ಫ್ರಾನ್ಸ್ ಫಸ್ಟ್ ಲೇಡಿಗೆ ಶ್ರೀಗಂಧದ ಬಾಕ್ಸ್ನಲ್ಲಿ ಏನ್ ಕೊಟ್ಟಿದ್ದಾರೆ ಮೋದಿ..?
ಫ್ರಾನ್ಸ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿರುವ ಪ್ರಧಾನಿ ಮೋದಿ
2 ದಿನದ ಪ್ಯಾರಿಸ್ ಪ್ರವಾಸದಲ್ಲಿ ಭಾರತ-ಫ್ರಾನ್ಸ್ ಮಧ್ಯೆ ಮಹತ್ವದ ಒಪ್ಪಂದ
ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಗೌರವ ಮತ್ತು ಸಾಂಸ್ಕೃತಿ ದ್ಯೋತಕವಾಗಿ ಮ್ಯಾಕ್ರಾನ್ ಅವರಿಗೆ ಶ್ರೀಗಂಧದ ಮರದಿಂದ (pure Sandalwood Sitar) ಸುಂದರವಾಗಿ ಕೆತ್ತನೆ ಮಾಡಿರುವ ಸಂಗೀತ ವಾದ್ಯ ‘ಸಿತಾರ್’ ನೀಡಿದ್ದಾರೆ.
ಉಭಯ ನಾಯಕರು ನಿನ್ನೆ ಉನ್ನತ ಮಟ್ಟದ ಸಭೆ ನಡೆಸಿ, ಸುದ್ದಿಗೋಷ್ಟಿ ನಡೆಸಿದರು. ಬಳಿಕ ಮೋದಿ ಅವರು ಮ್ಯಾಕ್ರಾನ್ಗೆ ಸಂಗೀತ ವಾದ್ಯದ ವಿಶಿಷ್ಠ ಪ್ರತಿರೂಪ ಸಿತಾರ್ ಅನ್ನು ಪ್ರೀತಿಯಿಂದ ಗಿಫ್ಟ್ ಮಾಡಿದ್ದಾರೆ.
ಶ್ರೀಗಂಧ ಮರದಿಂದ ಕೆತ್ತಲಾಗಿರುವ ‘ಸಿತಾರ್’ನ ಮೇಲ್ಭಾಗವನ್ನು ಅದ್ಭುತ ಕಲೆಗಳೊಂದಿಗೆ ಕೆತ್ತಲಾಗಿದೆ. ಅಂದರೆ ಪ್ರಾಚೀನ ಕಾಲದ ಕರಕುಶಲತೆಯನ್ನು ಅದರ ಮೇಲೆ ಅರಳಿಸಲಾಗಿದೆ. ಜೊತೆಗೆ ಸಂಗೀತ, ಕಲೆ, ಮಾತು, ಬುದ್ಧಿವಂತಿಕೆ ಮತ್ತು ಕಲಿಕೆಯನ್ನು ಪ್ರತಿನಿಧಿಸುವ ಸಿತಾರ್ (ವೀಣೆ) ಎಂಬ ಸಂಗೀತ ವಾದ್ಯವನ್ನು ಹಿಡಿದಿರುವ ಜ್ಞಾನದ ದೇವತೆ ಸರಸ್ವತಿಯ ಚಿತ್ರವನ್ನೂ ಕೆತ್ತಲಾಗಿದೆ. ವಿಘ್ನ ನಿವಾರಕ ಗಣೇಶನ ಚಿತ್ರವನ್ನೂ ಹೊಂದಿದೆ. ನಂಬಿಕೆಯಲ್ಲಿ ಈ ಎರಡೂ ದೇವತೆಗಳು ಸಕಾರಾತ್ಮಕತೆಯನ್ನು ಪ್ರತಿನಿಧಿಸುತ್ತವೆ. ಒಳ್ಳೆಯ ಕೆಲಸವನ್ನು ಪ್ರಾರಂಭಿಸುವ ಮೊದಲು ಒಟ್ಟಿಗೆ ಪೂಜಿಸಲಾಗುತ್ತದೆ.
ಇದನ್ನೂ ಓದಿ: ಪ್ಯಾರಿಸ್ಗೆ ಹೋಗುವ ಭಾರತೀಯರಿಗೆ ಗುಡ್ನ್ಯೂಸ್; ಇನ್ಮುಂದೆ ಅಲ್ಲಿ UPI ಪಾವತಿಗೂ ಸಿಗಲಿದೆ ಅವಕಾಶ..!
ಅಷ್ಟೇ ಅಲ್ಲದೇ ನಮ್ಮ ರಾಷ್ಟ್ರೀಯ ಪಕ್ಷಿ ನವೀಲಿನ ಚಿತ್ರವನ್ನೂ ಸಿತಾರ್ ಮೇಲೆ ಕೆತ್ತಲಾಗಿದೆ. ಜೊತೆಗೆ ಭಾರತದ ಅಸಂಖ್ಯಾತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೆತ್ತನೆಯ ಸಣ್ಣ, ಸಣ್ಣ ಸಂಕೀರ್ಣವೇ ಇದೆ.
ಫಸ್ಟ್ ಲೇಡಿಗೆ ಏನ್ ಕೊಟ್ರು..?
ಇದೇ ವೇಳೆ ಫ್ರಾನ್ಸ್ನ ಫಸ್ಟ್ ಲೇಡಿ ಬ್ರಿಗಿಟ್ಟೆ ಮ್ಯಾಕ್ರನ್ ಅವರಿಗೆ ಶ್ರೀಗಂಧದ ಬಾಕ್ಸ್ ಒಂದನ್ನು ನೀಡಿದರು. ಅದರಲ್ಲಿ ಜನಪ್ರಿಯ ‘ಪೋಚಂಪಲ್ಲಿ ರೇಷ್ಮೆ ಸೀರೆ’ (Pochampally Ikat saree) ಇದೆ. Pochampally ತೆಲಂಗಾಣದಲ್ಲಿ ಬರುವ ಒಂದು ಪಟ್ಟಣ. ಇದು ಟೆಕ್ಸ್ಟ್ಟೈಲ್ಗೆ ಹೆಸರುವಾಸಿಯಾಗಿದೆ.
ಮೋದಿಗೆ ಫ್ರಾನ್ಸ್ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಫ್ರಾನ್ಸ್ ಅತ್ಯುನ್ನತ ನಾಗರಿಕ ಪ್ರಶಸ್ತಿ ‘Grand Cross of the Legion of Honour’ ಗೌರವ ಸಿಕ್ಕಿದೆ. ಅಧ್ಯಕ್ಷ ಮ್ಯಾಕ್ರಾನ್ ಅದನ್ನು ಮೋದಿಗೆ ನೀಡಿ ಗೌರವಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