ ಪ್ರತಿಯೊಂದು ಅಂಗುಲ ಕೂಡ ಮಾನವ ಜಗತ್ತಿನಲ್ಲಿ ತುಂಬಾ ಬೆಲೆ ಬಾಳುವಂತದ್ದು. ಕಾಡಿನಿಂದ ವಿಮುಖನಾದ ಮಾನವನಿಗೆ ಅರಣ್ಯ ನ್ಯಾಯದ ಪಾಠ ಆಗಬೇಕಿದೆ. ಅಳಿವಿನ ಅಂಚಿನಲ್ಲಿರುವ ಧೈರ್ಯಶಾಲಿ ಹುಲಿಯ ಬಗ್ಗೆ ಜಾಗೃತಿ ಆಗಬೇಕಿದೆ.