ಸ್ಯಾಂಡಲ್ವುಡ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ಅಪರೂಪದ ದೃಶ್ಯ
ದರ್ಶನ್-ಸುದೀಪ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ
ಸುದೀಪ್-ದರ್ಶನ್ ಮುನಿಸಿಗೆ ಮದ್ದೆರೆದ್ರಾ ಸಂಸದೆ ಸುಮಲತಾ?
ಸತತ 6 ವರ್ಷಗಳು ಆಗಿತ್ತು.. ಒಬ್ಬರ ಮುಖವನ್ನು ಒಬ್ಬರು ನೋಡಿ.. ಕುಚುಕು ಗೆಳೆಯರಂತಿದ್ದವರು ಮುನಿಸಿಕೊಂಡು ಮಾತುಬಿಟ್ಟಿದ್ದನ್ನು ಕಂಡು, ಇಡೀ ಸ್ಯಾಂಡಲ್ವುಡ್ ಪ್ರೇಮಿಗಳು ಆಘಾತಕೊಳ್ಳಗಾಗಿದ್ರು. ದೂರಾದ ದೋಸ್ತಿಗಳು ಆದಷ್ಟು ಬೇಗ ಒಂದಾಗಲಿ ಎಂದು ಫ್ಯಾನ್ಸ್ಗಳು ದಿನ ಬೆಳಗಾದ್ರೆ ಸಾಕು ದೇವರಲ್ಲಿ ಬೇಡಿಕೊಳ್ತಿದ್ರು. ಇದೀಗ ಆ ಶುಭಘಳಿಗೆ ಹತ್ತಿರವಾದಂತೆ ಕಾಣ್ತಿದೆ.
ಸುಮಲತಾ ಬರ್ತ್ಡೇ ಪಾರ್ಟಿಯಲ್ಲಿ ದಚ್ಚು-ಕಿಚ್ಚ ಪ್ರತ್ಯಕ್ಷ..!
ಸ್ಯಾಂಡಲ್ವುಡ್ನ ದಿಗ್ಗಜರು ಎಂದೇ ಖ್ಯಾತರಾಗಿದ್ದ ಅಂಬರೀಶ್, ವಿಷ್ಣುವರ್ದನ್ ಅವರ ಗೆಳೆತನ ದಂತೆಯೇ ದರ್ಶನ್ ಮತ್ತು ಸುದೀಪ್ ಕೂಡ ಕುಚುಕು ದೋಸ್ತಿಗಳಾಗಿದ್ರು. ಹಲವು ಬಾರಿ ಇಬ್ಬರು ಕೂಡ ಜೊತೆ ಜೊತೆಗೇ ಟ್ರಿಪ್ ಹೋಗಿದ್ದಾರೆ. ಕ್ರಿಕೆಟ್ ಕೂಡ ಆಡಿ ಎಂಜಾಯ್ ಮಾಡಿದ್ದಾರೆ. ವೇದಿಕೆ ಮೇಲೆ ಕುಚಿಕು ಕುಚಿಕು ಅಂತಾ ಸ್ಟೆಪ್ಸ್ ಹಾಕಿದ್ದಾರೆ. ರಿಯಲ್ ಲೈಫ್ನಲ್ಲೂ ಕುಚಿಕುಗಳಾಗಿದ್ದ ಇವರ ಮೇಲೆ ಅದ್ಯಾವ ಕಣ್ಣು ಬಿತ್ತೋ ಗೊತ್ತಿಲ್ಲ. ಯಾವುದೋ ಒಂದು ಕೆಟ್ಟ ಘಳಿಗೆಯೋ.. ಇಲ್ಲ ಅಪಾರ್ಥದ ಮಾತಿನಿಂದಲೋ ಗೊತ್ತಿಲ್ಲ. ಕುಚಿಕು ಗೆಳೆಯರಂತೆ ಇದ್ದವರು ಮಾತು ಬಿಟ್ಟು ದೂರ ಆಗಿದ್ದರು.
ಸ್ಯಾಂಡಲ್ವುಡ್ನ ಯಾವುದೇ ಕಾರ್ಯಕ್ರಮಗಳಿದ್ದರೂ, ಇಬ್ಬರೂ ಒಂದೇ ಸಮಯದಲ್ಲಿ ಕಾಣಿಸಿಕೊಳ್ತಿರಲಿಲ್ಲ. ದರ್ಶನ್ ಇದ್ದ ಕಾರ್ಯಕ್ರಮಕ್ಕೆ ಸುದೀಪ್ ಬರ್ತಿರಲಿಲ್ಲ.. ಸುದೀಪ್ ಇದ್ದ ಕಾರ್ಯಕ್ರಮಕ್ಕೆ ದರ್ಶನ ಕೂಡ ಹೋಗ್ತಿರಲಿಲ್ಲ. ನಾನೊಂದು ತೀರ. ನೀನೊಂದು ತೀರ ಎಂಬಂತೆ ನಡೆದುಕೊಳ್ತಿದ್ರು. ದಿವಂಗತ ನಟ ಅಂಬರೀಷ್ ಪತ್ನಿ.. ಸಂಸದೆ ಸುಮಲತಾರ ಬರ್ತ್ಡೇ ಕಾರ್ಯಕ್ರಮ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. 6 ವರ್ಷಗಳ ಬಳಿಕ ಒಂದೇ ದಚ್ಚು-ಕಿಚ್ಚ ಪ್ರತ್ಯಕ್ಷವಾಗಿದ್ದಾರೆ. ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದಾರೆ.
ಹಳೆ ಗೆಳೆಯನ ನೋಡಿ ಮುಗುಳು ನಗೆ ಬೀರಿದ್ರಾ ‘ಚಕ್ರವರ್ತಿ’?
