ಸ್ಯಾಮ್ಸನ್ ಮೇಲೆ ಕಣ್ಣಿಟ್ಟ IPLನ ಬಲಿಷ್ಠ ತಂಡ
ಸ್ಯಾಮ್ಸನ್ಗೆ ಗಾಳ ಹಾಕಿದ ಫ್ರಾಂಚೈಸಿ ಯಾವುದು?
ಹರಾಜಿಗೂ ಮೊದಲೇ ಚಾಂಪಿಯನ್ ತಂಡ ಸೇರಲು ಡೀಲ್..!
ಐಪಿಎಲ್ ಮೆಗಾ ಆಕ್ಷನ್ ಸಮೀಪಿಸಿದ ಬೆನ್ನಲ್ಲೆ ಫ್ರಾಂಚೈಸಿಗಳು ಫುಲ್ ಆಕ್ಟಿವ್ ಆಗಿವೆ. ಸ್ಟಾರ್ ಕ್ರಿಕೆಟಿಗರಿಗೆ ಗಾಳ ಹಾಕೋ ಪ್ರಯತ್ನಕ್ಕೆ ಈಗಿನಿಂದಲೇ ಮುಂದಾಗಿವೆ. ಇದೇ ವಿಚಾರವಾಗಿ ಬಿಗ್ ಅಪ್ಡೇಟ್ ನ್ಯೂಸ್ ಹೊರಬಿದ್ದಿದೆ. ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಹಾಗೂ ಐಪಿಎಲ್ನ ಬಿಗ್ ಹಿಟ್ಟರ್ ಸಂಜು ಸ್ಯಾಮ್ಸನ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗಾಳ ಹಾಕಿದೆ.
ಐಪಿಎಲ್ ಅಂದ್ರೆನೇ ಕ್ರೇಜ್. ಐಪಿಎಲ್ ಅಂದ್ರೆನೆ ಎಕ್ಸೈಟ್ಮೆಂಟ್. ಈ ಕಲರ್ಫುಲ್ ಟೂರ್ನಿಗೆ ಎಷ್ಟು ಕೌತುಕತೆ ಇರುತ್ತೋ, ಐಪಿಎಲ್ ಆಕ್ಷನ್ ವಿಚಾರದಲ್ಲೂ ಅಷ್ಟೇ ಕುತೂಹಲ ಮನೆ ಮಾಡಿರುತ್ತೆ. ಡಿಸೆಂಬರ್ನಲ್ಲಿ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದ್ದು, ಇದಕ್ಕೆ ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿವೆ. ಇದ್ರಿಂದ ಐಪಿಎಲ್ ಭೀಷ್ಮ ಅಂತ ಕರೆಸಿಕೊಳ್ಳುವ ಸಿಎಸ್ಕೆ ಟೀಮ್ ಕೂಡ ಹೊರತಾಗಿಲ್ಲ. ಆಟಗಾರರ ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಯೆಲ್ಲೋ ಆರ್ಮಿ ಬಿಗ್ ಫಿಶ್ಗೆ ಗಾಳ ಹಾಕಿದ್ದು, ಕ್ರಿಕೆಟ್ ಲೋಕದಲ್ಲಿ ಹಲ್ಚಲ್ ಎಬ್ಬಿಸಿದೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ಗೆ ಮಾತ್ರ ವಾರ್ನಿಂಗ್.. ಬುಮ್ರಾ ವಿಚಾರದಲ್ಲಿ ಸೈಲೆಂಟ್.. BCCI ಅಸಲಿ ಕತೆ ರಿವೀಲ್..!
ಪವರ್ ಹಿಟ್ಟರ್ ಸಂಜು ಸ್ಯಾಮ್ಸನ್ಗೆ ಸಿಎಸ್ಕೆ ಗಾಳ?
ಮಸಲ್ಮ್ಯಾನ್, ಪವರ್ ಹಿಟ್ಟರ್ ಹಾಗೂ ಡಿಸ್ಟ್ರಕ್ಟಿವ್ ಬ್ಯಾಟರ್ ಅಂತೆಲ್ಲಾ ಕರೆಸಿಕೊಳ್ಳುವ ಸಂಜು ಸ್ಯಾಮ್ಸನ್ಗೆ ಗಾಳ ಹಾಕಲು ಚೆನ್ನೈ ಮುಂದಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಕಮ್ ವಿಕೆಟ್ಕೀಪರ್ ಆಗಿರೋ ಸಂಜು ಸ್ಯಾಮ್ಸನ್ನ ಚೆನ್ನೈ ತೆಕ್ಕೆಗೆ ತೆಗೆದುಕೊಳ್ಳಲು ಪ್ಲಾನ್ ರೂಪಿಸಿದ್ಯಂತೆ. ಆಕ್ಷನ್ನಲ್ಲಿ ಸಂಜುಗಾಗಿ ಬಹುಕೋಟಿ ವ್ಯಯಿಸಲು ಮ್ಯಾನೇಜ್ಮೆಂಟ್ ಪ್ಲಾನ್ ಮಾಡಿದ್ಯಂತೆ.
