newsfirstkannada.com

‘ನನ್ನ ಗಂಡನ ಬೆಂಬಲಕ್ಕೆ ನಿಂತಿದ್ದಕ್ಕೆ ಥ್ಯಾಂಕ್ಸ್​​..’- ಕೊಹ್ಲಿಗೆ ಧನ್ಯವಾದ ತಿಳಿಸಿದ ಸ್ಟಾರ್​ ಕ್ರಿಕೆಟರ್​ ಹೆಂಡತಿ!

Share :

Published July 5, 2024 at 7:35pm

Update July 5, 2024 at 7:36pm

  ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಟೀಮ್​ ಇಂಡಿಯಾ

  ವಿಶ್ವಕಪ್​ ವಿಜಯೋತ್ಸವದಲ್ಲಿ ಸ್ಟಾರ್​​ ವೇಗಿಯನ್ನು ನೆನೆದ ವಿರಾಟ್​​ ಕೊಹ್ಲಿ!

  ಸ್ಟಾರ್​ ವೇಗಿ ಬಗ್ಗೆ ಕ್ರಿಕೆಟ್​ ಲೋಕದ ದಿಗ್ಗಜ ವಿರಾಟ್​ ಕೊಹ್ಲಿ ಹೇಳಿದ್ದೇನು?

ವೆಸ್ಟ್​ ಇಂಡೀಸ್​ನಲ್ಲಿ ನಡೆದ 2024ರ ಟಿ20 ವಿಶ್ವಕಪ್​ ಫೈನಲ್​​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿತ್ತು. ಇದಕ್ಕೆ ಕಾರಣ ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಬುಮ್ರಾ ಎಸೆದ ಕೊನೆ 3 ಓವರ್​ಗಳು. ಇವರು ಕೊನೆ 3 ಓವರ್​ಗಳಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿ ಭಾರತ ತಂಡವನ್ನು ಗೆಲ್ಲಿಸಿದ್ರು. ಹಾಗಾಗಿ ಬುಮ್ರಾ ಅವರನ್ನು ವಿರಾಟ್​ ಕೊಹ್ಲಿ ಇತ್ತೀಚೆಗೆ ಮುಂಬೈ ವಾಂಖೆಡೆ ಸ್ಟೇಡಿಯಮ್​​ನಲ್ಲಿ ನಡೆದ ಟಿ20 ವಿಶ್ವಕಪ್​ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೊಂಡಾಡಿದ್ರು.

ಇನ್ನು, ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಗೆಲ್ಲಲು ಕಾರಣ ಬುಮ್ರಾ ಎಂದು ವಿರಾಟ್​ ಕೊಹ್ಲಿ ಹೇಳಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸ್ಟಾರ್​ ವೇಗಿ ಬುಮ್ರಾ ಹೆಂಡತಿ ಸಂಜನಾ ಗಣೇಶ್​ ಅವರೇ ಕೊಹ್ಲಿ ಅವರಿಗೆ ಥ್ಯಾಂಕ್ಸ್​ ತಿಳಿಸಿದ್ದಾರೆ. ಡಿಯರ್​ ವಿರಾಟ್​ ಕೊಹ್ಲಿ, ಕ್ರಿಕೆಟ್​ ಜಗತ್ತಿನ ಮುಂದೆ ಬುಮ್ರಾ ಅವರನ್ನು ಹೈಪ್​ ಮಾಡಿದ್ದಕ್ಕೆ ಧನ್ಯಾವಾದಗಳು ಎಂದು ಟ್ವೀಟ್​ ಮಾಡಿದ್ದಾರೆ.

ಬುಮ್ರಾ ಬಗ್ಗೆ ಕೊಹ್ಲಿ ಹೇಳಿದ್ದೇನು..?

ಟೀಮ್​ ಇಂಡಿಯಾ ಯಾವಾಗ ಸಂಕಷ್ಟಕ್ಕೆ ಸಿಲುಕಿದ್ರೂ ಈತ ಇದ್ದೇ ಇರುತ್ತಾನೆ. ಪ್ರತಿ ಬಾರಿ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮನ್ನು ಪದೇ ಪದೇ ಗೆಲ್ಲಿಸೋ ಭರವಸೆ ಮೂಡಿಸಿದ್ದು ಬೂಮ್ರಾ. ಮತ್ತೆ ಮತ್ತೆ ಈ ಟಿ20 ವಿಶ್ವಕಪ್‌ ಗೆಲುವಿನತ್ತ ಕರೆತಂದ ವ್ಯಕ್ತಿ ಆತ. ಬುಮ್ರಾ ಎಂಟನೇ ಅದ್ಭುತ. ಅವರು ನಮ್ಮ ದೇಶಕ್ಕಾಗಿ ಆಡುತ್ತಿರುವುದು ನಮ್ಮ ಅದೃಷ್ಟ. ಫೈನಲ್‌ ಪಂದ್ಯದ ಕೊನೆ 5 ಓವರ್​ಗಳಲ್ಲಿ ಬುಮ್ರಾ ಬೌಲಿಂಗ್​ ಮಾತ್ರ ಬಹಳ ವಿಶೇಷ. 2-3 ಬೌಲ್​ ಮಾಡಿ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ರು. ನಾವು ಎಲ್ಲರೂ ಬುಮ್ರಾ ಅವರನ್ನು ಅಭಿನಂದಿಸೋಣ. ಭಾರತದ ವಿಶ್ವಕಪ್​ ಗೆಲುವಿಗೆ ಅವರೇ ಕಾರಣ ಎಂದಿದ್ದರು ಕೊಹ್ಲಿ.

ಇದನ್ನೂ ಓದಿ: ರೋಹಿತ್​​, ಹಾರ್ದಿಕ್​ ಅಲ್ಲ.. ಭಾರತ ವಿಶ್ವಕಪ್​ ಗೆಲುವಿಗೆ ಈ ಆಟಗಾರ ಕಾರಣ ಎಂದ ಕೊಹ್ಲಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ನನ್ನ ಗಂಡನ ಬೆಂಬಲಕ್ಕೆ ನಿಂತಿದ್ದಕ್ಕೆ ಥ್ಯಾಂಕ್ಸ್​​..’- ಕೊಹ್ಲಿಗೆ ಧನ್ಯವಾದ ತಿಳಿಸಿದ ಸ್ಟಾರ್​ ಕ್ರಿಕೆಟರ್​ ಹೆಂಡತಿ!

https://newsfirstlive.com/wp-content/uploads/2024/07/Kohli_Bumrah.jpg

Load More