newsfirstkannada.com

ಪವಿತ್ರಾ ಗೌಡ ಮಧ್ಯೆ ಕೋಟಿ, ಕೋಟಿ ವ್ಯವಹಾರ; ಸೌಂದರ್ಯ ಜಗದೀಶ್​ ಪತ್ನಿ ಹೇಳಿದ್ದೇನು?

Share :

Published June 24, 2024 at 5:55pm

    ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ ಹಿಂದೆ ಇದ್ದಾರಾ ಪವಿತ್ರಾ ಗೌಡ?

    ಪವಿತ್ರಾ ಗೌಡಗೆ ನಿರ್ಮಾಪಕ ಸೌಂದರ್ಯ ಜಗದೀಶ್ ದುಡ್ಡು ಕೊಟ್ಟಿದ್ದು ನಿಜಾನಾ

    ನ್ಯೂಸ್ ಫಸ್ಟ್​ಗೆ ಮೃತ ಸೌಂದರ್ಯ ಜಗದೀಶ್ ಪತ್ನಿ ರೇಖಾ ಈ ಬಗ್ಗೆ ಏನಂದ್ರು?

ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಏಪ್ರಿಲ್ 14ರಂದು ನಿರ್ಮಾಪಕರ ಸಾವಿನ ಸುದ್ದಿ ಕೇಳಿ ಇಡೀ ಕನ್ನಡ ಚಿತ್ರರಂಗವೇ ಬೆಚ್ಚಿ ಬಿದ್ದಿತ್ತು. 2 ತಿಂಗಳ ಬಳಿಕ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ಕೇಸ್​ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ನ್ಯೂಸ್ ಫಸ್ಟ್‌ಗೆ ಸಿಕ್ಕಿರೋ ಮಾಹಿತಿಯಲ್ಲಿ ಸೌಂದರ್ಯ ಜಗದೀಶ್ ಅವರು ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರು ಮನೆ ಖರೀದಿಸಲು ದುಡ್ಡು ಕೊಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸೌಂದರ್ಯ ಜಗದೀಶ್​, ದರ್ಶನ್​, ಪವಿತ್ರಾ ಮಧ್ಯೆ ಕೋಟಿ, ಕೋಟಿ ವ್ಯವಹಾರ? ಆತ್ಮಹತ್ಯೆ ಕೇಸ್‌ಗೆ ಬಿಗ್​ ಟ್ವಿಸ್ಟ್!

ಸೌಂದರ್ಯ ಜಗದೀಶ್ ಹಾಗೂ ಪವಿತ್ರಾ ಗೌಡ ಅವರ ನಡುವೆ ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರ ನಡೆದಿದೆ. ಅಷ್ಟೇ ಅಲ್ಲ, ಸೌಂದರ್ಯ ಜಗದೀಶ್ ಅವರು ಪವಿತ್ರಾ ಗೌಡ ಅವರ ಮನೆ ಖರೀದಿಗೆ 2 ಕೋಟಿ ರೂಪಾಯಿ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿತ್ತು. ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪಾಲುದಾರ ಸುರೇಶ್ ಎಂಬುವವರು ಹಣದ ವ್ಯವಹಾರದ ದಾಖಲೆಯನ್ನು ಪೊಲೀಸರಿಗೆ ನೀಡಿದ್ದಾರೆ. ಕಳೆದ 2017ರ ನವೆಂಬರ್​ 13ರಂದು ಪವಿತ್ರಾಗೌಡಗೆ ಸೌಂದರ್ಯ ಜಗದೀಶ್ ಅವರಿಂದ 1 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ.

ಪವಿತ್ರಾ ಗೌಡ ಅವರ ಕೋಟಿ, ಕೋಟಿ ವ್ಯವಹಾರದ ಬಗ್ಗೆ ಸೌಂದರ್ಯ ಜಗದೀಶ್ ಅವರ ಪತ್ನಿ ರೇಖಾ ಅವರು ನ್ಯೂಸ್​​ ಫಸ್ಟ್​ ಪ್ರತಿಕ್ರಿಯೆ ನೀಡಿದ್ದಾರೆ. ದೂರವಾಣಿ ಮೂಲಕ ನ್ಯೂಸ್​ ಫಸ್ಟ್ ಸ್ಪಷ್ಟನೆ ನೀಡಿದ ಅವರು, ನನಗೂ ಗೊತ್ತಿಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೇ. ಲಾಸ್ಟ್ ಟೈಮ್ ಪಾಲುದಾರರ ಮೇಲೆ ಕೇಸ್ ಆಗಿ ತನಿಖೆ ನಡೀತಿದೆ. 25 ದಿನ ನಾಪತ್ತೆ ಆಗಿದ್ದರು. ಈಗ ಬೇಲ್ ಮೇಲೆ ಹೊರಗಡೆ ಬಂದಿದ್ದಾರೆ. ಅವರು ಹೋಗಿ ಏನೆಲ್ಲ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ ಗೊತ್ತಿಲ್ಲ. ಯಜಮಾನ್ರು ಸಾವನ್ನಪ್ಪಿದಕ್ಕೆ ಕಾರಣ ಪಾಟ್ನರ್ಸ್ ಅನ್ನೋದು ನಮಗೆ ಗೊತ್ತಿದೆ. ಈಗಾಗಲೇ ನಾವು ನೋವಲ್ಲಿ ಇದ್ದೇವೆ.

ಸಡನ್ ಆಗಿ ನಮ್ಮ ಯಜಮಾನ್ರ ಹೆಸರು ನೋಡಿ ಆಶ್ಚರ್ಯ ಆಯ್ತು. ಆ ರೀತಿಯಾಗಿ ಅಮೌಂಟ್ ಕೊಟ್ಟಿರುವ ಬಗ್ಗೆ ಗೊತ್ತಿಲ್ಲ. ಅದರಿಂದ ಏನು ತೊಂದರೆ ಆಗಿಲ್ಲ, ಅದರಿಂದ ನಮ್ಮ ಯಜಮಾನ್ರು ಸತ್ತಿಲ್ಲ. ನಾನು ಸ್ಟೇಟ್‌ಮೆಂಟ್ ತಗೊಂಡು ಮಾತನಾಡುತ್ತೇನೆ. ದರ್ಶನ್, ಪವಿತ್ರ ಗೌಡ ಜೊತೆಗೆ ನಮ್ಮ ಯಜಮಾನ್ರು ಯಾವುದೇ ವ್ಯವಹಾರ ಮಾಡಿಲ್ಲ, ಖಂಡಿತ ಇಲ್ಲ. ದರ್ಶನ್ ಅವರ ಜೊತೆಗೂ ಯಾವುದೇ ಸಿನಿಮಾ ಮಾತುಕತೆ ಆಗಿರಲಿಲ್ಲ. ಒಂದು ಸಿನಿಮಾ ಅನೌನ್ಸ್ ಆಗಿತ್ತು. ಆದರೆ ಕೋವಿಡ್ ಇರುವುದರಿಂದ ಮುಂದಕ್ಕೆ ಹೋಯ್ತು ಆಮೇಲೆ ಮಾಡೋಣ ಅಂತ ಸುಮ್ಮನೆ ಆಗಿದ್ದೇವೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಾ ಗೌಡ ಮಧ್ಯೆ ಕೋಟಿ, ಕೋಟಿ ವ್ಯವಹಾರ; ಸೌಂದರ್ಯ ಜಗದೀಶ್​ ಪತ್ನಿ ಹೇಳಿದ್ದೇನು?

https://newsfirstlive.com/wp-content/uploads/2024/06/pavithra1.jpg

Load More