newsfirstkannada.com

ಫ್ಯಾನ್ಸ್​​ಗೆ ಗುಡ್​ನ್ಯೂಸ್​​ ಕೊಟ್ಟ ಸತ್ಯ ಸೀರಿಯಲ್​​​ ತಂಡ; ಏನದು?

Share :

11-08-2023

    ಯಶಸ್ವಿಯಾಗಿ 700 ಸಂಚಿಕೆಗಳನ್ನು ಪೂರೈಸಿದ ಸತ್ಯ

    ವಿಭಿನ್ನತೆಯನ್ನ ಉಣಬಡಿಸುತ್ತಿರುವ ಸತ್ಯ ಸೀರಿಯಲ್​​

    ಮಕ್ಕಳಿಗೂ ಸತ್ಯ ಎಂದರೆ ಸಿಕ್ಕಾಪಟ್ಟೆ ಫೇವರಿಟ್ ಅಂತೆ!

ವಿಭಿನ್ನತೆಯನ್ನ ಉಣ ಬಡಿಸುತ್ತಿರುವ ಸತ್ಯ ಕತೆ. ಜನ ಕೂಡ ಸತ್ಯಾಳನ್ನ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಯಶಸ್ವಿ 700 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಹೌದು, ಸತ್ಯಳ ವಿಭಿನ್ನ ಲುಕ್​, ಮಾತು ಎಲ್ಲವೂ ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ. ವಿಶೇಷವಾಗಿ ಮಕ್ಕಳಿಗೂ ಸತ್ಯ ಸಿಕ್ಕಾಪಟ್ಟೆ ಫೇವರಿಟ್​. ಸತ್ಯ ಪಾತ್ರವನ್ನ ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ ನಟಿ ಗೌತಮಿ ಜಾಧವ್​. ಸತ್ಯಗೂ ಗೌತಮಿಗೂ ಅಜಗಜಾಂತರ ವ್ಯತ್ಯಾಸವಿದೆ. ಗೌತಮಿ ರಿಯಲ್​ನಲ್ಲಿ ಸಿಕ್ಕಾಪಟ್ಟೆ ಸಾಫ್ಟ್​. ಸತ್ಯ ಹಂಗಲ್ಲ. ಸಖತ್​ ಡ್ಯಾಶಿಂಗ್​, ಡೇರಿಂಗ್​ ಇರೋ ಪಾತ್ರ.

ಸತ್ಯ ಸೀರಿಯಲ್​ನ ಪ್ರತಿ ಪಾತ್ರವೂ ಜನಪ್ರಿಯತೆ ಪಡೆದಿವೆ. ಇನ್ನು ಕಾರ್ತಿಕ್​ ಸತ್ಯ ಜೋಡಿಯ ಕೆಮಿಸ್ಟ್ರಿ ಸೊಗಸಾಗಿದ್ದು, ಕಾಮಿಕ್​ ಜಗಳಕ್ಕೆ ವೀಕ್ಷಕರು ಕಾಯುತ್ತಿದ್ದಾರೆ. ಅಷ್ಟು ಫೇಮಸ್​ ಈ ಜೋಡಿಯ ಕೋಳಿ ಜಗಳ. ಸಾವಿರ ಸಂಚಿಕೆಗಳತ್ತ ದಿಟ್ಟ ಹೆಜ್ಜೆ ಇಡುತ್ತಿದ್ದಾಳೆ ಸತ್ಯ. ಸ್ವಪ್ನ ಕೃಷ್ಣ ನಿರ್ದೇಶಕಿಯಾಗಿ ನಿರ್ಮಾಪಕಿಯಾಗಿ ಸತ್ಯಳಾನ್ನ ಅದ್ಭತವಾಗಿ ಕಟ್ಟಿಕೊಡುತ್ತಿದ್ದಾರೆ. ಈ ಯಶಸ್ಸನ್ನ ತಂಡ ಸಡಗರದಿಂದ ಸೆಲೆಬ್ರೇಟ್​​ ಮಾಡಿದೆ.

ಸದ್ಯ ಕತೆಯಲ್ಲಿ ಹೊಸ ತಿರುವು ಎದುರಾಗಿದ್ದು, ಲಕ್ಷ್ಮಣನ ಗುಟ್ಟು ಸತ್ಯ ಮುಂದೆ ರಿವೀಲ್​ ಆಗಿದೆ. ಚಿಕ್ಕತ್ತೆಗೆ ಆಗುತ್ತಿರುವ ಮೋಸವನ್ನ ಸತ್ಯ ಹೇಗೆ ತಡೆಯುತ್ತಾಳೆ ಸತ್ಯ? ಚಿಕ್ಕಮಾವನ ಈ ಗುಟ್ಟಿನ ಹಿಂದಿನ ಕತೆ ಏನು ಅನ್ನೋದು ಸದ್ಯದ ಟ್ರ್ಯಾಕ್​. ಒಟ್ಟಿನಲ್ಲಿ ಸತ್ಯ ತಂಡ ಮತ್ತಷ್ಟು ಯಶಸ್ವಿ ಸಂಚಿಕೆಗಳನ್ನ ಪೂರೈಸಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​​ಗೆ ಗುಡ್​ನ್ಯೂಸ್​​ ಕೊಟ್ಟ ಸತ್ಯ ಸೀರಿಯಲ್​​​ ತಂಡ; ಏನದು?

https://newsfirstlive.com/wp-content/uploads/2023/08/serial-7.jpg

Load More