newsfirstkannada.com

ಸ್ಯಾಂಡಲ್​ವುಡ್ ಬ್ಯೂಟಿ ರಮ್ಯಾ, ಪ್ರೇಮ್ ಪುತ್ರಿ ಅಮೃತಾ ಕೇಕ್ ಕಟ್ ಮಾಡಿದ್ದೇಕೆ? ಇಲ್ಲಿದೆ ಆ 2 ಕಾರಣಗಳು!

Share :

31-10-2023

    ಎರಡು ಸಕ್ಸಸ್​ನಲ್ಲಿ ತೇಲಾಡುತ್ತಿರುವ ಟಗರು ಪಲ್ಯಾ ಹೀರೋಯಿನ್

    ಪ್ರೇಮ್ ಜೊತೆ 2 ಸಿನಿಮಾಗಳಲ್ಲಿ ಸ್ಕ್ರೀನ್​ ಶೇರ್ ಮಾಡಿರುವ ರಮ್ಯಾ

    ಬ್ಯೂಟಿ ರಮ್ಯಾ, ಪ್ರೇಮ್ ಪುತ್ರಿ ಅಮೃತಾ ಕೇಕ್ ಕಟ್ ಮಾಡಿದ್ದೇಕೆ..?

ಸ್ಯಾಂಡಲ್​ವುಡ್​ನಲ್ಲಿ ಈಗ ಎಲ್ಲಿ ಕೇಳಿದರೂ ಟಗರು ಪಲ್ಯಾ ಸಿನಿಮಾದ್ದೇ ಮಾತು. ಪ್ರೇಕ್ಷಕರನ್ನು ಥಿಯೇಟರ್​ ಕಡೆ ಸೆಳೆಯುತ್ತಿರುವ ಈ ಸಿನಿಮಾ ಭರ್ಜರಿ ಕಲೆಕ್ಷನ್ ಕೂಡ ಮಾಡುತ್ತಿದೆ. ಸದ್ಯ ಈ ಮೂವಿಯಲ್ಲಿ ಹೀರೋಯಿನ್ ಆಗಿ ಅಭಿನಯಿಸಿರುವ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಅವರು ಕನ್ನಡದ ಮೋಹಕ ತಾರೆ ರಮ್ಯಾರನ್ನ ಮೀಟ್ ಮಾಡಿದ್ದು ಇದೇ ವೇಳೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

ಸ್ಯಾಂಡಲ್​ವುಡ್​ನ ಬ್ಯೂಟಿ ರಮ್ಯಾ- ಅಮೃತಾ ಇಬ್ಬರು ಜೊತೆಯಾಗಿಯೇ ಕೇಕ್ ಕಟ್ ಮಾಡಿ ಸಂಭ್ರಮಿಸಲು 2 ವಿಶೇಷ ಕಾರಣಗಳಿವೆ. ಅಮೃತಾ ಅವರು ಆ್ಯಪಲ್ ಬಾಕ್ಸ್ -ಕೆ.ಆರ್.ಜಿ ಕನೆಕ್ಟ್ ಸ್ಟುಡಿಯೋದಲ್ಲಿ ರಮ್ಯಾರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕಳೆದ ಶುಕ್ರವಾರ ಟಗರು ಪಲ್ಯಾ ಸಿನಿಮಾ ತೆರೆಕಂಡು ಸಕ್ಸಸ್​ ಒಂದು ಕಡೆಯಾದ್ರೆ, ಇನ್ನೊಂದು ಕಡೆ ಶೈಕ್ಷಣಿಕ ಪರೀಕ್ಷೆಯಲ್ಲಿ ನಟಿ ಅಮೃತಾ ಡಿಸ್ಟಿಂಗ್ಷನ್​ನಲ್ಲಿ ಪಾಸ್ ಆಗಿದ್ದಾರೆ. ಅದು ಬೇರೆ Medical electronicsನಲ್ಲಿ ಫಸ್ಟ್​ ಕ್ಲಾಸ್​ನಲ್ಲಿ ತೇರ್ಗಡೆ ಆಗಿದ್ದಾರೆ. ಈ ಎರಡರ ಖುಷಿಗೆ ರಮ್ಯಾ ಅವರೇ ಸ್ವತಹ ಕೇಕ್ ತರಿಸಿ ಅಮೃತಾ ಕೈಯಲ್ಲಿ ಕಟ್ ಮಾಡಿಸಿ ಬಳಿಕ ಇಬ್ಬರು ಕೇಕ್ ತಿಂದು ಖುಷಿಗೊಂಡಿದ್ದಾರೆ. ಬಳಿಕ ಸೆಲ್ಫಿಗೂ ಪೋಸ್ ಕೊಟ್ಟಿದ್ದಾರೆ.

