newsfirstkannada.com

×

ತಮ್ಮನ ಶತಕ ವೈಭವ ಕಂಡು ಸಂಭ್ರಮಿಸಿದ್ದ ಅಣ್ಣನಿಗೆ ಸಂಕಷ್ಟ; ಟೀಂ ಇಂಡಿಯಾ ಸ್ಥಾನಕ್ಕಾಗಿ ಅಣ್ಣ vs ತಮ್ಮ..!

Share :

Published September 8, 2024 at 8:05am

    ದುಲೀಪ್ ಟ್ರೋಫಿಯಲ್ಲಿ ಮುಷೀರ್ ಭರ್ಜರಿ ಶತಕ..!

    ಮುಂಬೈಕರ್​​​​​​​​​ ಶತಕಕ್ಕೆ ಕ್ರಿಕೆಟ್ ಲೋಕ ಉಘೇ ಉಘೇ..!

    ಡೆಬ್ಯೂ ಪಂದ್ಯದಲ್ಲಿ 181 ರನ್ ಚಚ್ಚಿದ ಮುಷೀರ್​ ಖಾನ್​​​​..!

ಮುಷೀರ್ ಖಾನ್ ದುಲೀಪ್ ಟ್ರೋಫಿಯಲ್ಲಿ ಶತಕ ಸಿಡಿಸಿದ್ದನ್ನ ಕಂಡು ಅಣ್ಣ ಸರ್ಫರಾಜ್ ಖಾನ್ ಹಿರಿಹಿರಿ ಹಿಗ್ಗಿದ್ರು. ತಾವೇ ಶತಕ ಬಾರಿಸಿದಷ್ಟು ಸಂಭ್ರಮ ಪಟ್ಟಿದ್ರು. ಆದ್ರೀಗ ತಮ್ಮನೇ ಅಣ್ಣನನ್ನ ಸಂಕಷ್ಟ ತಂದೊಡ್ಡಿದ್ದಾನೆ.

ಮುಂಬೈನ ಮೈದಾನದಲ್ಲಿ ಅರಳಿದ ಅದ್ಭುತ ಕ್ರಿಕೆಟ್ ಪ್ರತಿಭೆಗಳಿಗೆ ಲೆಕ್ಕವಿಲ್ಲ. ಕ್ರಿಕೆಟ್ ದೇವರು ಸಚಿನ್​ ತೆಂಡುಲ್ಕರ್​, ರೋಹಿತ್​ ಶರ್ಮಾ, ಶ್ರೇಯಸ್ ಅಯ್ಯರ್ ಹಾಗೂ ಯಶಸ್ವಿ ಜೈಸ್ವಾಲ್​​​. ಹೀಗೆ ಹೇಳುತ್ತಾ ಹೋದ್ರೆ ಬ್ರಿಲಿಯಂಟ್​​​​ ಕ್ರಿಕೆಟರ್ಸ್​ಗಳ ದೊಡ್ಡ ಲಿಸ್ಟ್​​ಗೆ ಇದೆ. ಇದೀಗ ಆ ಲಿಸ್ಟ್​​ಗೆ ಯಂಗ್ ಸೆನ್ಷೆಷನ್ ಮುಷೀರ್​ ಖಾನ್​ ಸೇರಿಕೊಂಡಿದ್ದಾರೆ.

ಇದನ್ನೂ ಓದಿ:ದುಲೀಪ್ ಟ್ರೋಫಿಯಲ್ಲಿ RCB ಬೌಲರ್​​ ಸೆನ್ಸೇಷನ್​; ಈತ ಬೆಂಗಳೂರು ತಂಡಕ್ಕೆ ಮತ್ತೆ ಬೇಕೇಬೇಕು ಎಂದ ಫ್ಯಾನ್ಸ್..!

ದುಲೀಪ್ ಟ್ರೋಫಿಯಲ್ಲಿ ಮುಷೀರ್​​ ಬೊಂಬಾಟ್​ ಬ್ಯಾಟಿಂಗ್​​..!
ಇಂಡಿಯಾ ಎ ಎದುರಿನ ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬಿ ತಂಡ ಗೌರವ ಮೊತ್ತ ಸಂಪಾದಿಸಿದೆ. 94ಕ್ಕೆ 7 ವಿಕೆಟ್​ ಕಳೆದುಕೊಂಡಿದ್ದ ಇಂಡಿಯಾ ಬಿ ಪುಟಿದೆದ್ದು ಮೊದಲ ಇನ್ನಿಂಗ್ಸ್​ನಲ್ಲಿ 321 ರನ್​​ ಕಲೆಹಾಕ್ತು. ಇದಕ್ಕೆ ಕಾರಣ ಆ್ಯಂಗ್ರಿ ಯಂಗ್​ಮ್ಯಾನ್ ಮುಷೀರ್​ ಖಾನ್​​​. ಡೆಬ್ಯೂ ಮಾಡಿದ ದುಲೀಪ್ ಟ್ರೋಫಿಯಲ್ಲೇ ಮೆಚ್ಯೂರ್​​ ಇನ್ನಿಂಗ್ಸ್ ಕಟ್ಟಿದ ಮುಷೀರ್​ ಅಮೋಘ ಶತಕ ಸಿಡಿಸಿ ಸೆನ್ಷೆಷನ್ ಸೃಷ್ಟಿಸಿದ್ದಾರೆ.