ಈ ದೃಶ್ಯವನ್ನು ಒಮ್ಮೆ ಸೂಕ್ಷವಾಗಿ ಗಮನಿಸಿ.. ವೇದಿಕೆ ಮೇಲಿದ್ದ ಅಭಿನಯ ಚಕ್ರವರ್ತಿ ಸುದೀಪ್, ಸುಮಲತಾ ಅವರಿಗೆ ವಿಷ್ ಮಾಡಿ, ಹೋಗಿ ಬರ್ತೀನಿ ಎಂದು ಹೊರುಡುತ್ತಾರೆ. ಅದೇ ಕ್ಷಣದಲ್ಲಿ ಚಕ್ರವರ್ತಿ ಕೂಡ ವೇದಿಕೆಯತ್ತ ಬರಲು ಮುಂದಾಗಿದ್ದಾರೆ. ಈ ವೇಳೆ ನಟ ಸುದೀಪ್ ಇರೋದು ದರ್ಶನ್ ದಚ್ಚು ಗಮನಕ್ಕೆ ಬಂದಿದೆ ಅನ್ಸುತ್ತೆ. ವೇದಿಕೆಯತ್ತ ನೋಡುತ್ತ ಒಂದು ಕ್ಷಣ ಅಲ್ಲೆ ನಿಂತ ದರ್ಶನ್ ಮುಖದಲ್ಲಿ ಸಣ್ಣದೊಂದು ಮಂದಹಾಸ ಮೂಡಿದೆ. ಈ ಅಪರೂಪ ದೃಶ್ಯವನ್ನು ಕಾರ್ಯಕ್ರಮದಲ್ಲಿ ಭಾಗಿಯಾದವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಸುದೀಪ್-ದರ್ಶನ್ ಮುನಿಸಿಗೆ ಮದ್ದು ನೀಡಿದ್ರಾ ಸುಮಲತಾ?
ಓ ಗೆಳೆಯ ಜೀವದ್ ಗೆಳೆಯ.. ನಿಂಗೆ ಶಾನೇ ಕೋಪಕಣೋ ಅದರೂ ಒಂದು ಕೈ ಪ್ರೀತಿ ಜಾಸ್ತಿ ಕಣೋ ಎಂಬ ಹಾಡಿನಂತೆ ನಟ ದರ್ಶನ್ ಮತ್ತು ಸುದೀಪ್ ಗೆಳೆತನವಿತ್ತು. ಇಬ್ಬರ ಮಧ್ಯೆ ಮಾತು ನಿಂತ ಬಳಿಕ ಸೂರ್ಯ ಮತ್ತು ಚಂದ್ರನಂತೆ ವಿರುದ್ಧ ದಿಕ್ಕಿಗೆ ಮುಖ ಮಾಡಿದ್ರು. ಆದ್ರೆ, ಸಂಸದೆ ಸುಮಲತಾ ಅವರ ಬರ್ತ್ಡೇ ಕಾರ್ಯಕ್ರಮದಲ್ಲಿ ಹಳೆ ದೋಸ್ತಿಗಳು ಎದುರು ಬದುರಾಗಿದ್ದಾರೆ. ಇದನ್ನ ಸೂಕ್ಷ್ಮವಾಗಿ ಗಮನಿಸಿದ್ರೆ, ದರ್ಶನ್ ಮತ್ತು ಸುದೀಪ್ ನಡುವಿನ ಮುನಿಸು ದೂರ ಮಾಡಲು ಸಂಸದೆ ಸುಮಲತಾ ಮಧ್ಯಸ್ಥಿಕೆ ವಹಿಸಿದ್ರಾ ಎಂಬ ಮಾತುಗಳು ಸಿನಿರಂಗದಲ್ಲಿ ಕೇಳಿ ಬರ್ತಿವೆ.
ಒಂದೇ ಪ್ರೋಗ್ರಾಂನಲ್ಲಿ ಕಾಣಿಸಿಕೊಂಡ ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್. ಇಬ್ಬರು ಒಂದಾದ್ರಾ, ಪರಸ್ಪರ ಥ್ಯಾಂಕ್ಸ್ ಕೊಟ್ರಾ, ಮಾತನಾಡಿದ್ರಾ..? #Darshan #ChallengingStarDarshan #KichchaSudeep pic.twitter.com/BapOUyKKIV
— NewsFirst Kannada (@NewsFirstKan) August 27, 2023
ಅದೇನೆ ಇರಲಿ.. ದೂರ ಆಗಿದ್ದ ಇಬ್ಬರು ಬಿಗ್ಸ್ಟಾರ್ಗಳು ತುಂಬಾ ವರ್ಷಗಳ ಬಳಿಕ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು ಹಲವು ಚರ್ಚೆಯನ್ನು ಹುಟ್ಟಿಹಾಕಿದೆ. ದಚ್ಚು-ಕಿಚ್ಚ ಫ್ಯಾನ್ಸ್ಗಳಿಗೆ ಇದೊಂದು ದೃಶ್ಯ, ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದೆ. ಸುಮಲತಾರ ಬರ್ತ್ಡೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ದಚ್ಚು ಮತ್ತು ಕಿಚ್ಚ, ಅದಷ್ಟು ಬೇಗ. ಜೊತೆಜೊತೆಯಾಗಿ ಕಾಣಿಸಿಕೊಳ್ಳಲಿ ಅನ್ನೋದೇ ಕೋಟ್ಯಂತರ ಕನ್ನಡ ಸಿನಿ ರಸಿಕರ ಆಸೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