ನಟಿ ರಮ್ಯಾ, ಅಮೃತಾ ಹಾಗೂ ನಟ ಪ್ರೇಮ್

ಈ ವೇಳೆ ಮಾತನಾಡಿ ನಟಿ ಅಮೃತಾ, ಹೀರೋಗಳಲ್ಲಿ ಅಂದರೆ ಅಪ್ಪು ಅಂದರೆ ತುಂಬಾ.. ತುಂಬಾ.. ಇಷ್ಟ. ಅದರಂತೆ ಹೀರೋಯಿನ್​ಗಳಲ್ಲಿ ಕ್ವೀನ್​ ರಮ್ಯಾ ಎಂದ್ರೆ ಸಖತ್ ಇಷ್ಟ ಎಂದು ಹೇಳಿದ್ದಾರೆ. ಇನ್ನು ನಾನು ಇನ್ನು ಚಿಕ್ಕವಳಿದ್ದಾಗ ರಮ್ಯಾ ಅವರ ಅಮೃತಾಧಾರೆ ಸಿನಿಮಾದ ಟೈಟಲ್​ ಸಾಂಗ್ ಹಾಡುತ್ತ ಅಮ್ಮ ನನ್ನನ್ನು ಮಲಗಿಸುತ್ತಿದ್ದರು ಎಂದು ಹೇಳಿದ್ದಾರೆ.

ಎರಡು ಮೂವಿ ಮಾಡಿದ್ದ ರಮ್ಯಾ-ಪ್ರೇಮ್

ಅಮೃತಾ ಅವರ ತಂದೆ ಲವ್ಲಿ ಸ್ಟಾರ್ ಪ್ರೇಮ್​ ಅವರ ಜೊತೆ ರಮ್ಯಾ ಅವರು ಜೊತೆ ಜೊತೆಯಲಿ ಮತ್ತು ಗುಣವಂತ ಎನ್ನುವ ಸಿನಿಮಾಗಳನ್ನ ಮಾಡಿದ್ದಾರೆ. ಪ್ರೇಮ್ ಮತ್ತು ರಮ್ಯಾ ನಟಿಸಿರುವ ಎರಡೂ ಸಿನಿಮಾಗಳು ಕೂಡ ಕನ್ನಡ ಇಂಡಸ್ಟ್ರೀಯಲ್ಲಿ ಸಖತ್ ಹಿಟ್ ಆಗಿದ್ದವು. ಜೊತೆಗೆ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಕೂಡ ಮಾಡಿದ್ದವು ಎನ್ನುವುದು ವಿಶೇಷ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಯಾಂಡಲ್​ವುಡ್ ಬ್ಯೂಟಿ ರಮ್ಯಾ, ಪ್ರೇಮ್ ಪುತ್ರಿ ಅಮೃತಾ ಕೇಕ್ ಕಟ್ ಮಾಡಿದ್ದೇಕೆ? ಇಲ್ಲಿದೆ ಆ 2 ಕಾರಣಗಳು!

https://newsfirstlive.com/wp-content/uploads/2023/10/RAMYA_AMRUTTHA.jpg

Load More