ಮುತ್ತತ್ತಿ ಸತ್ಯರಾಜು ಟೈಟಲ್, ನಂದಕಿಶೋರ್ ಡೈರೆಕ್ಟರ್ ಎಂದಿದ್ದರು
ನಿರ್ಮಾಪಕನ ಆರೋಪಗಳೆಲ್ಲ ಸುಳ್ಳು ಎಂದು ನೇರವಾಗಿ ಸಮರ..!
ಸುದೀಪ್-ಕುಮಾರ್ ನಡುವೆ ಹಗೆತನ ಶುರುವಾಗಲು ಏನು ಕಾರಣ?
ಕಿಚ್ಚ ಸುದೀಪ್ ಮತ್ತೊಮ್ಮೆ ಪ್ಯಾನ್ ಇಂಡಿಯಾ ಲೆವೆಲ್ಗೆ ಸುದ್ದಿಯಲ್ಲಿದ್ದಾರೆ. ಡೆಮಾನ್ ಟೀಸರ್ ರಿಲೀಸ್ ಆಯ್ತು ಇದೇ ವಿಚಾರಕ್ಕೆ ರನ್ನ ಟಾಕ್ ಆಫ್ ದಿ ಡೇ ಆದ್ರಾ. ಇಲ್ಲಾ, ನಿರ್ಮಾಪಕರೊಬ್ಬರು ಮಾಡಿದ ಕಿಚ್ಚಿನ ಆರೋಪದಿಂದಾನಾ. ನೋ ಇದೆಲ್ಲ ಮುಗಿದ ಚಾಪ್ಟರ್. ಕಿಚ್ಚನಿಂದ ಈಗ ಶುರು ಕಾನೂನು ಸಮರ.
ಕೆಲವೇ ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಅವರ 46ನೇ ಚಿತ್ರದ ಟೀಸರ್ ಅಬ್ಬರಿಸಿತ್ತು. ಇನ್ಫ್ಯಾಕ್ಟ್ ಈಗಲೂ ಸದ್ದು ಮಾಡ್ತಾನೇ ಇದೆ. ಆದ್ರೆ, ಡಿಮೊನ್ ಎಂಟ್ರಿಗೆ ಪ್ಯಾನ್ ಇಂಡಿಯಾ ಶೇಕ್ ಆಗ್ತಿದೆ ಅನ್ನೊವಷ್ಟರಲ್ಲೇ ಕಿಚ್ಚ ಫ್ಯಾನ್ಸ್ ಅನ್ನ ಶೇಕ್ ಮಾಡಿತ್ತು ಅದೊಂದು ಆರೋಪ. ಆದ್ರೆ, ಖ್ಯಾತ ನಿರ್ಮಾಪಕರ ವಾಗ್ದಾಳಿಗೆ, ಕಿಚ್ಚನ ಕಡೆಯಿಂದ ಬಂದಿದ್ದು ಹಿತವಚನದ ಪೋಸ್ಟ್. ಆದ್ರೆ ಇಷ್ಟೇ ಸಾಕಾ ಖಂಡಿತಾ ಇಲ್ಲ. ಆರೋಪಕ್ಕೆ ರನ್ನನಿಂದ ಶುರು ಕಾನೂನು ಸಮರ.
