newsfirstkannada.com

‘ಪುನೀತ್ ರೀತಿ ಕಾರು ಕೊಂಡ್ಕೋಬಹುದು ಆದರೆ.. ದರ್ಶನ್ ಇಂದಿನ ಸ್ಥಿತಿಗೆ ಉಮಾಪತಿ ಗೌಡ ಹೇಳಿದ್ದೇನು?

Share :

Published June 18, 2024 at 2:04pm

Update June 18, 2024 at 2:05pm

    ಪುನೀತ್ ಅವರ ರೀತಿ ಲ್ಯಾಂಬೋರ್ಗಿನಿ ಕಾರು ಕೊಂಡ್ಕೋಬಹುದು

    ಭಂಡ ಧೈರ್ಯವೇ ದರ್ಶನ್ ಅವರನ್ನ ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ

    ದರ್ಶನ್ ಅರೆಸ್ಟ್ ಕೇಸ್‌ ಬಗ್ಗೆ ಉಮಾಪತಿ ಗೌಡ ಖಡಕ್ ರಿಯಾಕ್ಷನ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಗ್ಯಾಂಗ್‌ ಕರಾಳ ಮುಖ ಯಾವ ಕ್ರೈಮ್‌ ಸಿನಿಮಾ ಸ್ಟೋರಿಗೂ ಕಮ್ಮಿ ಇಲ್ಲ. ಪೊಲೀಸರ ತನಿಖೆಯಲ್ಲಿ ಒಂದೊಂದೇ ಭಯಾನಕ ಸತ್ಯಗಳು ಹೊರ ಬೀಳುತ್ತಿವೆ. ಇದಕ್ಕೆಲ್ಲಾ ಕಾರಣ ಏನು? ನಟ ದರ್ಶನ್ ಅವರ ಸಿನಿಮಾ ಬದುಕಿನಲ್ಲೇ ಏನೆಲ್ಲಾ ಆಯ್ತು ಅನ್ನೋದನ್ನ ನಿರ್ಮಾಪಕ ಉಮಾಪತಿ ಗೌಡ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್​​ ಕುಡಿದಿದ್ದ ಬಿಲ್​ 9 ಲಕ್ಷ! ಎಣ್ಣೆ ಕಮ್ಮಿ ಆಯ್ತು ಅಂತ ಮತ್ತೆ ಗಲಾಟೆ ಮಾಡಿದ್ರಂತೆ! 

ನ್ಯೂಸ್​ಫಸ್ಟ್​ಗೆ ನಿರ್ಮಾಪಕ ಉಮಾಪತಿಗೌಡ ಅವರು ನಟ ದರ್ಶನ್ ಅವರ ಅರೆಸ್ಟ್ ಕೇಸ್‌ ಬಗ್ಗೆ ಖಡಕ್ ರಿಯಾಕ್ಷನ್ ನೀಡಿದ್ದಾರೆ. ಏನೂ ಆಗಲ್ಲ. ಏನೇ ಆದ್ರೂ ನಾನು ಅರಗಿಸಿಕೊಳ್ಳುತ್ತೇನೆ ಅನ್ನೋ ಭಂಡ ಧೈರ್ಯವೇ ದರ್ಶನ್ ಅವರನ್ನ ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಉಮಾಪತಿಗೌಡ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪೂರ್ತಿ ಊಟ ಮಾಡಲ್ಲ.. ಸೆಲ್​ನಲ್ಲಿ ಏಕಾಂಗಿ.. 1 ಸೆಲ್​.. 1 ಚಾಪೆ.. 1 ಚೇರ್.. ದರ್ಶನ್ ಸ್ಟೇಷನ್ ಡೈರಿ..! 

ದರ್ಶನ್ ಅವರ ಜೊತೆ ಗಲಾಟೆಯಾದ ಆ ದಿನಗಳನ್ನು ನೆನಪಿಸಿಕೊಂಡ ಉಮಾಪತಿ ಗೌಡ ಅವರು ಪುನೀತ್ ರಾಜ್‌ಕುಮಾರ್ ಅವರ ರೀತಿ ಲ್ಯಾಂಬೋರ್ಗಿನಿ ಕಾರು ಕೊಂಡ್ಕೋಬಹುದು. ಆದರೆ ಪುನೀತ್ ಅವರ ವ್ಯಕ್ತಿತ್ವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಹೆಚ್ಚಿದ ಮನುಷ್ಯ ಕೊಬ್ಬಿದ ಹೋರಿ ತುಂಬಾ ದಿನ ಉಳಿಯಲ್ಲ. ನನ್ನ ಮಕ್ಕಳ ಕಣ್ಣೀರಿಗೆ ಇಂದು ಬೆಲೆ ಸಿಕ್ಕಿದೆ ಎಂದು ಉಮಾಪತಿ ಅವರು ಹೇಳಿದ್ದಾರೆ.

