ಪತ್ರಕರ್ತನ ಮಗನ ಜೊತೆ ಕಿರಿಕ್ ಆರೋಪ
ಡಿಶುಂ ಡಿಶುಂ ಶುರುವಾಗ್ತಿದ್ದಂತೆ ಪೊಲೀಸ್ ಎಂಟ್ರಿ
ಪ್ರಭಾವಿ ನಾಯಕನ ಪುತ್ರನ ಗಲಾಟೆಗೆ ಕಾರಣ ಏನು?
ಮೈಸೂರು: ಮಾಜಿ ಶಾಸಕ ಸಾ.ರಾ.ಮಹೇಶ್ ಪುತ್ರ ಹಾಗೂ ಪತ್ರಕರ್ತನ ಮಗನ ನಡುವೆ ಕುವೆಂಪು ನಗರದ ಕೆಫೆ ಬಿರಿಯಾನಿ ಹೋಟೆಲ್ ಮುಂಭಾಗ ಮಾರಾಮಾರಿ ನಡೆದಿದೆ. ಸಾ.ರಾ.ಮಹೇಶ್ ಪುತ್ರ ಜಯಂತ್ ಹಾಗೂ ಪತ್ರಕರ್ತ ಗುರುರಾಜ್ ಪುತ್ರನ ನಡುವೆ ಗಲಾಟೆಯಾಗಿದೆ.
ಇಬ್ಬರು ಪರಸ್ಪರ ಕೈಕೈ ಮಿಲಾಯಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಗಲಾಟೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಕ್ಷಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಲಾಟೆ ದೊಡ್ಡದಾಗುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಎಂಟ್ರಿಯಾಗಿದ್ದಾರೆ. ಕೂಡಲೇ ಇಬ್ಬರನ್ನೂ ವಶಕ್ಕೆ ಪಡೆದು, ಠಾಣೆಗೆ ಕರೆಸಿ ಬುದ್ಧಿಹೇಳಿದ್ದಾರೆ. ಬಳಿಕ ಮುಚ್ಚಳಿಕೆ ಪತ್ರ ಬರೆಸಿಕೊಂಡು ಅವರನ್ನು ಬಿಟ್ಟುಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಯಾವುದೇ ಕೇಸ್ ದಾಖಲಿಸಿಕೊಂಡಿಲ್ಲ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