Advertisment

Breaking: ಸರ್ಫರಾಜ್ ಖಾನ್ ಭರ್ಜರಿ ಶತಕ; ಮತ್ತೆ ಚಿಗುರಿತು ಭಾರತಕ್ಕೆ ಗೆಲ್ಲುವ ಕನಸು..!

author-image
Ganesh
Updated On
IND vs NZ ರೋಚಕ ಘಟ್ಟ ತಲುಪಿದ ಟೆಸ್ಟ್ ಪಂದ್ಯ.. ಟೀಮ್ ಇಂಡಿಯಾ ಮುಂದಿರುವ ಚಾಲೆಂಜ್ ಏನು?
Advertisment
  • ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಟೆಸ್ಟ್ ಪಂದ್ಯ
  • ಶತಕ ಬಾರಿಸಿ ಬಿಸಿಸಿಐಗೆ ಸಂದೇಶ ಕೊಟ್ಟ ಬ್ಯಾಟ್ಸ್​ಮನ್
  • ಸರ್ಫರಾಜ್ ಖಾನ್​ಗೆ ರಿಷಭ್ ಪಂತ್ ಉತ್ತಮ ಸಾಥ್

ಟೀಂ ಇಂಡಿಯಾದ ಹೊಸ ಭರವಸೆ ಸರ್ಫರಾಜ್​ ಖಾನ್ ಕೊನೆಗೂ ತಮ್ಮ ಪ್ರತಿಭೆಯನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಆಕರ್ಷಕ ಶತಕ ಬಾರಿಸಿ ತಂಡಕ್ಕೆ ಆಸರೆ ಆಗಿದ್ದಾರೆ. ಜೊತೆಗೆ ಬಿಸಿಸಿಐಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.

Advertisment

ಹೇಗಿತ್ತು ಶತಕ..?
ಸಂಕಷ್ಟದಲ್ಲಿದ್ದ ಟೀಂ ಇಂಡಿಯಾವನ್ನು ಪಾರು ಮಾಡಲು ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿರುವ ಸರ್ಫ​ರಾಜ್ ಖಾನ್, 111 ಬಾಲ್​ನಲ್ಲಿ 106 ರನ್​ಗಳಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಆಡುವಂತೆ ಬ್ಯಾಟ್ ಬೀಸುತ್ತಿರುವ ಖಾನ್, ಮೂರು ಸಿಕ್ಸರ್​, 14 ಬೌಂಡರಿಗಳನ್ನು ಬಾರಿಸಿದ್ದಾರೆ. ಇಲ್ಲಿಯವರೆಗೆ 129 ಬಾಲ್ ಎದುರಿಸಿರುವ ಅವರು, 106 ರನ್​ಗಳಿಸಿ ಆಡ್ತಿದ್ದಾರೆ.

ಇದನ್ನೂ ಓದಿ: ಇಂದು ವಾರದ ಕತೆ ಕಿಚ್ಚನ ಜೊತೆ; ಕುತೂಹಲ ಮೂಡಿಸಿದ 5 ವಿಚಾರಗಳು, ವೀಕ್ಷಕರು ಎಕ್ಸೈಟ್..!

ಇನ್ನು ಸರ್ಫರಾಜ್ ಖಾನ್​​ಗೆ ರಿಷಬ್ ಪಂತ್ 11 ರನ್​ಗಳಿಸಿ ಸಾಥ್ ನೀಡುತ್ತಿದ್ದಾರೆ. ಮೂರು ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ ಇಲ್ಲಿಯವರೆಗೆ 180 ರನ್​ಗಳಿಸಿ 76 ರನ್​ಗಳ ಹಿನ್ನಡೆ ಅನುಭವಿಸಿದೆ. ಇನ್ನು ನ್ಯೂಜಿಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 402 ರನ್​ಗಳಿಸಿದೆ. ಹೀಗಾಗಿ ಈ ಟೆಸ್ಟ್​ ಗೆಲ್ಲಬೇಕು ಅಂದರೆ ಟೀಂ ಇಂಡಿಯಾ ಬಿರುಸಿನಿಂದ ಬ್ಯಾಟ್ ಬೀಸಬೇಕು. ಇಂದು ಸಂಜೆ ವೇಳೆಗೆ ನ್ಯೂಜಿಲೆಂಡ್ ತಂಡಕ್ಕೆ ಬಿಗ್​ ಟಾರ್ಗೆಟ್​ ನೀಡಬೇಕಿದೆ.

Advertisment

ಇದನ್ನೂ ಓದಿ:6,6,6,4,4,4,4,4,4,4; ನ್ಯೂಜಿಲೆಂಡ್​ ವಿರುದ್ಧ ಸರ್ಫರಾಜ್​ ಖಾನ್​​​ ಸ್ಫೋಟಕ ಬ್ಯಾಟಿಂಗ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment