Advertisment

ನಟಿ ಅಲ್ಲ, ಸ್ಪೋರ್ಟ್ಸ್​​ನಲ್ಲೂ ಇಲ್ಲ, ಆದ್ರೂ ಈಕೆ ಸೆಲೆಬ್ರಿಟಿ! ಸಾರಾ ಸೌಂದರ್ಯಕ್ಕೆ ಫ್ಯಾನ್ಸ್​ ರನ್​ ಔಟ್​

author-image
AS Harshith
Updated On
ನಟಿ ಅಲ್ಲ, ಸ್ಪೋರ್ಟ್ಸ್​​ನಲ್ಲೂ ಇಲ್ಲ, ಆದ್ರೂ ಈಕೆ ಸೆಲೆಬ್ರಿಟಿ! ಸಾರಾ ಸೌಂದರ್ಯಕ್ಕೆ ಫ್ಯಾನ್ಸ್​ ರನ್​ ಔಟ್​
Advertisment
  • ವಿಶ್ವಕಪ್ ಬೆನ್ನಲ್ಲೇ ಸಾರಾ ಫಾಲೋವರ್ಸ್ ದುಪ್ಪಟ್ಟು
  • ಸೋಶಿಯಲ್ ಮೀಡಿಯಾದಲ್ಲಿ ಫುಲ್ ಡಿಮ್ಯಾಂಡ್
  • ಶುಭ್​ಮನ್​ ಜೊತೆಗಿನ ರೂಮರ್​ ಬಗ್ಗೆ ಸಾರಾ ಅಲರ್ಟ್.!​

ಸೌಂದರ್ಯ ಅನ್ನೋದು ಹೆಣ್ಣಿಗೆ ಸ್ವತಃ ಅನ್ನೋ ಕನ್ನಡದ ಹಾಡೊಂದಿದೆ. ಈ ಫೇಮಸ್​ ಹಾಡನ್ನ ನೀವು ಕೇಳಿರ್ತಿರಾ. ಈ ಬ್ಯೂಟಿಗೆ ಈ ಮಾತು ನೂರಕ್ಕೆ ನೂರರಷ್ಟು ಅನ್ವಯಿಸುತ್ತದೆ. ಈಗೆ ಅಂದ್ರೆ ಸೌಂದರ್ಯ. ಸೌಂದರ್ಯ ಅಂದ್ರೆ ಈ ಬೆಡಗಿ ಅನ್ನೋ ಹಾಗಿರೋದು ದಿಗ್ಗಜ ಕ್ರಿಕೆಟರ್​ವೊಬ್ರ​ ಪುತ್ರಿ. ಈಕೆ ಯಾವ ಬಾಲಿವುಡ್​​​ ನಟಿಗಿಂತ ಏನು ಕಡಿಮೆ ಇಲ್ಲ. ಆ ಹಾಲುಗನ್ನೆಯ ಚೆಲುವೆಯ ಸ್ಪೆಷಲ್​ ಸ್ಟೋರಿ ಇಲ್ಲಿದೆ. ಪೂರ್ತಿ ಓದಿ.

Advertisment

ಇದು ಅಂತಿಂಥ ಚೆಲುವಲ್ಲ. ಹಾಲುಗೆನ್ನೆಯ ಹೊಳಪು, ಸುಡುವ ಸೂರ್ಯನೇ ನಾಚುವಂತಾ ನಗು, ಅರಳಿದ ಕಮಲದಂತಾ ಮುಖ. ಒಂದೇ ಮಾತಲ್ಲಿ ಹೇಳೋದಾದ್ರೆ ಸೌಂದರ್ಯದ ಗಣಿ.! ವಿಶ್ವದ ಅಸಂಖ್ಯ ಜನರ ಹೃದಯ ಗೆದ್ದ ಸೌಂದರ್ಯ ಈಕೆಯದ್ದು. ನಿಮಗೂ ಈ ಚೆಲುವೆಯನ್ನ ಎಲ್ಲೋ ನೋಡಿದ ಹಾಗೇ ನಿಮಗೆ ಅನ್ನಿಸುತ್ತಿದೆ ಅಲ್ವಾ..?

publive-image

ಹೌದು..! ನಿಮ್ಮ ಗೆಸ್​ ನೂರಕ್ಕೆ ನೂರು ಸರಿ. ಈಕೆ ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್​ ದೇವರು ಸಚಿನ್ ತೆಂಡುಲ್ಕರ್​​​​ ಪುತ್ರಿ ಸಾರಾನೇ.!

ವಿಶ್ವ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದ ಸೌದರ್ಯ.!

