newsfirstkannada.com

ಜೋಡೆತ್ತು ಮಧ್ಯೆ ನಿಂತ ಫೋಟೋ ಹಾಕಿ ಮಾರ್ಮಿಕವಾಗಿ ಬರೆದ ಚಾಲೆಂಜಿಂಗ್ ಸ್ಟಾರ್; ಹೊಸ ಸಂದೇಶ ಕೊಟ್ಟ ದರ್ಶನ್..!

Share :

28-08-2023

  ಜೋಡೆತ್ತುಗಳ ಫೋಟೋ ಶೇರ್ ಮಾಡಿದ ಸ್ಟಾರ್ ನಟ

  ಕಿಚ್ಚ-ದಚ್ಚು ಬಗ್ಗೆ ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ..!

  ಸುದೀಪ್​-ದರ್ಶನ್​ ಒಂದಾಗುವ ಕಾಲ ತೀರ ಸಮೀಪನಾ?

ಸ್ಯಾಂಡಲ್​ವುಡ್​ನಲ್ಲಿ ಬಿಗ್​ ಡೈ ಹಾರ್ಡ್​ ಫ್ಯಾನ್​ ಫಾಲೋ ಹೊಂದಿರೋದು ಎಂದರೆ ಅದು ಜಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ. ಬರೀ ಮಾಸ್​ ಫ್ಯಾನ್ಸ್​ಗಳನ್ನೇ ಹೊಂದಿರುವ ಈ ಸ್ಟಾರ್​ ಮತ್ತೊಂದು ಸಕ್ಸಸ್​ಫುಲ್​ ಮೂವಿ ಕೊಡೋಕೆ ರೆಡಿಯಾಗಿದ್ದಾರೆ. ಇದೆಲ್ಲದಕ್ಕಿಂತ ಮಿಂಚಿನದ್ದು ಸಂತಸದ ಕ್ಷಣ ಮೊನ್ನೆ ಬರ್ತ್​ ಡೇ ಪಾರ್ಟಿಯಲ್ಲಿ ನಡೆದಿರೋದು. ಆ ಸಮಯ ನೆರವೇರಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆಯೇ ಗಜ ಖ್ಯಾತಿಯ ನಟ ಫೇಸ್​ಬುಕ್, ಟ್ವಿಟರ್​​ನಲ್ಲಿ ಹಾಕಿರೋ ಆ ಎತ್ತುಗಳ ಪೋಸ್ಟ್​ ಮತ್ತಷ್ಟು ಹಿಂಟ್ ಕೊಡುವಂತೆ ಇದೆ.

ನಟ ದರ್ಶನ್ ಮತ್ತು ಸುದೀಪ್

ಕನ್ನಡ ಚಿತ್ರರಂಗದಲ್ಲಿ ಸದ್ಯ ಸುದೀಪ್​-ದರ್ಶನ್ ಬಗ್ಗೆ ಸಾಕಷ್ಟು ಗುಲ್ಲು ಎದ್ದಿದೆ. ಈ ಕುಚುಕು ಗೆಳೆಯರು ಮತ್ತೆ ಒಂದಾಗುತ್ತಾರೆ ಎಂದು ಹೇಳಲಾಗುತ್ತಿದೆ. ಕಳೆದ 6 ವರ್ಷದಿಂದ ದೂರ.. ದೂರವಾಗಿರುವ ಈ ಸ್ಯಾಂಡಲ್​ವುಡ್​ ಶಕ್ತಿಗಳು ಒಂದಾಗುವ ಸಮಯಕ್ಕೆ ಎರಡು ಕಡೆಯ ಫ್ಯಾನ್ಸ್​ ಕಾತುರದಿಂದ ಇದ್ದಾರೆ. ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಒಂದಾಗಬೇಕು ಎಂಬ ದೊಡ್ಡ ಬಿರುಗಾಳಿಯೇ ಎದ್ದಿದ್ದು ಪಾಸಿಟಿವ್​ ಕಾಮೆಂಟ್ಸ್​ ಹೆಚ್ಚಾಗಿ ಬರುತ್ತಿವೆ. ಕ್ರಾಂತಿ ಜೊತೆಗೆ ಕಿಚ್ಚು, ಕಿಚ್ಚಿನ ಜೊತೆಗೆ ಕ್ರಾಂತಿ ಎರಡು ಒಟ್ಟೊಟ್ಟಿಗಿದ್ದರೆ, ಸ್ಯಾಂಡಲ್​ವುಡ್​ ಇನ್ನು ಗಟ್ಟಿಯಾಗುತ್ತದೆಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸುತ್ತಿದ್ದಾರೆ.

