ಬಾಂಗ್ಲಾ ವಿರುದ್ಧ ಕೊನೆ ಟಿ20 ಪಂದ್ಯದಲ್ಲಿ ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್
ಬರೋಬ್ಬರಿ 11 ಬೌಂಡರಿ, 8 ಸಿಕ್ಸರ್ ಸಿಡಿಸಿದ್ದ ಸ್ಯಾಮ್ಸನ್ ಆಟ ಹೇಗಿತ್ತು..?
ಸದ್ಯದಲ್ಲೇ ಭಾರತ ತಂಡದ ಪರ ಟೆಸ್ಟ್ಗೆ ಡೆಬ್ಯೂ ಮಾಡಲಿರೋ ಸ್ಯಾಮ್ಸನ್
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ದಸರಾ ಹಬ್ಬದಂದು ರನ್ಗಳ ಹೊಳೆಯನ್ನೇ ಹರಿಸಿದ ಸಂಜು ಸ್ಯಾಮ್ಸನ್ 40 ಎಸೆತಗಳಲ್ಲಿ ಶತಕ ಸಿಡಿಸಿದ್ರು.
ಇನ್ನು, 236.17 ಸ್ಟ್ರೈಕ್ ರೇಟ್ನೊಂದಿಗೆ ರನ್ ಕಲೆ ಹಾಕಿದ ಸಂಜು ಸ್ಯಾಮ್ಸನ್ 47 ಎಸೆತಗಳಲ್ಲಿ 111 ರನ್ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್ನಲ್ಲಿ 11 ಬೌಂಡರಿ, 8 ಸಿಕ್ಸರ್ ಸಿಡಿಸಿದರು. ಒಂದು ಓವರ್ನಲ್ಲಿ ಸತತ 4 ಬೌಂಡರಿ, ಇನ್ನೊಂದು ಓವರ್ನಲ್ಲಿ ಸತತ 5 ಸಿಕ್ಸರ್ ಬಾರಿಸಿದ್ದು ಇನ್ನಿಂಗ್ಸ್ನ ಮತ್ತೊಂದು ಹೈಲೈಟ್. ಈಗ ಇವರ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ಸಾಮರ್ಥ್ಯ ಸಾಬೀತು ಮಾಡಲು ಅವಕಾಶ ಸಿಕ್ಕಿರಲಿಲ್ಲ!
ಸಂಜು ಸ್ಯಾಮ್ಸನ್ಗೆ ಭಾರತ ಏಕದಿನ ತಂಡದಲ್ಲಿ ಸ್ಥಾನ ಸಿಗದಿದ್ದರೆ ಟಿ20 ಸರಣಿಗೆ ಆಯ್ಕೆಯಾಗುತ್ತಿದ್ದರು. ಕೆಲವೊಮ್ಮೆ ಟಿ20 ತಂಡದಿಂದ ದೂರ ಉಳಿಯುತ್ತಿದ್ದರು. ಆಗಾಗ ಮಾತ್ರ ಏಕದಿನ ತಂಡದಲ್ಲಿ ಅವಕಾಶ ಸಿಗುತ್ತಿತ್ತು. ಬಹುತೇಕ ಸಂದರ್ಭದಲ್ಲೂ ಬೆಂಚ್ ಕಾಯುತ್ತಿದ್ದರು. ಇದರ ಪರಿಣಾಮ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಲು ಸಂಜುಗೆ ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ಆದರೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಿಂದ ದೂರವಾದ ಮೇಲೆ ಸಂಜುಗೆ ಅವಕಾಶ ಸಿಗುತ್ತಿದೆ. ಹಾಗಾಗಿ ಬಾಂಗ್ಲಾದೇಶ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಶತಕ ಹೊಡೆಯುವ ಮೂಲಕ ಸಂಜು ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಈಗ ಸಂಜು ಟೆಸ್ಟ್ ಕ್ರಿಕೆಟ್‌ನತ್ತ ಮುಖ ಮಾಡಿದ್ದಾರೆ.
ಸದ್ಯದಲ್ಲೇ ಟೆಸ್ಟ್ ಪದಾರ್ಪಣೆ
ಸ್ಯಾಮ್ಸನ್ ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸಂಜು 2024-25ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರೆ, ಮುಂದಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಬಹುದು.
ಇದನ್ನೂ ಓದಿ: 6,6,6,6,6,6,6,6; ಸಂಜು ಸ್ಫೋಟಕ ಶತಕಕ್ಕೆ ಕಾರಣ ಯಾರು? ಈ ಬಗ್ಗೆ ಸ್ಯಾಮ್ಸನ್ ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