ಸಾರಾ ತೆಂಡುಲ್ಕರ್. ಗಾಡ್​ ಆಫ್ ಕ್ರಿಕೆಟ್ ಸಚಿನ್ ಪುತ್ರಿ. ಹುಟ್ಟಿನಿಂದಲೇ ಸಹಜವಾಗೇ ನೇಮ್ ಫೇಮ್ ಇದೆ. ಆದ್ರೆ, ಈಗ ಸಚಿನ್​ ಪುತ್ರಿಗೆ ಬೇರೆಯದ್ದೇ ಫ್ಯಾನ್​ ಬೇಸ್​ ಕ್ರಿಯೇಟ್​ ಆಗಿದೆ. ಅಂದು ಸಚಿನ್​ ಆಟಕ್ಕೆ ಫಿದಾ ಆದವರು, ಈಗ ಸಚಿನ್​ ಪುತ್ರಿಯ ಸೌಂದರ್ಯಕ್ಕೆ ಕ್ಲೀನ್​ಬೋಲ್ಡ್​ ಆಗಿದ್ದಾರೆ. ಸಚಿನ್​ ಅಭಿಮಾನಿಗಳ ಪಾಲಿನ ದೇವರಾದ್ರೆ, ಸಾರಾ ಅಭಿಮಾನಿಗಳ ಪಾಲಿನ ಅಪ್ಸರೆ.!

Advertisment

publive-image

ಈ ಬಾರಿಯ ವಿಶ್ವಕಪ್​ನಲ್ಲಿ​​ ಆಟಗಾರರು ಎಷ್ಟರ ಮಟ್ಟಿಗೆ ಅಭಿಮಾನಿಗಳ ಮನ ಗೆದ್ರೂ, ಬಿಟ್ರೋ ಗೊತ್ತಿಲ್ಲ. ಆದ್ರೆ, ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದ ಸಾರಾ ಸಿಕ್ಕಾಪಟ್ಟೆ ಸದ್ದು ಮಾಡಿದ್ರು. ಸದಾ ನಗುಮುಖದ ಸಾರಾಳ ಸೌಂದರ್ಯಕ್ಕೆ ಫಿದಾ ಆದವರೇ ಇಲ್ಲ. ವಿಶ್ವಕಪ್​ ಮುಗಿದು ಒಂದು ವಾರ ಕಳೆದ್ರೂ, ಸೋಲಿನ ಹತಾಶೆ ಆವರಿಸಿದ್ರೂ, ಸೋಷಿಯಲ್​ ಮೀಡಿಯಾದಲ್ಲಿ ಸಾರಾ ಹವಾ ನಡೀತಿದೆ.

ಹಾಲುಗೆನ್ನೆಯ ಚೆಲುವೆಯ ಅಂದಕೆ ಮಾರು ಹೋಗಿರುವ ಫ್ಯಾನ್ಸ್​, ಸಾರಾ ತೆಂಡುಲ್ಕರ್​ ಜಪ ಮಾಡ್ತಿದ್ದಾರೆ. ಏಕದಿನ ವಿಶ್ವಕಪ್​ ಬಳಿಕ ಈಕೆ ಎಷ್ಟರ ಮಟ್ಟಿಗೆ ಪ್ಯಾಪುಲರ್ ಆಗಿದ್ದಾಳೆ ಅನ್ನೋದಕ್ಕೆ ಈಕೆಯ instagram ಪೇಜ್ ಬೆಸ್ಟ್​ ಎಕ್ಸಾಂಪಲ್​..!ವಿಶ್ವಕಪ್ ಅಂತ್ಯದ​ ಬಳಿಕ ಈಕೆಯ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 1.9 ಮಿಲಿಯನ್​ ಹೆಚ್ಚಾಗಿದೆ. ಸುಮಾರು 4 ಮಿಲಿಯನ್​ ಇದ್ದ ಫಾಲೋವರ್ಸ್​ ಸಂಖ್ಯೆ ಈಗ 5.9 ಮಿಲಿಯನ್ ಅಂದ್ರೆ, ಹತ್ತಿರ ಹತ್ತಿರ 6 ಮಿಲಿಯನ್​ ಸನಿಹ ಬಂದಿದೆ. ಅಲ್ಲಿಗೆ ನೀವೇ ತಿಳಿದುಕೊಳ್ಳಿ, ಈಕೆಯ ಸೌಂದರ್ಯಕ್ಕೆ ಫಿದಾ ಆದವರು ಎಷ್ಟಿದ್ದಾರೆ ಅಂತಾ..

ಸೋಷಿಯಲ್ ಮೀಡಿಯಾಗಳಲ್ಲಿ ಸಾರಾಗೆ ಫುಲ್ ಡಿಮ್ಯಾಂಡ್.!

