ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಶೃಂಗೇರಿ
ಬಿಗ್ಬಾಸ್ ರೂಲ್ ಬುಕ್ ಇಡಲು ಸ್ಟೋರ್ ರೂಮ್ಗೆ ಹೋಗಿದ್ದಾಗ ಆಗಿದ್ಧೇನು?
ಸ್ಟೋರ್ ರೂಮ್ನಲ್ಲಿ ಒಬ್ಬೊಬ್ಬರೇ ಮಾತಾಡಿಕೊಂಡ 777 ಚಾರ್ಲಿ ನಟಿ ಸಂಗೀತಾ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಶುರುವಾಗಿ ಮೂರು ವಾರ ಕಳೆಯುತ್ತಿದೆ. ಬಾದ್ಶಾ ಕಿಚ್ಚ ನಿರೂಪಣೆಯ ಬಿಗ್ ಬಾಸ್ ಸೀಸನ್ 10 ಭರ್ಜರಿಯಾಗಿ ಮೂಡಿಬರುತ್ತಿದೆ. 777 ಚಾರ್ಲಿ ಸಿನಿಮಾದ ಮೂಲಕ ಖ್ಯಾತಿ ಪಡೆದಿರೋ ನಟಿ ಸಂಗೀತಾ ಶೃಂಗೇರಿ ಅವರು ಬಿಗ್ಬಾಸ್ ಸ್ಪರ್ಧಿಯಾಗಿದ್ದಾರೆ.
ಇನ್ನೂ, ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಸಂಗೀತಾ ಶೃಂಗೇರಿ ಅವರು ತಮ್ಮದೇಯಾದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಬಿಗ್ಬಾಸ್ ಕೊಟ್ಟ ಟಾಸ್ಕ್ಗಳನ್ನು ಚೆನ್ನಾಗಿ ಆಡುತ್ತಿದ್ದಾರೆ. ಆಗಾಗ ಮನೆಯಲ್ಲಿ ಗಲಾಟೆ ಸಹ ಮಾಡಿಕೊಳ್ಳುತ್ತಾ ಇರುತ್ತಾರೆ. ಇದರ ಮಧ್ಯೆ ಸಂಗೀತಾ ಶೃಂಗೇರಿ ಅವರು ಕೆಲಕಾಲ ಬಿಗ್ಬಾಸ್ ಸ್ಟೋರ್ ರೂಮ್ನಲ್ಲೇ ಲಾಕ್ ಆಗಿದ್ದರು. ಹೌದು, ಸಂಗೀತಾ ಅವರು ಬಿಗ್ಬಾಸ್ ರೂಲ್ ಬುಕ್ ಇಡಲು ಸ್ಟೋರ್ ರೂಮ್ಗೆ ಹೋಗುತ್ತಾರೆ. ಆಗ ಬಿಗ್ಬಾಸ್ ಬಳಿ ಮಾತಾಡುತ್ತಾ ಬಾಗಿಲಿನ ಬಳಿ ಬರುತ್ತಾರೆ. ಆಗ ಸ್ಟೋರ್ ರೂಮ್ ಡೋರ್ ತೆಗೆಯಲು ನೋಡುತ್ತಾರೆ.
ಅದೇ ವೇಳೆ ಏಕಾಏಕಿ ಸ್ಟೋರ್ ರೂಮ್ ಡೋರ್ ಲಾಕ್ ಆಗುತ್ತೆ. ಆ ಬಾಗಿಲನ್ನು ತೆಗೆಯಲು ಹರಸಾಹಸ ಪಡುತ್ತಾರೆ. ಬಳಿಕ ಕ್ಯಾಮೆರಾ ಕಡೆ ಮುಖ ಮಾಡಿ ಲಾಕ್ ಓಪನ್ ಮಾಡಿ ಬಿಗ್ಬಾಸ್ ಪ್ಲೀಸ್ ಎನ್ನುತ್ತಾರೆ. ನಗುತ್ತಾ ನನಗೆ ಭಯಾ ಆಗೋದಿಲ್ಲ. ನನಗೆ ಭಯ ಪಡಿಸೋಕೆ ನೋಡುತ್ತಿದ್ದೀರಾ ಎಂದು ಹೇಳುತ್ತಾ ಅಲ್ಲೇ ಕುಳಿತುಕೊಳ್ಳುತ್ತಾರೆ. ಆಮೇಲೆ ಆಕಡೆ ಈಕಡೆ ನೋಡುತ್ತಾ ಓಹೋ ನನ್ನನ್ನು ಯಾರಾದರೂ ಹುಡುಕುತ್ತಾರೆ ಅಂತಾ ಲಾಕ್ ಮಾಡಿದ್ದೀರಾ ಅಂತಾರೆ. ಬಿಗ್ಬಾಸ್ ನೀವು ಬರೀ ನಮ್ರತಾ ಅವರನ್ನೇ ಮಾತನಾಡಿಸುತ್ತೀರಾ. ನನ್ನ ಯಾರು ಹುಡುಕುವುದಿಲ್ಲ. ಯಾರಿಗೂ ನನ್ನ ಮೇಲೆ ಪ್ರೀತಿ ಇಲ್ಲ ಎಂದು ಹೇಳುತ್ತಾರೆ. ಆಗ ದಿಢೀರ್ ಸ್ಟೋರ್ ರೂಮ್ ಡೋರ್ ಲಾಕ್ ಓಪನ್ ಆಗುತ್ತೆ. ಆಗ ಹೊರಗಡೆ ಹೋಗುತ್ತಿದ್ದಂತೆ ಅಲ್ಲೇ ಕುಳಿತುಕೊಂಡಿದ್ದ ಕಾರ್ತಿಕ್ಗೆ ಸಂಗೀತಾ ಬೈತಾರೆ. ಆಗಿನಿಂದ ಡೋರ್ ಬಾರಿಸುತ್ತಿದ್ದೇನೆ ಯಾರು ಬಂದೇ ಇಲ್ಲ ಎಂದು ಹೇಳುತ್ತಾ ಹೋಗುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