ದುಲೀಪ್ ಟ್ರೋಫಿಯಲ್ಲಿ ಮುಷೀರ್​​​​ ಖಾನ್​​..!
ದುಲೀಪ್ ಟ್ರೋಫಿ ಮೊದಲ ಇನ್ನಿಂಗ್ಸ್​ನಲ್ಲಿ ದಿಟ್ಟ ಇನ್ನಿಂಗ್ಸ್ ಕಟ್ಟಿದ ಮುಷೀರ್ ಖಾನ್ 373 ಎಸೆತದಲ್ಲಿ ಅತ್ಯ‘ಮೂಲ್ಯ 181 ರನ್​​ ಕಲೆಹಾಕಿದ್ರು. 16 ಬೌಂಡ್ರಿ ಹಾಗೂ 5 ಸಿಕ್ಸರ್​ ಇವರ ಇನ್ನಿಂಗ್ಸ್​ನಲ್ಲಿದ್ವು.

ಇದನ್ನೂ ಓದಿ:ದ್ರಾವಿಡ್-ಗಂಭೀರ್ ಬೇರೆ ಬೇರೆ, ವ್ಯತ್ಯಾಸ ಇದೆ -ದೊಡ್ಡ ವಿಚಾರ ಬಹಿರಂಗ ಮಾಡಿದ ಪಂತ್

ತಮ್ಮ ಮುಷೀರ್ ಅಬ್ಬರ..ಅಣ್ಣ ಸರ್ಫರಾಜ್​ಗೆ ಸಂಕಷ್ಟ..!
ಸಂಕಷ್ಟದಲ್ಲಿ ಮುಷೀರ್ ಕಟ್ಟಿದ ದಿಟ್ಟ ಇನ್ನಿಂಗ್ಸ್ ಅನ್ನ ಕ್ರಿಕೆಟ್ ಲೋಕವೇ ಕೊಂಡಾಡ್ತಿದೆ. ಆದ್ರೆ ತನ್ನ ಮನೋಜ್ಞ ಆಟದಿಂದ ಮುಷೀರ್​ ಇಂಡಿಯಾ ಬಿ ತಂಡದ ಮಾನ ಕಾಪಾಡಿದ್ದೇನೋ ನಿಜ. ಕ್ರಿಕೆಟ್ ಎಕ್ಸ್​ಫರ್ಟ್ಸ್ ಹಾಗೂ ಫ್ಯಾನ್ಸ್ ಪಾಲಿಗೆ ಹೀರೋ ಆಗಿದ್ದು ನಿಜ. ಆದ್ರೆ ಅಣ್ಣ ಸರ್ಫರಾಜ್​ ಪಾಲಿಗೆ ಮಾತ್ರ ಮುಷೀರ್ ಖಾನ್ ವಿಲನ್ ಆಗಿದ್ದಾರೆ.

ಮುಷೀರ್​​​​ ಶತಕದಿಂದ ಸರ್ಫರಾಜ್​​​​​​​ ಎದೆಯಲ್ಲಿ ಢವಢವ
ತಮ್ಮ ಮುಷೀರ್​​ ಖಾನ್​​​ ದುಲೀಪ್​ ಟ್ರೋಫಿಯಲ್ಲಿ ಡೆಬ್ಯು ಶತಕ ಬಾರಿಸಿದ್ದಕ್ಕೆ ಖುಷಿಪಡಬೇಕೋ, ಇಲ್ಲ ದುಃಖ ಪಡಬೇಕೋ ಗೊತ್ತಿಲ್ಲ. ಮುಷೀರ್​​ ಸೆಂಚುರಿ ಹೊಡೆದ ಬೆನ್ನಲ್ಲೆ ಸರ್ಫರಾಜ್​​​​ ಎದೆಯಲ್ಲಿ ಢವ ಢವ ಶುರುವಾಗಿದೆ. ಮುಂದಿನ ವಾರದಲ್ಲಿ ಬಾಂಗ್ಲಾ ಟೆಸ್ಟ್​​​ ಸರಣಿಗೆ ಭಾರತ ತಂಡ ಪ್ರಕಟಗೊಳ್ಳಲಿದೆ. ಸದ್ಯ ಮುಷೀರ್​​​​​​​​ ಶತಕ ಸಿಡಿಸಿ ಸೆಲೆಕ್ಟರ್ಸ್​ ಗಮನ ಸೆಳೆದಿದ್ದು, ಸರ್ಫರಾಜ್​ ಸ್ಥಾನಕ್ಕೆ​ ಸಂಕಷ್ಟ ಎದುರಾಗಿದೆ.

