ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಯಾರಿ
ಸಂಜು ಸ್ಯಾಮ್ಸನ್ಗೆ ಬಿಗ್ ಶಾಕ್ ಕೊಟ್ಟ ರಾಜಸ್ಥಾನ್ ರಾಯಲ್ಸ್ ಟೀಮ್
ಕ್ಯಾಪ್ಟನ್ಸಿಯಿಂದಲೇ ಸಂಜು ಸ್ಯಾಮ್ಸನ್ಗೆ ಕೊಕ್ ನೀಡಿದ್ಯಾ ರಾಜಸ್ಥಾನ್?
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗೆ ಇನ್ನೇನು ಕೇವಲ 6 ತಿಂಗಳು ಬಾಕಿ ಇದೆ. ವರ್ಷದ ಕೊನೆಗೆ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಈಗಾಗಲೇ ಬಿಸಿಸಿಐ ಎಲ್ಲಾ ಐಪಿಎಲ್ ತಂಡಗಳಿಗೂ 4+2 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಮಧ್ಯೆ ಕ್ಯಾಪ್ಟನ್ ಸಂಜು ಸ್ಯಾಮ್ಸನ್ಗೆ ರಾಜಸ್ಥಾನ್ ರಾಯಲ್ಸ್ ಬಿಗ್ ಶಾಕ್ ನೀಡಿದೆ.
ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್ ಆಯ್ಕೆ ಆಗಿದ್ದರು. ಪಂತ್ ಅವರನ್ನು ಬೆಂಚ್ ಕಾಯಿಸಿ 2 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಲಾಯ್ತು. ಆದ್ರೂ ಕಳಪೆ ಪ್ರದರ್ಶನ ನೀಡಿದ್ದು, ಸಂಜು ಸ್ಯಾಮ್ಸನ್ ತಂಡ ತನ್ನ ಮೇಲಿಟ್ಟಿದ್ದ ಭರವಸೆಯನ್ನು ಕಳೆದುಕೊಂಡರು. ಹಾಗಾಗಿ ಸಂಜು ಸ್ಯಾಮ್ಸನ್ ಅವರನ್ನು 2024ರ ದುಲೀಪ್ ಟ್ರೋಫಿಗೂ ಆಯ್ಕೆ ಮಾಡಿಲ್ಲ. ಇದು ಸಂಜು ಸ್ಯಾಮ್ಸನ್ ಐಪಿಎಲ್ ಕರಿಯರ್ ಮೇಲೂ ಪರಿಣಾಮ ಬೀರಿದೆ.
ರಾಜಸ್ಥಾನ್ ರಾಯಲ್ಸ್ ಕ್ಯಾಪ್ಟನ್ ಆಗಿ ಸಂಜು ಅದ್ಭುತ ಪ್ರದರ್ಶನ
ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿ 2021ರಲ್ಲಿ ನೇಮಕ ಮಾಡಲಾಯ್ತು. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ 2 ಬಾರಿ ಸೆಮಿ ಫೈನಲ್ಸ್ ಮತ್ತು 1 ಬಾರಿ ಫೈನಲ್ ತಲುಪಿದೆ. ಕಳೆದ ಸೀಸನ್ನಲ್ಲೂ ಸಂಜು ರಾಜಸ್ಥಾನ್ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ರು.
ಸಂಜು ಬದಲಿಗೆ ಜೋಸ್ ಬಟ್ಲರ್ ಕ್ಯಾಪ್ಟನ್
ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಕ್ಯಾಪ್ಟನ್ ಆಗಿ ಜೋಸ್ ಬಟ್ಲರ್ ನೇಮಕಗೊಳ್ಳಲಿದ್ದಾರೆ. ಹಾಗಾಗಿ ಸಂಜು ಸ್ಯಾಮ್ಸನ್ಗೆ ಕ್ಯಾಪ್ಟನ್ಸಿಯಿಂದ ಕೊಕ್ ನೀಡಲಾಗುತ್ತಿದೆ. ಇವರು ಮುಂದಿನ ಸೀಸನ್ಗೆ ಬೇರೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಭರ್ಜರಿ ಗುಡ್ನ್ಯೂಸ್ ಕೊಟ್ಟ KL ರಾಹುಲ್; ಏನದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