‘ಸುದೀಪ್ ಕೈಗೆ ಸಿಗ್ತಿಲ್ಲ’
ನಮ್ಮ ಮತ್ತು ಅವರ ಬಾಂಧವ್ಯ ಬಹಳ ಚೆನ್ನಾಗಿತ್ತು. ಇತ್ತೀಚೆಗಷ್ಟೇ ಏನೋ ಗೊತ್ತಿಲ್ಲ. 8 ವರ್ಷದಿಂದ ನಮ್ಮ ಸಿನಿಮಾ ಮಾಡಲು ಇವತ್ತು, ನಾಳೆ, ಇವತ್ತು, ನಾಳೆ ಎಂದು ಮುಂದೆ ಹಾಕುತ್ತಿದ್ದಾರೆ. ಅವರ ಮನೆ ಹತ್ತಿರ ಹೋದರೇ ಸರಿಯಾಗಿ ಸ್ಪಂದನೆ ಮಾಡಲ್ಲ. ಈ ಬಗ್ಗೆ ಸುದೀಪ್ ಪತ್ನಿ ಬಳಿಯು ಮಾತನಾಡಿದ್ವಿ. ಅವರು ಸಂಧಾನ ಮಾಡಿದ್ದರು. ಆಯಿತು ವಿಕ್ರಾಂತ್ ರೋಣ ಆದ ಮೇಲೆ ಮಾಡ್ತಿನಿ ಎಂದರು. ಆದ್ರೆ ಈ ಸಿನಿಮಾ ಆದ ಮೇಲೆ ಬೇರೆ ಸಿನಿಮಾ ಮಾಡಲು ಹೊರಟಿದ್ದಾರೆ. ನಂದ ಕಿಶೋರ್ ಅನ್ನು ಬುಕ್ ಮಾಡಿ ಎಂದರು. ಅವರಿಗೆ ಅಡ್ವಾನ್ಸ್ ಹಣ ಕೊಟ್ವಿ. ಅವರು ಕಥೆ ಮಾಡಿದರು. ಒಂದು ತಿಂಗಳು ಆದ ಮೇಲೆ ಅದಲ್ಲ. ಬೇರೆ ಕಥೆ ಎಂದು ಗೊಂದಲ ಸೃಷ್ಟಿ ಮಾಡಿ ನಮಗೆ ಸರಿಯಾಗಿ ಕೈಗೆ ಸಿಗುತ್ತಿಲ್ಲ.
ಪೂರ್ತಿ ಹಣ ಸಂದಾಯ ಮಾಡಲಾಗಿದೆ. ಅಲ್ಲದೇ ಕೆಲವರಿಗೆ ನನ್ನಿಂದ ಹಣ ಕೊಡಿಸಿದ್ದಾರೆ. ಬೇಕಾದರೆ ಅವರೆಲ್ಲ ಬಂದು ಹೇಳಲು ರೆಡಿ ಇದ್ದಾರೆ.
ಅವರ ಶ್ರೀಮತಿಯವರಿಗೆ ವ್ಯಾಟ್ಸ್ ಆಪ್ ಮೂಲಕ ಕಳುಹಿಸಿಕೊಟ್ಟು, ಮೇಡಂ ದಯವಿಟ್ಟು ಇದನ್ನು ಸರಿ ಪಡಿಸಿಕೊಡಿ ಎಂದು ಕೇಳಿದ್ದೀನಿ. ವಾಣಿಜ್ಯ ಮಂಡಳಿಗೆ ಹೋಗಿದ್ವಿ. ಮತ್ತೆ ರವಿಚಂದ್ರನ್ ಹತ್ತಿರ ಹೋಗಿ ಪರ್ಸನಲ್ ಆಗಿ ರಿಕ್ವೆಸ್ಟ್ ಮಾಡಿದ್ದೀನಿ.
ಅಭಿಮಾನಿಗಳು ನೋಡಬೇಕು. ಅವರು ಸತ್ಯ, ಸುಳ್ಳುಗಳನ್ನು ತಿಳಿದುಕೊಳ್ಳಬೇಕು. ಇದು ಇಡೀ ದೇಶಕ್ಕೆ ಗೊತ್ತಾಗಲಿ. ನಾವು ತಪ್ಪು ಮಾಡಿದ್ರೆ ಅವರ ಕಾಲು ಹಿಡಿದು ಕ್ಷಮೆ ಕೇಳುತ್ತೇವೆ.
ಎಂ.ಎನ್ ಕುಮಾರ್, ನಿರ್ಮಾಪಕ
ಇದೇ ಆರೋಪಕ್ಕೆ ಇದೀಗ ಕಿಚ್ಚ ಸುದೀಪ್ ತನ್ನ ಸ್ಟೈಲ್ನಲ್ಲಿ ಖ್ಯಾತ ನಿರ್ಮಾಪಕ ಎಂ.ಎನ್ ಕುಮಾರ್ಗೆ ಉತ್ತರ ಕೋಡೋಕೆಗೆ ಮುಂದಾಗಿದ್ದಾರೆ.
