newsfirstkannada.com

ಬ್ಯಾಂಕಾಕ್‌ನತ್ತ ನಟ ವಿಜಯ್​ ರಾಘವೇಂದ್ರ ಕುಟುಂಬ.. ನಾಳೆ ಸ್ಪಂದನಾ ಮೃತದೇಹ ಬೆಂಗಳೂರಿಗೆ ರವಾನೆ ಸಾಧ್ಯತೆ

Share :

07-08-2023

    ನಟಿಯಾಗಿಯೂ ಗುರುತಿಸಿಕೊಂಡಿದ್ದರು ಸ್ಪಂದನಾ

    ಚಿನ್ನಾರಿ ಮುತ್ತನ ಪತ್ನಿ ಸ್ಪಂದನಾಗೆ ಹೃದಯಾಘಾತ

    ಲೋ ಬಿಪಿ ಜೊತೆಗೆ ಹೃದಯಾಘಾತ ಆಗಿರುವ ಮಾಹಿತಿ

ಸ್ಯಾಂಡಲ್​ವುಡ್​ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿದೇಶದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ ರಾಘವೇಂದ್ರ ಕುಟುಂಬ ಬ್ಯಾಂಕಾಕ್‌ನತ್ತ ಹೊರಟಿದೆ. ಬ್ಯಾಂಕಾಕ್​ನಿಂದ ಅವರ ಪಾರ್ಥಿವ ಶರೀರವನ್ನು ನಾಳೆ ಬೆಂಗಳೂರಿಗೆ ತರಬಹುದು ಎಂದು ಹೇಳಲಾಗುತ್ತಿದೆ.

ನಟ ವಿಜಯಯ್​ ರಾಘವೇಂದ್ರ ಅವರು ಬೆಂಗಳೂರಿನಲ್ಲಿದ್ದು ಶೀಘ್ರದಲ್ಲೇ ಕುಟುಂಬ ಸದಸ್ಯರೊಂದಿಗೆ ಬ್ಯಾಂಕಾಕ್​ಗೆ ತೆರಳಲಿದ್ದಾರೆ. ಬಳಿಕ ಅಲ್ಲಿಂದ ಮೃತದೇಹವನ್ನು ತರಲಾಗುತ್ತದೆ.

ಸ್ಪಂದನಾ ಅವರು ವಿ.ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರ ಹೆಂಡತಿಯಾಗಿ ನಟಿಸಿದ್ದರು. ಸ್ಪಂದನಾ 2007ರಲ್ಲಿ ವಿಜಯ ರಾಘವೇಂದ್ರ ಅವರನ್ನು ವಿವಾಹವಾದರು. ಇವರಿಗೆ ಶೌರ್ಯ ಎಂಬ ಮುದ್ದಾದ ಮಗನಿದ್ದಾನೆ. ಸ್ಪಂದನಾ ಅವರ ನಿಧನದ ಸುದ್ದಿ ಸ್ಯಾಂಡಲ್‌ವುಡ್‌ಗೆ ಶಾಕಿಂಗ್ ನ್ಯೂಸ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಯಾಂಕಾಕ್‌ನತ್ತ ನಟ ವಿಜಯ್​ ರಾಘವೇಂದ್ರ ಕುಟುಂಬ.. ನಾಳೆ ಸ್ಪಂದನಾ ಮೃತದೇಹ ಬೆಂಗಳೂರಿಗೆ ರವಾನೆ ಸಾಧ್ಯತೆ

https://newsfirstlive.com/wp-content/uploads/2023/08/VIJAYARAGHAVENDRA_WIFE_2.jpg

Load More