ಸಾರ್ವಜನಿಕವಾಗಿ ಸಾರಾ ತೆಂಡುಲ್ಕರ್​​ ಆಗಾಗ ಕಾಣಿಸಿಕೊಳ್ತಾರೆ ಅನ್ನೋದು ಬಿಟ್ರೆ, ಇಂದಿಗೂ ಯಾವ ಮೂವಿನೂ ಮಾಡಿಲ್ಲ. ಯಾವ ಸೀರಿಯಲ್​ನಲ್ಲೂ ಬಣ್ಣ ಹಚ್ಚಿಲ್ಲ. ಆದ್ರೆ, ಹೊರಬಂದ್ರೆ ಸಾಕು ಕ್ಯಾಮರಾ ಕಣ್ಣು, ನೋಡುವವರ ಕಣ್ಣು ಎಲ್ಲಾ ಈಕೆಯ ಮೇಲಿರುತ್ತೆ. ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿ ಬಿಡ್ತಾರೆ. ಸೋಶಿಯಲ್ ಮೀಡಿಯಾದಲ್ಲಂತೂ ಸಾರಾ ತೆಂಡುಲ್ಕರ್ ಸದಾ ಟ್ರೆಂಡಿಂಗ್​ನಲ್ಲಿ ಇರ್ತಾರೆ.

Advertisment

publive-image

ಸದ್ಯ ಈಕೆಯನ್ನ ಅಭಿಮಾನಿಗಳಂತೂ ಸೆಲೆಬ್ರೆಟಿಯಂತೆಯೇ ಆರಾಧಿಸ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಕೆ ಫ್ಯಾನ್ಸ್​ ಪೇಜ್​ಗಳು ಸೃಷ್ಟಿಯಾಗಿವೆ. ಸಾರಾಳ ಡಿಮ್ಯಾಂಡ್ ಯಾವ್​ ರೇಂಜ್​​ಗೆ ಇದೆ ಅನ್ನೋದನ್ನ ನೀವೇ ಅರ್ಥ ಮಾಡ್ಕೊಳ್ಳಿ..

ಪ್ರೀತಿಯ ಮಗಳ ಬಗ್ಗೆ ಕ್ರಿಕೆಟ್​​ ದೇವರ ಎಚ್ಚರಿಕೆ ನಡೆ..!

ಏಕದಿನ ವಿಶ್ವಕಪ್​ ವೇಳೆ ಸ್ಟ್ರೇಡಿಯಂಗೆ ಬಂದಿದ್ದ ಸಾರಾ ಎಷ್ಟು ಸುದ್ದಿಯಾಗಿದ್ರೋ, ಶುಭ್​ಮನ್ ಗಿಲ್​ ಜೊತೆಗಿನ ಪ್ರೇಮ್​ ಕಹಾನಿ ಅದಕ್ಕೂ ಹೆಚ್ಚು ಸೌಂಡ್ ಮಾಡಿತ್ತು. ಅದರಲ್ಲೂ ಶುಭ್​​ಮನ್ ಗಿಲ್​​​ ಜೊತೆಗಿನ ಡೀಪ್ ಪೇಕ್​ ಪೋಟೋ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ಈ ಬಗ್ಗೆ ಎಚ್ಚರಗೊಂಡ ಸಾರಾ, ತಂತ್ರಜ್ಞಾನದ ದುರ್ಬಳಕೆಯ ಬಗ್ಗೆ ಬೇಸರ ಹೊರಹಾಕಿದ್ರು.

ಇನ್ನು ಮಗಳನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸಚಿನ್ ತೆಂಡುಲ್ಕರ್​​, ತಮ್ಮ ಪಾಪುಲಾರಿಟಿ ಮಕ್ಕಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ತಿದ್ದಾರೆ. ಅದೇ ರೀತಿ ಮಕ್ಕಳನ್ನ ಬೆಳೆಸುತ್ತಿದ್ದಾರೆ. ಸ್ವಶಕ್ತಿಯಿಂದ ಭವಿಷ್ಯ ರೂಪಿಸಿಕೊಳ್ಳಲು ಆದ್ಯತೆ ನೀಡಿರುವ ಸಚಿನ್, ಮಕ್ಕಳ ಮೇಲೆ ಸಾಕಷ್ಟು ನಿಗಾ ಇಟ್ಟಿದ್ದಾರೆ.

Advertisment

ಸದ್ಯಕ್ಕಂತೂ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್, ಅಭಿಮಾನಿಗಳ ಪಾಲಿನ ಹಾಟ್ ಫೇವರಿಟ್ ಆಗಿದ್ದಾರೆ. ಆಕೆಯ ಸೌಂದರ್ಯಕ್ಕೆ ಕ್ಲೀನ್ ಬೌಲ್ಡ್ ಆಗಿರೋ ಫ್ಯಾನ್ಸ್​, ಅಪ್ಸರೆಯಂತೆ ಆರಾಧಿಸ್ತಿದ್ದಾರೆ. ಮುಂದೆಯೂ ಫ್ಯಾನ್ಸ್​ ಪ್ರೀತಿ ಸಾರಾ ಮೇಲೆ ಹೀಗೆ ಇರಲಿ ಅನ್ನೋದು ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment