newsfirstkannada.com

×

BREAKING: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ ಮದುವೆ ಫಿಕ್ಸ್‌? ಯಾವಾಗ? ಹುಡುಗ ಯಾರು?

Share :

Published September 8, 2024 at 5:08pm

Update September 8, 2024 at 5:20pm

    ಅಂತು ಇಂತು ಮೋಹಕ ತಾರೆ ರಮ್ಯಾಗೆ ಕೂಡಿ ಬಂತು ಕಂಕಣ ಭಾಗ್ಯ

    ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಮದುವೆಗೆ ಸದ್ದಿಲ್ಲದೇ ತಯಾರಿ?

    ಇಷ್ಟರಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮಕ್ಕೂ ಸಜ್ಜಾದ ನಟಿ ರಮ್ಯಾ!

ಬೆಂಗಳೂರು: ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದೆಯಂತೆ. ನಟಿ ರಮ್ಯಾ ಅವರು ಇದೇ ನವೆಂಬರ್ ತಿಂಗಳಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ. ಸ್ಯಾಂಡಲ್‌ವುಡ್‌ ಕ್ವೀನ್ ಮದುವೆ ಬಗ್ಗೆ ನ್ಯೂಸ್‌ ಫಸ್ಟ್‌ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.

ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಅವರು ನವೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಿದ್ಧತೆ ನಡೆಸಿದ್ದಾರೆ. ಇಷ್ಟರಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಮೈಸೂರಲ್ಲಿ ದರ್ಶನ್ ಅರೆಸ್ಟ್ ಆಗಿದ್ದೆ ರೋಚಕ.. ಪೊಲೀಸರ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ 

ನಟಿ ರಮ್ಯಾ ಅವರು ಉದ್ಯಮಿಯೊಬ್ಬರನ್ನು ಕೈ ಹಿಡಿಯಲಿದ್ದಾರೆ. ಆ ಉದ್ಯಮಿ ಯಾರು ಅನ್ನೋ ಗುಟ್ಟನ್ನು ಇನ್ನೂ ಬಿಟ್ಟು ಕೊಟ್ಟಿಲ್ಲ. ಯಾರವರು ಅನ್ನೋ ಮಾಹಿತಿ ಸದ್ಯದಲ್ಲೇ ರಿವೀಲ್ ಆಗೋ ಸಾಧ್ಯತೆ ಇದೆ.

ರಮ್ಯಾ ಪರಿಚಯ!
ಸ್ಯಾಂಡಲ್‌ವುಡ್ ಮೋಹಕ ತಾರೆ ಅಂತ ಫೇಮಸ್ ಆಗಿರೋ ರಮ್ಯಾ ಅವರ ಮತ್ತೊಂದು ಹೆಸರು ದಿವ್ಯಾ ಸ್ಪಂದನಾ. ರಮ್ಯಾ ಅವರಿಗೆ ಇಂಟರ್ನೆಟ್‌ನಲ್ಲಿರುವ ಮಾಹಿತಿ ಪ್ರಕಾರ ಈಗ 41 ವರ್ಷ ವಯಸ್ಸು.

2003ರಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಅಭಿ ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಮ್ಯಾ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದ್ದಾರೆ.

ರಮ್ಯಾ ಅವರು ಕೇವಲ ಸಿನಿಮಾ ರಂಗದಲ್ಲಿ ಅಷ್ಟೇ ಅಲ್ಲ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. 2013ರಲ್ಲಿ ರಮ್ಯಾ ಮಂಡ್ಯದಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮಾಜಿ ಸಂಸದೆ ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಘಟಕದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ ಮದುವೆ ಫಿಕ್ಸ್‌? ಯಾವಾಗ? ಹುಡುಗ ಯಾರು?

https://newsfirstlive.com/wp-content/uploads/2023/07/Ramya_1.jpg

Load More