ಅಂದ ಹಾಗೇ ಚೆನ್ನೈ ತಂಡ ಏಕಾಏಕಿ ಸ್ಯಾಮ್ಸನ್ಗೆ ಬಲೆ ಬೀಸಿಲ್ಲ. ಎರಡು ತಿಂಗಳ ಹಿಂದಿನಿಂದಲೇ ಇದಕ್ಕಾಗಿ ಪ್ಲಾನ್ ಮಾಡಿತ್ತು. ಸಿಎಸ್ಕೆ ಸಿಇಒ ಕಾಸಿ ವಿಶ್ವನಾಥನ್ ಬೆಸ್ಟ್ ವಿಕೆಟ್ ಕೀಪರ್ನನ್ನ ತಂಡಕ್ಕೆ ಕರೆ ತರುತ್ತೇವೆ ಎಂಬ ಸ್ಟೇಟ್ಮೆಂಟ್ ಕೊಟ್ಟಿದ್ರು. ಸದ್ಯದ ಬೆಳವಣಿಗೆ ಅಂದು ಕೊಟ್ಟಿದ್ದ ಸ್ಟೇಟ್ಮೆಂಟ್ಗೆ ಉತ್ತರ ನೀಡ್ತಿದೆ.
ಸ್ಯಾಮ್ಸನ್, ತಲಾ ಧೋನಿಗೆ ಸಮರ್ಥ ಉತ್ತರಾಧಿಕಾರಿ..!
ಸಿಎಸ್ಕೆ ಮಾಜಿ ಕ್ಯಾಪ್ಟನ್ ಧೋನಿ ನಿವೃತ್ತಿ ಅಂಚಿನಲ್ಲಿದ್ದಾರೆ. 2025ನೇ ಐಪಿಎಲ್ ಆಡುವ ಬಗ್ಗೆ ಇಲ್ಲಿ ತನಕ ಯಾವುದೇ ಸ್ಪಷ್ಟನೆ ನೀಡಿಲ್ಲ. ಯಾವುದೇ ಕ್ಷಣದಲ್ಲಿ ಐಪಿಎಲ್ಗೆ ಗುಡ್ಬೈ ಹೇಳಬಹುದು. ಹೀಗಾಗಿ ಚೆನ್ನೈ, ಸ್ಯಾಮ್ಸನ್ನ ಸೆಳೆಯಲು ಮುಂದಾಗಿದೆ. ಸ್ಯಾಮ್ಸನ್ ಕೂಡ ಮಾಹಿಯಂತೆ ಕೂಲ್ ಅಂಡ್ ಕಾಮ್ ಕ್ರಿಕೆಟರ್. ವಿಕೆಟ್ ಕೀಪಿಂಗ್ ಜೊತೆ ಚತುರ ನಾಯಕ. ಮಾಹಿ ಸ್ಥಾನ ತುಂಬಬಲ್ಲ ಎಲ್ಲಾ ಸಾಮರ್ಥ್ಯ ಹೊಂದಿದ್ದಾರೆ.
ಇದನ್ನೂ ಓದಿ:KL ರಾಹುಲ್ ಆರ್ಭಟದ ಮುಂದೆ ಮಂಕಾಗಿದ್ದ ಧವನ್; ‘ರಾಹುಲ್ ವಿಲನ್ ಆದರು’ ಎಂದ ಫ್ಯಾನ್ಸ್..!
ಶೀಘ್ರದಲ್ಲೇ ರಾಜಸ್ಥಾನ ತಂಡಕ್ಕೆ ಸ್ಯಾಮ್ಸನ್ ಗುಡ್ಬೈ..!
ಒಂದೆಡೆ ಚೆನ್ನೈ ತಂಡ ಸ್ಯಾಮ್ಸನ್ನ ಸೆಳೆಯಲು ಸಜ್ಜಾಗಿದೆ ಅನ್ನೋ ಸುದ್ದಿಯ ನಡುವೆ, ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ ತಂಡ ಒಂದು ಕ್ರಿಪ್ಟಿಕ್ ಪೋಸ್ಟ್ ಹಾಕಿದೆ. ಎಕ್ಸ್ ಖಾತೆಯಲ್ಲಿ ಸಂಜು ಸ್ಯಾಮ್ಸನ್ರ ವಿಡಿಯೋ ಹಾಕಿ ಮೇಜರ್ ಮಿಸ್ಸಿಂಗ್ ಅನ್ನೋ ಕ್ಯಾಪ್ಷನ್ ನೀಡಿದೆ. ಇದು ಸ್ಯಾಮ್ಸನ್ ರಾಜಸ್ಥಾನ ತಂಡವನ್ನ ತೊರೆಯಲಿದ್ದಾರಾ ಅನ್ನೋ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
10 ವರ್ಷಗಳ ರಾಜಸ್ಥಾನ ಜತೆಗಿನ ಸಂಬಂಧ ಕೊನೆ?
ಸ್ಯಾಮ್ಸನ್ ಇಂದು ಏನೇ ಆಗಿದ್ರೂ ಅದಕ್ಕೆ ಐಪಿಎಲ್ನ ರಾಜಸ್ಥಾನ ರಾಯಲ್ಸ್ ತಂಡವೇ ಕಾರಣ. ನೇಮ್ ಅಂಡ್ ಫೇಮ್ ಎಲ್ಲವನ್ನ ಕೊಟ್ಟಿದೆ. ತನ್ನ 12 ವರ್ಷಗಳ ಐಪಿಎಲ್ ಜರ್ನಿಯಲ್ಲಿ 10 ವರ್ಷ ರಾಜಸ್ಥಾನದ ಪರವೇ ಆಡಿದ್ದಾರೆ. ಆಟಗಾರನಾಗಿ ಜರ್ನಿ ಶುರು ಮಾಡಿ ನಾಯಕನ ಪಟ್ಟಕ್ಕೇರಿದ್ದಾರೆ. ಸಣ್ಣ ಅವಧಿಯಲ್ಲೆ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಇದನ್ನೂ ಓದಿ:ರೋಹಿತ್ ಮುಂದೆ ನಡೆಯದ ಕೊಹ್ಲಿ ಆಟ.. ಹಿಟ್ಮ್ಯಾನ್ ದಶಕದ ಕನಸು ನನಸು..!
major missing 😭💗 pic.twitter.com/JLkjh9jjW7
— Rajasthan Royals (@rajasthanroyals) August 23, 2024
ರಾಜಸ್ಥಾನ ಕ್ಯಾಪ್ಟನ್ ಆಗಿ ಸ್ಯಾಮ್ಸನ್
2021 ರಲ್ಲಿ ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ ತಂಡ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಮುಂದಿನ ಸೀಸನ್ನಲ್ಲಿ ಬೌನ್ಸ್ಬ್ಯಾಕ್ ಮಾಡಿ ರನ್ನರ್ಅಪ್ ಆಯ್ತು. 2023ನೇ ಐಪಿಎಲ್ನಲ್ಲಿ 5ನೇ ಸ್ಥಾನ ಪಡೆದ್ರೆ, ಕಳೆದ ಸೀಸನ್ನಲ್ಲಿ ಪ್ಲೇ ಆಫ್ಗೆ ಎಂಟ್ರಿಕೊಟ್ಟಿತು. ಒಟ್ಟಿನಲ್ಲಿ, ಒಂದೆಡೆ ಸಿಎಸ್ಕೆ ಸಂಜು ಸ್ಯಾಮ್ಸನ್ಗೆ ಗಾಳ ಹಾಕಿದೆ ಅನ್ನೋ ಸುದ್ದಿ ಹೊರ ಬಿದ್ದಾಗಲೇ, ರಾಜಸ್ಥಾನ ಫ್ರಾಂಚೈಸಿ ನಾಯಕನ ಪೋಸ್ಟ್ ಹಾಕಿ ಮೇಜರ್ ಮಿಸ್ಸಿಂಗ್ ಅಂತ ಬರೆದುಕೊಂಡಿದೆ. ಈ ಮೂಲಕ ಫ್ಯಾನ್ಸ್ ತಲೆಯಲ್ಲಿ ಹುಳ ಬಿಟ್ಟಿದೆ. ಈ ಸುದ್ದಿ ಎಷ್ಟು ನಿಜವಾಗುತ್ತೆ ಅನ್ನೋದಕ್ಕೆ ಕಾಲವೇ ಉತ್ತರ ನೀಡಲಿದೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ ಅಷ್ಟೇ ಅಲ್ಲ.. ಟೀಂ ಇಂಡಿಯಾಗೆ ನೇರ ಎಚ್ಚರಿಕೆ ಕೊಟ್ಟ ಬಾಂಗ್ಲಾದ ತ್ರಿಮೂರ್ತಿಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