newsfirstkannada.com

ಕನ್ನಡದಲ್ಲೇ ‘D’ ಗ್ಯಾಂಗ್​ ಹೆಸರಲ್ಲಿ ಸಿನಿಮಾ ಬರ್ತಿದ್ಯಾ? ಟೈಟಲ್‌ ಕೇಳಿದ ನಿರ್ಮಾಪಕ ಯಾರು?

Share :

Published June 21, 2024 at 4:35pm

Update June 21, 2024 at 4:36pm

  ಚಾಲೆಂಜಿಂಗ್ ಸ್ಟಾರ್ ಬಂಧನದ ಬಳಿಕ ಡಿ ಗ್ಯಾಂಗ್ ಸಖತ್ ಫೇಮಸ್

  ಸ್ಯಾಂಡಲ್‌ವುಡ್‌ನಲ್ಲಿ D ಗ್ಯಾಂಗ್​ ಹೆಸರಲ್ಲಿ ಸಿನಿಮಾ ಮಾಡಲು ಭಾರೀ ಬೇಡಿಕೆ

  ಡಿ ಗ್ಯಾಂಗ್ ಸಿನಿಮಾದ ನಿರ್ಮಾಪಕ, ನಿರ್ದೇಶಕ, ರೀಲ್‌ ಹೀರೋ ಯಾರು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಬಂಧನವಾದ ಬಳಿಕ ಡಿ ಗ್ಯಾಂಗ್ ಬಗ್ಗೆಯೇ ಸಾಕಷ್ಟು ಚರ್ಚೆಯಾಗುತ್ತಿದೆ. ರಾಜ್ಯಾದ್ಯಂತ ಡಿ ಗ್ಯಾಂಗ್ ಹೆಸರು ಸಂಚಲನ ಸೃಷ್ಟಿಸುತ್ತಿದ್ದಂತೆ ಅದೇ ಹೆಸರಲ್ಲಿ ಸಿನಿಮಾ ಮಾಡೋ ಪ್ಲಾನ್ ರೆಡಿಯಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದರ್ಶನ್ ಗ್ಯಾಂಗ್ ಮಾಡಿದ ಕೊಲೆ ಕೇಸ್ ಅನ್ನೇ ಸಿನಿಮಾ ಮಾಡೋ ಬಗ್ಗೆ ಚರ್ಚೆ ಶುರುವಾಗಿದೆ. ಡಿ ಗ್ಯಾಂಗ್​ ಹೆಸರಲ್ಲಿ ಸಿನಿಮಾ ಮಾಡಲು ಟೈಟಲ್‌ಗೆ ಬೇಡಿಕೆ ಇಡಲಾಗಿದೆ.

ಪಿ.ಎಂ ಪ್ರೊಡಕ್ಷನ್ ನಿರ್ಮಾಪಕ ಮಂಜುನಾಥ್ ನಾಯ್ಕ್ ಎಂಬುವವರು ಫಿಲ್ಮ್‌ ಛೇಂಬರ್‌ಗೆ ಇಂತಹದೊಂದು ವಿಶೇಷ ಮನವಿ ಸಲ್ಲಿಸಿದ್ದಾರೆ. ಡಿ ಗ್ಯಾಂಗ್ ಹೆಸರಿನ ಟೈಟಲ್‌ ನಮಗೆ ಕೊಡಿ. ಇದುವರೆಗೂ ಯಾರು ಈ ಟೈಟಲ್‌ಗೆ ಮನವಿ ಸಲ್ಲಿಸಿಲ್ಲ. ಹೀಗಾಗಿ ಈ ಟೈಟಲ್‌ ನಮಗೆ ಕೊಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ.

ಇದನ್ನೂ ಓದಿ: HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು? 

ಡಿ ಗ್ಯಾಂಗ್ ಸಿನಿಮಾವನ್ನು ಮಂಜು ನಾಯ್ಕ್ ಎಂಬುವವರು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ರಾಕಿ ಸೊಮ್ಲಿ ಎನ್ನುವವರ ನಿರ್ದೇಶನ, ಮುಖ್ಯ ಕಲಾವಿದರು, ಸಂಗೀತಾಗಾರರ ಹೆಸರನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ತಿಳಿಸಲಾಗಿದೆ. ಡಿ ಗ್ಯಾಂಗ್‌ ಟೈಟಲ್​ಗೆ ಇನ್ನೂ ಫಿಲಂ ಛೇಂಬರ್ ಕಡೆಯಿಂದ ಒಪ್ಪಿಗೆ ಸೂಚಿಸಿಲ್ಲ.

ಡಿ ಗ್ಯಾಂಗ್ ಚಿತ್ರತಂಡ ಹೇಳಿದ್ದೇನು?

ಡಿ ಗ್ಯಾಂಗ್ ಎನ್ನುವ ಟೈಟಲ್‌ಗಾಗಿ ಫಿಲ್ಮ್ ಛೇಂಬರ್‌ನಲ್ಲಿ ವಿಚಾರಿಸಿದಾಗ ಈ ಹೆಸರಿನ ಟೈಟಲ್ ಅನ್ನು ಯಾರು ಕೂಡ ನೊಂದಣಿ ಮಾಡಿರಲಿಲ್ಲ. ನಾವು ಈ ಟೈಟಲ್‌ನ ಮೇಲೆ ಸುಮಾರು ಎರಡು ವರ್ಷಗಳಿಂದ ಕೆಲಸ ಮಾಡಿದ್ದೇವೆ. ಅದಕ್ಕೆ ಸಾಕ್ಷಿಯಾಗಿ ಯೂಟ್ಯೂಬ್‌ನಲ್ಲಿ ಈ ಗ್ಯಾಂಗ್ ಎನ್ನುವ ಹಾಡು ಕೂಡ ಇದೆ ನೀವು ನೋಡಬಹುದು. ಈಗ ನಡೆಯುತ್ತಿರುವ ದರ್ಶನ್ ಸರ್ ಅವರ ಪ್ರಕರಣಕ್ಕೂ ನಮ್ಮ ಟೈಟಲ್‌ಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ನಮ್ಮ ಟೈಟಲ್ ಅನ್ನು ಯಾವ ಕಾರಣಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅವರು ನೊಂದಣಿ ಮಾಡಿಕೊಳ್ಳಲು ಆಗುವುದಿಲ್ಲ ಎಂದರು ಎನ್ನುವುದು ನನಗೆ ಅರ್ಥವಾಗಲಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ನಿರ್ಮಾಪಕರಿಗೆ ಅಥವಾ ದೊಡ್ಡ ನಿರ್ದೇಶಕರಿಗೆ ಈ ಟೈಟಲ್ ಕೊಟ್ಟರೆ. ಆಗ ಮಾತಾನಾಡಲು ಸಾಕ್ಷಿ ಬೇಕು ಎನ್ನುವ ಕಾರಣಕ್ಕೆ ಈ ವಿಷಯವನ್ನು ಇಲ್ಲಿ ತಿಳಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡದಲ್ಲೇ ‘D’ ಗ್ಯಾಂಗ್​ ಹೆಸರಲ್ಲಿ ಸಿನಿಮಾ ಬರ್ತಿದ್ಯಾ? ಟೈಟಲ್‌ ಕೇಳಿದ ನಿರ್ಮಾಪಕ ಯಾರು?

https://newsfirstlive.com/wp-content/uploads/2024/06/darshan-1.jpg

Load More