ಮೌನ ಮುರಿದ ನಟ ಸುದೀಪ್, ತಾಳ್ಮೆ ಪರೀಕ್ಷಿಸಿದ್ದೀರಿ ಎಂದ ಕಿಚ್ಚ
ನಿರ್ಮಾಪಕ ಎಂ ಎನ್ ಕುಮಾರ್ ಹಾಗೂ ಅವ್ರ ಪರ ಮಾತನಾಡಿರೋ ನಿರ್ಮಾಪಕ ಎಂ ಎನ್ ಸುರೇಶ್ ವಿರುದ್ದ ಕಿಚ್ಚ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸುದೀಪ್ ಪರ ವಕೀಲರು ಈ ಬಗ್ಗೆ ನೋಟಿಸ್ ಕೂಡ ಕಳುಹಿಸಿದ್ದಾರೆ. ಸುದೀಪ್ ಚಿತ್ರರಂಗದಲ್ಲಿ 20 ವರ್ಷದಿಂದ ನಟಿಸುತ್ತಿರುವ ಪ್ರತಿಭಾನ್ವಿತ ನಟ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಸಮಾಜ ಸೇವೆಯ ಮೂಲಕವೂ ಜನರಿಗೆ ಮಾದರಿಯಾಗಿದ್ದಾರೆ. ಅವರ ವಿರುದ್ಧ ನೀವು ಮಾಡಿರುವ ಆರೋಪಗಳು ಸುಳ್ಳಾಗಿದ್ದು, ಮಾನಹಾನಿ ಉಂಟು ಮಾಡಿವೆ. ಹಾಗಾಗಿ ನೀವು ಕ್ಷಮೆಯಾಚಿಸಬೇಕು ಹಾಗೂ ಪರಿಹಾರ ಕೊಡಬೇಕು ಎಂದು ಸುದೀಪ್ ಪರ ವಕೀಲರು ಸಿ.ವಿ ನಾಗೇಶ್ ಲೀಗಲ್ ನೋಟಿಸ್ ಅನ್ನ ಎಂ.ಎನ್ ಕುಮಾರ್ಗೆ ಕಳುಹಿಸಿದ್ದಾರೆ.
ಕಿಚ್ಚನ ಕಾನೂನು ಸಮರ
ಇನ್ನು ನಟ ಸುದೀಪ್ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ ಹಿನ್ನೆಲೆ, ನಿರ್ಮಾಪಕರ ಸಂಘದಲ್ಲಿ ನಿರ್ಮಾಪಕ ಎಂ ಎನ್ ಕುಮಾರ್, ಎನ್.ಎಂ ಸುರೇಶ್ ಸುದ್ದಿಗೋಷ್ಠಿ ನಡೆಸಿದ್ದು, ಆರೋಪಗಳ ಸುರಿಮಳೆ ಮುಂದುವರಿಸಿದ್ದಾರೆ. ಮುತ್ತತ್ತಿ ಸತ್ಯರಾಜು ಟೈಟಲ್ ಹೇಳಿ ನಂದಕಿಶೋರ್ ಡೈರೆಕ್ಟರ್ ಅಂತ ಸುದೀಪ್ ಅವ್ರೆ ಹೇಳಿದ್ರು. ನಾನು ಹೇಳಿಲ್ಲ ಅಂತ ಬಂದು ಸಾಯಿಬಾಬನ ಮೇಲೆ ಆಣೆ ಮಾಡಲಿ ಅಂತ ವಾಗ್ದಾಳಿ ನಡೆಸಿದ್ದಾರೆ.
ಇಷ್ಟು ದಿನ ಮೌನವಾಗಿದ್ದ ಕಿಚ್ಚ, ನಿರ್ಮಾಪಕ ಹಚ್ಚಿದ ಕಿಚ್ಚನ್ನ ತನ್ನದೇ ಸ್ಟೈಲ್ನಲ್ಲಿ ಆರಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಇದೆಲ್ಲಾಸುಳ್ಳು ಆರೋಪಗಳು ಎಂದು ನೇರವಾಗಿ ಸಮರ ಸಾರಿದ್ದಾರೆ. ಈ ಯುದ್ಧದಲ್ಲಿ ಯಾರಿಗೆ ಜಯ ಯಾರಿಗೆ ಅಪಜಯ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