ಬಾಂಗ್ಲಾ ಸರಣಿ ಆಯ್ಕೆ ನಿರೀಕ್ಷೆಯಲ್ಲಿದ್ದ ಸರ್ಫರಾಜ್​​ಗೆ ಶಾಕ್​​
ಡೆಬ್ಯು ಸಿರೀಸ್​​ನಲ್ಲಿ ಇಂಪ್ರೆಸ್ಸಿವ್ ಆಟವಾಡಿದ್ದ ಸರ್ಫರಾಜ್ ಖಾನ್​ ಬಾಂಗ್ಲಾ ಸರಣಿ ಮೇಲೆ ಕಣ್ಣಿಟ್ಟಿದ್ರು. ಕಠಿಣ ಸಮರಾಭ್ಯಾಸ ನಡೆಸಿದ್ದ ಡೊಮೆಸ್ಟಿಕ್ ಕಿಂಗ್​ ದುಲೀಪ್ ಟ್ರೋಫಿಯ ಮೊದಲ ಇನ್ನಿಂಗ್ಸ್​ನಲ್ಲಿ ನಿರಾಸೆ ಮೂಡಿಸಿದ್ರು. ಕೇವಲ 9 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡ್ರು. ಆದರೆ ಅದೇ ತಮ್ಮ ಅಮೋಘ 181 ರನ್ ಸಿಡಿಸಿ ಮಿಂಚಿದ್ದಾರೆ.

ಇದನ್ನೂ ಓದಿ:ಈ ಐದು ಆಟಗಾರರ ಮೇಲೆ RCB ಕಣ್ಣು; ಮೆಗಾ ಹರಾಜಿನಲ್ಲಿ 4 ವಿದೇಶಿ ಆಟಗಾರರ ಖರೀದಿಗೆ ಟಾರ್ಗೆಟ್..!

ಟೀಮ್ ಇಂಡಿಯಾದಲ್ಲಿ 5 ಕ್ರಮಾಂಕಕ್ಕೆ ತೀವ್ರ ಪೈಪೋಟಿ ಇದೆ. ಸರ್ಫರಾಜ್​​​ ಖಾನ್​​, ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್​ ಈ ಸ್ಲಾಟ್ ಮೇಲೆ ಕಣ್ಣಿಟ್ಟಿದ್ದಾರೆ. ಈ ಮೂವರ ಪೈಕಿ ಸರ್ಫರಾಜ್ ಖಾನ್​​​​​​​​​​ ಹೆಸರು ಮುಂಚೂಣಿಯಲ್ಲಿತ್ತು. ಆದ್ರೀಗ ಕಹಾನಿ ಮೇ ಟ್ವಿಸ್ಟ್ ಎನ್ನುವಂತೆ ಈ ರೇಸ್​​ಗೆ ಮುಷೀರ್ ಖಾನ್ ಎಂಟ್ರಿಕೊಟ್ಟಿದ್ದಾರೆ. ಆ ಮೂಲಕ ಅಣ್ಣ ತಮ್ಮಂದಿರ ನಡುವೆ ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳಲು ಫೈಟ್ ಏರ್ಪಟ್ಟಿದೆ. ಎರಡನೇ ಇನ್ನಿಂಗ್ಸ್​ನಲ್ಲೂ ಮುಷೀರ್ ಬ್ಯಾಟ್ ಘರ್ಜಿಸಿದ್ದೆ ಆದ್ರೆ, ಅಣ್ಣನನ್ನ ಹಿಂದಿಕ್ಕಿ, ಬಾಂಗ್ಲಾ ಟೆಸ್ಟ್ ಸರಣಿಗೆ ಆಯ್ಕೆಯಾದ್ರು ಆಶ್ಚರ್ಯಪಡಬೇಕಿಲ್ಲ.

ಇದನ್ನೂ ಓದಿ:ಜಯ್ ಶಾ ಸ್ಥಾನದ ಮೇಲೆ ಕಣ್ಣಿಟ್ಟ ಮೂವರು; ಆ ಪಟ್ಟಿಯಲ್ಲಿ ಓರ್ವ 3 ಪಂದ್ಯಗಳನ್ನು ಆಡಿದ ಕ್ರಿಕೆಟಿಗ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ತಮ್ಮನ ಶತಕ ವೈಭವ ಕಂಡು ಸಂಭ್ರಮಿಸಿದ್ದ ಅಣ್ಣನಿಗೆ ಸಂಕಷ್ಟ; ಟೀಂ ಇಂಡಿಯಾ ಸ್ಥಾನಕ್ಕಾಗಿ ಅಣ್ಣ vs ತಮ್ಮ..!

https://newsfirstlive.com/wp-content/uploads/2024/09/SARFRAJ-KHAN-1.jpg

Load More