ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ಸಾನ್ಯ ಅಯ್ಯರ್
ಪುತ್ತೂರಿನಲ್ಲಿ ಹಲ್ಲೆ ನಡೆದಿದೆ ಅಂತಾ ಆರೋಪ ಕೇಳಿಬಂದಿತ್ತು
ಕಂಬಳ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ಸಾನ್ಯಾ ಐಯ್ಯರ್
ಕರುನಾಡ ಮನೆ ಮನೆ ಮಾತಾದ ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ, ಬಿಗ್ ಬಾಸ್ ಸೀಸನ್ 9 ಸ್ಪರ್ಧಿ ಸಾನ್ಯಾ ಅಯ್ಯರ್ ಮೇಲೆ ಪುತ್ತೂರಿನಲ್ಲಿ ಹಲ್ಲೆ ನಡೆದಿದೆ ಎನ್ನಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಖುದ್ದು ಸಾನ್ಯಾ ಅಯ್ಯರ್ ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಪ್ರಕರಣ:
ಕಳೆದ ಎರಡು ದಿನಗಳಿಂದ ವೇದಿಕೆಯ ಮೇಲೆ ಸಾನ್ಯಾ ಮತ್ತು ಗೆಳೆತಿಯರು ಆಯೋಜಕರ ಜೊತೆ ಗಲಾಟೆ ಮಾಡುವ ವಿಡಿಯೋ ಕೂಡ ವೈರಲ್ ಆಗಿದೆ. ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ಅತಿಥಿಯಾಗಿ ಸಾನ್ಯಾ ಐಯ್ಯರ್ ಹೋಗಿದ್ದರು. ಈ ವೇಳೆ ಓರ್ವ ಯುವಕ ಜೊತೆ ಜೋರಾಗಿ ಗಲಾಟೆ ನಡೆದಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಾನ್ಯಾ ಅಯ್ಯರ್, ನಾನು ಕಂಬಳಕ್ಕೆ ಅತಿಥಿಯಾಗಿ ಸ್ನೇಹಿತೆಯರ ಜೊತೆ ಹೋಗಿದ್ದೆ. ಆಗ ನಶೆಯಲ್ಲಿದ್ದ ಒಬ್ಬ ಯುವಕ ನನ್ನ ಸ್ನೇಹಿತೆಯರ ಮೇಲೆ ಬಿದ್ದ. ಆಗ ನಾವು ಕಿರುಚಿದ್ದಕ್ಕೆ ಜನರು ಸೇರಿದರು. ಯಾವ ಹುಡುಗ ಎಂದು ಗೊತ್ತಿಲ್ಲ. ಬಳಿಕ ಆತ ಎಲ್ಲಿಗೆ ಹೋದ ಎಂದು ಸಹ ಗೊತ್ತಾಗಲಿಲ್ಲ. ಈ ಘಟನೆ ಬಗ್ಗೆ ಆಯೋಜಕರರಿಗೆ ವಿಷಯ ತಿಳಿಯಿತು. ಆದರೆ, ಸುದ್ದಿ ಆದಂತೆ ಅವನು ನನ್ನ ಮೈ ಮುಟ್ಟಲಿಲ್ಲ, ನಾನು ಅವನ ಕಪಾಳಕ್ಕೆ ಹೊಡೆಯಲಿಲ್ಲ. ನನಗೂ ಅವನು ಹೊಡೆಯಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಕಂಬಳಕ್ಕೆ ಬರುವಾಗ ಸಾನ್ಯಾ ಅಯ್ಯರ್ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಮದ್ಯಪಾನ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಮಾತನಾಡಿದ ಸಾನ್ಯಾ ಅಯ್ಯರ್ ಖಂಡಿತವಾಗಿಯೂ ನಾನು ಮದ್ಯಪಾನ ಮಾಡಿಲ್ಲ. ಬಾಂಬೆಯಲ್ಲಿ ನನ್ನ ಶೂಟಿಂಗ್ ಇದೆ. ಅದಕ್ಕಾಗಿ ನಾನು ಜೀರೋ ಶುಗರ್ ಡಯೆಟ್ ಮಾಡುತ್ತಿದ್ದೇನೆ. ಅಂಥದ್ದರಲ್ಲಿ ಮದ್ಯಪಾನ ಹೇಗೆ ಮಾಡಲಿ? ನಾನು ರುದ್ರಾಕ್ಷಿ ಧರಿಸಿದ್ದೇನೆ. ಹಾಗಾಗಿ ಮದ್ಯಪಾನ, ಧೂಮಪಾನ ಮಾಡಲ್ಲ. ನಾವು ಹೋಗಿದ್ದು ಪವಿತ್ರವಾದ ಸ್ಥಳಕ್ಕೆ. ಅಲ್ಲಿ ದೇವಸ್ಥಾನಗಳು ಇವೆ. ಅಲ್ಲಿ ಎಂಜಾಯ್ ಮಾಡೋಕೆ ನಾವು ಹೋಗಿರಲಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