newsfirstkannada.com

×

ದರ್ಶನ್ ಆಪ್ತ ನಾಗರಾಜ್ ಆಯ್ತು, ಇದೀಗ ಮತ್ತೊಬ್ಬ ನಟನ ಆಪ್ತನ ಬಂಧನ

Share :

Published September 10, 2024 at 12:21pm

    ದ್ರುವ ಸರ್ಜಾ ಅತ್ಯಾಪ್ತ ಹಾಗೂ ಮ್ಯಾನೆಜರ್​ನನ್ನು ಬಂಧಿಸಿದ ಪೊಲೀಸರು

    ಪ್ರಶಾಂತ್ ಪೂಜಾರಿಯ ಮೇಲೆ ಬೇರೆಯವರಿಂದ ಹಲ್ಲೆ ಮಾಡಿಸಿದ್ದ ಅಶ್ವಿನ್​

    ದ್ರುವ ಸರ್ಜಾ ಜೊತೆ ಪ್ರಶಾಂತ್ ಪೂಜಾರಿ ಕ್ಲೋಸ್ ಆಗಿದ್ದಕ್ಕೆ ನಡೀತು ಹಲ್ಲೆ

ಬೆಂಗಳೂರು:ನಟ ದ್ರುವ ಸರ್ಜಾ ಮ್ಯಾನೇಜರ್​ ಅಶ್ವಿನ್​ನನ್ನು ಬನಶಂಕರಿ ನಗರದ ಪೊಲೀಸರು ಬಂಧಿಸಿದ್ದಾರೆ. ದ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ ಪೂಜಾರಿಯ ಮೇಲೆ ಹಲ್ಲೆ ಪ್ರಕರಣದ ಸಂಬಂಧ ಅಶ್ವಿನ್​ರನ್ನು ಬಂಧಿಸಲಗಿದೆ. ಪ್ರಶಾಂತ ಪೂಜಾರಿ ಮೇಲಿನ ಹಲ್ಲೆಯ ಮಾಸ್ಟರ್ ಮೈಂಡ್ ನಟ ದ್ರುವ ಸರ್ಜಾ ಮ್ಯಾನೆಜರ್ ಅಶ್ವಿನ್​ನೇ ಎಂದು ತಿಳಿದು ಬಂದ ಹಿನ್ನೆಲೆ ಅವರನ್ನು ಬಂಧಲಾಗಿದೆ.

ಇದನ್ನೂ ಓದಿ: ಚಿಕ್ಕಣ್ಣ ಮಾತ್ರವಲ್ಲ ಮತ್ತೊಬ್ಬ ನಟನಿಂದಲೂ ಸಾಕ್ಷಿ ಹೇಳಿಕೆ ಪಡೆದಿರುವ ಪೊಲೀಸರು; ಯಾರವರು?

ಆರೋಪ ಏನು..?

ಮೇ.26ರಂದು ರಾತ್ರಿ ಪ್ರಶಾಂತ್ ಪೂಜಾರಿ ಮೇಲೆ ಹರ್ಷ ಮತ್ತು ಸುಭಾಷ್ ಅನ್ನುವವರು ಹಲ್ಲೆ ಮಾಡಿದ್ದರು. ಆದ್ರೆ ಹಲ್ಲೆ ಮಾಡಿಸಿದ್ದು ಮಾತ್ರ ದ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ. ದ್ರುವ ಸರ್ಜಾಗೆ ಚಾಲಕನಾಗಿಯೂ ಕೆಲಸ ಮಾಡಿಕೊಂಡಿದ್ದ ನಾಗೇಂದ್ರನಿಗೆ ಸಾಥ್ ಕೊಟ್ಟಿದ್ದೇ ಮ್ಯಾನೆಜರ್ ಅಶ್ವಿನ್. ಇತ್ತೀಚೆಗೆ ಪ್ರಶಾಂತ್ ಪೂಜಾರಿ ದ್ರುವ ಸರ್ಜಾರಿಗೆ ತುಂಬಾ ಆಪ್ತರಾಗಿದ್ದರು. ಇದು ನಾಗೇಂದ್ರ ಹಾಗೂ ಅಶ್ವಿನ್​ಗೆ ಸಹಿಸಿಕೊಳ್ಳಲು ಆಗಿರಲಿಲ್ಲವಂತೆ. ಅವರೇ ಹಲ್ಲೆ ಮಾಡಿದ್ರೆ ಗೊತ್ತಾಗುತ್ತೆ ಅಂತ ಸ್ನೇಹಿತರ ಕೈಯಲ್ಲಿ ಹಲ್ಲೆ ಮಾಡಿಸುವ ಸ್ಕೆಚ್ ಹಾಕಿದ್ದಾರೆ. ಕನಕಪುರ ಮೂಲದ ಅಂದ್ರೆ ತಮ್ಮೂರಿನ ಹುಡುಗರಾದ ಹರ್ಷ ಮತ್ತು ಸುಭಾಷ್​ರಿಂದ ಹಲ್ಲೆ ಮಾಡಿಸಿದ್ದಾರೆ. ತನಿಖೆ ವೇಳೆ ಇದರಲ್ಲಿ ಅಶ್ವಿನ್ ಪಾತ್ರ ಇರೋದು ಕಂಡು ಬಂದಿದೆ. ಈ ಹಿನ್ನೆಲೆ ಅಶ್ವಿನ್​ನನ್ನು ಬಂಧಿಸಿದ್ದಾರೆ ಬನಶಂಕರಿ ಪೊಲೀಸರು.

ಇದನ್ನೂ ಓದಿ: ಪೊಲೀಸರ ಚಾರ್ಜ್​ಶೀಟ್​ನಲ್ಲಿ ಚಿಕ್ಕಣ್ಣನ ಹೇಳಿಕೆಯೂ ಉಲ್ಲೇಖ; ಅಂದು ಪವನ್ ಬಂದು ದರ್ಶನ್ ಕಿವಿಯಲ್ಲಿ ಹೇಳಿದ್ದು ಏನು..?

ಕಳೆದ ವರ್ಷ ಅಶ್ವಿನ್ ಬರ್ತ್​ಡೇಗೆ ಅಂತ ದ್ರುವ ಸರ್ಜಾ ದುಬಾರಿ ಫಾರ್ಚ್ಯೂನರ್ ಕಾರ್ ಕೂಡ ಗಿಫ್ಟಾಗಿ ನೀಡಿದ್ದರು. ದ್ರುವ ಸರ್ಜಾಗೆ ಅಶ್ವಿನ್ ಕೂಡ ಅಷ್ಟೇ ಅತ್ಯಾಪ್ತರಾಗಿದ್ದರು. ಆದ್ರೆ ಯಾವಾಗ ದ್ರುವ ಸರ್ಜಾ ಜೊತೆ ಪ್ರಶಾಂತ್ ಪೂಜಾರಿ ತುಂಬಾ ಕ್ಲೋಸ್ ಆಗತೊಡಗಿನೊ ಸಹಿಸಿಕೊಳ್ಳಲಾಗದ ಅಶ್ವಿನ್ ಈ ಕಾರ್ಯವನ್ನು ಎಸಗಿದ್ದಾನೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಆಪ್ತ ನಾಗರಾಜ್ ಆಯ್ತು, ಇದೀಗ ಮತ್ತೊಬ್ಬ ನಟನ ಆಪ್ತನ ಬಂಧನ

https://newsfirstlive.com/wp-content/uploads/2024/09/DRUV-SARJA-MANAGER-ASHWIN.jpg

Load More