newsfirstkannada.com

ರಾಜ್ಯಸಭೆಯಲ್ಲಿ ಮಣಿಪುರ ಹಿಂಸಾಚಾರ ಗದ್ದಲ.. ಆಮ್​ ಆದ್ಮಿ ಪಕ್ಷದ ಸದಸ್ಯ ಸಂಜಯ್ ಸಿಂಗ್ ಮುಂಗಾರು ಅಧಿವೇಶನದಿಂದ ಅಮಾನತು..!

Share :

24-07-2023

    ‘ಸತ್ಯ ಹೇಳಿದ್ದಕ್ಕೆ ಅಮಾನತು ಶಿಕ್ಷೆ’ ಎಂದ ಕೇಜ್ರಿವಾಲ್ ಪಕ್ಷ

    ಗಲಾಟೆ-ಗದ್ದಲದಲ್ಲೇ ಕಳೆದುಹೋಗ್ತಿದೆ ಮುಂಗಾರು ಅಧಿವೇಶನ

    ಮಣಿಪುರ ಹಿಂಸಾಚಾರದ ಬಗ್ಗೆ ಮೋದಿ ಉತ್ತರಕ್ಕಾಗಿ ಪಟ್ಟು

ರಾಜ್ಯಸಭೆ ಕಲಾಪದಲ್ಲಿ ಇವತ್ತು ಮಣಿಪುರ ಹಿಂಸಾಚಾರ ಪ್ರತಿಧ್ವನಿಸಿ ಕೋಲಾಹಲ ಸೃಷ್ಟಿಸಿತ್ತು. ತೀವ್ರ ಗದ್ದಲ, ಗಲಾಟೆಗಳ ಮಧ್ಯೆ ಅಶಿಸ್ತು ತೋರಿದ ಆರೋಪದ ಮೇಲೆ ಆಮ್​ ಆದ್ಮಿ ಪಕ್ಷದ ಸದಸ್ಯ ಸಂಜಯ್ ಸಿಂಗ್​ರನ್ನು ಮಂಗಾರು ಅಧಿವೇಶನದಿಂದ ಅಮಾನತು ಆಗಿದ್ದಾರೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸಂಜಯ್ ಸಿಂಗ್​ರನ್ನು ಅಮಾನತು ಮಾಡಲು ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನ್​​​ಕರ್​​ ಮುಂದೆ ಪ್ರಸ್ತಾಪ ಮಾಡಿದರು. ಈ ಪ್ರಸ್ತಾಪವನ್ನು ಅಧ್ಯಕ್ಷರು, ಧ್ವನಿ ಮತಕ್ಕೆ ಹಾಕಿದರು. ಧ್ವನಿಮತದ ಆಧಾರದ ಮೇಲೆ ಧನ್​ಕರ್​ ಅವರು ಸಂಜಯ್ ಸಿಂಗ್​ರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಬಳಿಕ ರಾಜ್ಯಸಭೆಯಲ್ಲಿ ಗಲಾಟೆ-ಗದ್ದಲ ಮತ್ತಷ್ಟು ಜೋರಾದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಕಲಾಪವನ್ನು ಮುಂದೂಡಿದರು. ಸಂಜಯ್ ಸಿಂಗ್​ರನ್ನು ಅಮಾನತು ಮಾಡ್ತಿದ್ದಂತೆ ಪ್ರತಿಕ್ರಿಯಿಸಿರುವ AAP ನಾಯಕ ಸೌರಭ್ ಭಾರಧ್ವಾಜ್, ನಮ್ಮ ಸಂಸದ ಸತ್ಯವನ್ನು ಹೇಳಿದ್ದಕ್ಕೆ ರಾಜ್ಯಸಭೆ ಕಲಾಪದಿಂದ ಅಮಾನತು ಮಾಡಿದ್ದಾರೆ. ಇದರಿಂದ ನಾವು ಧೃತಿಗೆಡುವುದಿಲ್ಲ. ನಮ್ಮ ಕಾನೂನು ಹೋರಾಟದ ತಂಡ, ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡ್ತಿದೆ ಎಂದಿದ್ದಾರೆ.

ಜುಲೈ 20 ರಂದು ಮುಂಗಾರು ಅಧಿವೇಶನ ಶುರುವಾಗಿದೆ. ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು. ಅಲ್ಲಿ ಏನಾಗ್ತಿದೆ ಅನ್ನೋದನ್ನು ದೇಶದ ಜನರಿಗೆ ತಿಳಿಸಬೇಕು ಅಂತಾ ವಿಪಕ್ಷಗಳು ಆಗ್ರಹಿಸುತ್ತಿವೆ. ಇದೇ ವಿಚಾರವನ್ನು ಇಟ್ಟುಕೊಂಡು ಕಲಾಪದ ವೇಳೆ ವಿಪಕ್ಷಗಳು ಗಲಾಟೆ ಮಾಡುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಸಭೆಯಲ್ಲಿ ಮಣಿಪುರ ಹಿಂಸಾಚಾರ ಗದ್ದಲ.. ಆಮ್​ ಆದ್ಮಿ ಪಕ್ಷದ ಸದಸ್ಯ ಸಂಜಯ್ ಸಿಂಗ್ ಮುಂಗಾರು ಅಧಿವೇಶನದಿಂದ ಅಮಾನತು..!

https://newsfirstlive.com/wp-content/uploads/2023/07/Sanjay-Singh.jpg

Load More