ದರ್ಶನ್ ಹಾಕಿರೋ ಪೋಸ್ಟ್​ನ ಅರ್ಥವೇನು?

ಇನ್ನು ಇಂದು ಬೆಳಗ್ಗೆ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರೋ ಜೋಡೆತ್ತುಗಳ ಫೋಟೋ ಜೊತೆಗೆ ‘ಕಾಲಾಯ ತಸ್ಮಯ್ ನಮಃ’ ಎಂಬ ಸಾಲುಗಳನ್ನು ಬರೆದಿದ್ದಾರೆ. ಇದು ಕಿಚ್ಚ ಸುದೀಪ್​ ಮತ್ತು ದರ್ಶನ್​ ಒಂದಾಗುವ ಕಾಲ ತೀರ ಸಮೀಪ ಬಂದಿದೆ ಎಂದು ಹೇಳಲಾಗುತ್ತದೆ. ಏಕೆಂದರೆ ಪೋಸ್ಟ್​ ಮಾಡಿರುವ ಜೋಡೆತ್ತುಗಳು ಇದಕ್ಕೆ ದೊಡ್ಡ ಅಪ್​ಡೇಟ್​ ಕೊಟ್ಟಂತೆ ಇದೆ. ಇದಕ್ಕಾಗಿ ಫ್ಯಾನ್ಸ್​ ವಿಧ ವಿಧವಾದ ಕಾಮೆಂಟ್ಸ್​ ಮಾಡುತ್ತಿದ್ದಾರೆ.

ಇನ್ನು ದರ್ಶನ್ ಪೋಸ್ಟ್​ ಜತೆ ಬರೆದಿರುವ ಕಾಲಾಯ ತಸ್ಮಯ್ ನಮಃ ಎಂಬುದರ ಅರ್ಥ ಹೀಗಿದೆ. ಕಾಲಾಯ ತಸ್ಮಯ್ ನಮಃ ಎಂದರೆ ಕಾಲವೇ ಎಲ್ಲ ಕಲಿಸುವುದರ ಜತೆಗೆ ಮರೆಸುತ್ತದೆ. ನಾವು ಧೈರ್ಯದಿಂದ ಮುನ್ನುಗ್ಗಬೇಕು. ಕಾಲ ಜೀವನದ ಪಾಠವಾಗಿರುತ್ತೆ. ಮನಸ್ಸಿನೊಳಗೆ ಅಡಗಿದ ನೋವು ಕಾಲದ ಜೊತೆ ಸಾಯಲ್ಲ, ಅದು ಸಾಯವುದು ನಮ್ಮ ಜೊತೆಯೇ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೋಡೆತ್ತು ಮಧ್ಯೆ ನಿಂತ ಫೋಟೋ ಹಾಕಿ ಮಾರ್ಮಿಕವಾಗಿ ಬರೆದ ಚಾಲೆಂಜಿಂಗ್ ಸ್ಟಾರ್; ಹೊಸ ಸಂದೇಶ ಕೊಟ್ಟ ದರ್ಶನ್..!

https://newsfirstlive.com/wp-content/uploads/2023/08/DARSHAN_POST.jpg

Load More