ನಾವೆಲ್ಲರೂ ಚಿಕ್ಕ ಕಾರಿ​ನಲ್ಲಿ ಓಡಾಡಬಹುದು. ಓಡಾಡುವಾಗ ಗ್ರಹಚಾರ ಕೆಟ್ಟಾಗ ಅಪಘಾತ ಆಗುತ್ತೆ. ಹೆಚ್ಚಿದ ಮನುಷ್ಯ, ಕೊಬ್ಬಿದ ಕುರಿ ಬಹಳ ದಿನ ಉಳಿಯಲ್ಲ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಇಬ್ಬರ ಸಾವಿಗೆ ಕಾರಣರಾಗಿದ್ದಾರೆ. ದೀಪ ಜೋರಾಗಿ ಉರಿಯುತ್ತೆ ಅಂದ್ರೆ ಅದು ಆರುತ್ತೆ. ಮನುಷ್ಯರ ದೃಷ್ಟಿ ತುಂಬಾ ಕೆಟ್ಟದ್ದು, ಬೀಳಬಾರದಿತ್ತು. ಇಷ್ಟೆಲ್ಲಾ ಅಪರಾಧ ಮಾಡಿ, ಹೇಗೆ ಅರಗಿಸಿಕೊಳ್ತಿದ್ದಾರೆ?

ಇನ್ನು, ಅಂದು ನಾನು ಪುನೀತ್ ರಾಜ್‌ಕುಮಾರ್, ಯಶ್ ಸಿನಿಮಾ ಮಾಡಲು ಮಾತುಕತೆ ನಡೆಸಿದ್ದೆ. ಆ ಕೇಸಲ್ಲಿ ನಂದು ಏನೂ ಇಲ್ಲ, ಆದ್ರೂ ಎಲ್ಲಾ ಮಾಡಿದ್ರು. ಅಂದು ಮೈಸೂರು ಕೇಸ್​​ನಲ್ಲಿ ಪೊಲೀಸ್ ಇಲಾಖೆ ಎಡವಿತು. ಅವತ್ತು ಸಂಪೂರ್ಣ ಪೊಲೀಸ್ ಇಲಾಖೆ ವಿಫಲವಾಗಿತ್ತು. ಅಂದು ಕ್ರಮಕೈಗೊಂಡಿದ್ದರೆ ಇಂದು 2 ಜೀವ ಉಳಿಯುತ್ತಿತ್ತು. ಯಾರೇ ಇರಲಿ, ಗ್ರಹಚಾರ ಕೆಟ್ರೆ ಮೂಲೇಲಿ ಕೂರಬೇಕು. ನಾನು ಸಿನಿಮಾದಲ್ಲಿ ಮುಂದುವರೆಯಲೇ ಬಾರದು ಅಂತ ಮಾಡಿದ್ರು. ಆಮೇಲೆ ಗೆಳೆಯರು ನಮ್ಮಿಬ್ಬರನ್ನು ಒಂದು ಮಾಡುವ ಕೆಲಸ ಮಾಡಿದ್ರು. ನಾನೇ ಮರಳಿ ಸ್ನೇಹಕ್ಕೆ ಮುಂದುವರೆಯಲಿಲ್ಲ ಎಂದು ಉಮಾಪತಿ ಅವರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪುನೀತ್ ರೀತಿ ಕಾರು ಕೊಂಡ್ಕೋಬಹುದು ಆದರೆ.. ದರ್ಶನ್ ಇಂದಿನ ಸ್ಥಿತಿಗೆ ಉಮಾಪತಿ ಗೌಡ ಹೇಳಿದ್ದೇನು?

https://newsfirstlive.com/wp-content/uploads/2024/06/Umapathy-Gowda-ON-Darshan-Arrest-Case-3.jpg

Load More