newsfirstkannada.com

×

ಸಿಎಂ ಆಗಲು ಸಾಹುಕಾರ್​​ಗಿದೆ ಸುವರ್ಣಾವಕಾಶ; ಸತೀಶ್​​ ಜಾರಕಿಹೊಳಿಗಿರೋ ಆ ಶಕ್ತಿಗಳೇನು?

Share :

Published September 9, 2024 at 6:22am

    ರಾಜ್ಯಕ್ಕೆ ಮತ್ತೆ ಮುನ್ನೆಲೆಗೆ ಬಂದ ಬೆಳಗಾವಿ ಸಾಹುಕಾರ ಸಿಎಂ ಅಭಿಯಾನ

    ರಾಜ್ಯದ ಸಿಎಂ ಆಗುವ 6 ಶಕ್ತಿಗಳು ಸತೀಶ್ ಜಾರಕಿಹೊಳಿ ಬಳಿಯೇ ಇವೆ

    ಆ 6 ಶಕ್ತಿಗಳನ್ನು ಪ್ರಯೋಗಿಸಿಯೇ ಮುಂದಿನ ಸಿಂಎ ಆಗಲಿದ್ದಾರಾ ಸಾಹುಕಾರ

ಬೆಂಗಳೂರು:  ರಾಜಕಾರಣದ ಒಳ ಸುಳಿಗೆ ನೂರು ರೂಪಗಳಿವೆ. ಇಂದು ಗುರು ಶಿಷ್ಯ ಆದವರು ಮುಂದೆ ಅವರ ಸ್ಪರ್ಧಾಳುಗಳಾಗಬಹುದು. ಎದುರಾಳಿಗಳು ಆಗಬಹುದು ಅದೇನು ಹೊಸತಲ್ಲ. ಈಗ ಸದ್ಯ ಸತೀಶ್ ಸಿಎಂ ಆಗುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅದಷ್ಟೇ ಅಲ್ಲ ಅಷ್ಟೇ ಅಲ್ಲ, ಸತೀಶ್​​ ಸಿಎಂ ಯಾಕ್ಬೇಕು ಅನ್ನೋದಕ್ಕೆ ಒಂದಷ್ಟು ಕಾರಣಗಳೂ ಇವೆ. ಮಹಾಗುರುವಿನ ಬೆಂಬಲವೂ ಇದೆ. ಸತೀಶ್​​ ಜಾರಕಿಹೊಳಿಗೆ 6 ಶಕ್ತಿಗಳೂ ಇವೆ. ಅವುಗಳನ್ನು ವಿವವರವಾಗಿ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಎಂಟ್ರಿ ಕೊಡೋದು ಫಿಕ್ಸ್‌? ನಾನ್ ರೆಡಿ ಎಂದ ಸೀಕ್ರೆಟ್ ಏನು? VIDEO

ಸತೀಶ್​​ ಶಕ್ತಿ 48 ಶಾಸಕರ ಬೆಂಬಲ

ಹೌದು, ಸತೀಶ್​​ ಜಾರಕಿಹೊಳಿ ಸಿಎಂ ಆಗ್ಬೇಕು ಅಂತ ಆ ಒಬ್ಬರು ನಿರ್ಧರಿಸಿದರೇ ಎಸ್​ಟಿ ಸಮಾಜದ 15 ಶಾಸಕರು ಒಂದಾಗುತ್ತಾರೆ. ಇದಿಷ್ಟೇ ಅಲ್ಲ, 15 ಎಸ್​ಟಿ ಸಮಾಜದ ಶಾಸಕರೊಂದಿಗೆ 35ಕ್ಕೂ ಅಧಿಕ ಅಹಿಂದ ಶಾಸಕರ ದಂಡು ಬಂದು ನಿಲ್ಲುತ್ತದೆ. ಅಷ್ಟರ ಮಟ್ಟಿಗಿನ ಎಂಎಲ್​​ಎ ಶಕ್ತಿ ಸತೀಶ್​​ ಬೆನ್ನಿಗಿದೆ.

ಇದನ್ನೂ ಓದಿ: ಜಾರಕಿಹೊಳಿ ಸೈಲೆಂಟ್ ನಡೆ ಕುತೂಹಲ.. ಸಂಚಲನ ಸೃಷ್ಟಿಸಿದ ಹೈಕಮಾಂಡ್ ರಹಸ್ಯ ಭೇಟಿ.. ಕಾಂಗ್ರೆಸ್​ನಲ್ಲಿ ಏನಾಗ್ತಿದೆ?

ಸತೀಶ್​​ ಶಕ್ತಿ 2 ; ವಿವಾದವಿಲ್ಲದ ನಾಯಕ

ಸುದೀರ್ಘ 30 ವರ್ಷಗಳ ರಾಜಕಾರಣದ ಅನುಭವ ಇರುವ ಸತೀಶ್​​ ಜಾರಕಿಹೊಳಿ ವಿವಾದಗಳ ಸನಿಹಕ್ಕೂ ಹೋಗುವುದಿಲ್ಲ. ಮೌಢ್ಯ ವಿರೋಧಿ ವಿಚಾರಕ್ಕಷ್ಟೇ ಸತೀಶ್​​ ಜಾರಕಿಹೊಳಿ ಹೆಸರು ವಿವಾದದಲ್ಲಿ ಕೇಳಿ ಬರುತ್ತದೆ. ಬದಲಿಗೆ 1998ರಲ್ಲಿ ಎಂಎಲ್​ಸಿ ಆದಾಗಿನಿಂದ 2023ರಲ್ಲಿ ಯಮಕನಮರಡಿ ಶಾಸಕರಾಗಿ ಮರು ಆಯ್ಕೆ ಆದ ತನಕವೂ ಯಾವುದೇ ಹಗರಣದ ವಿವಾದಗಳಲ್ಲಿ ಸತೀಶ್​​ ಜಾರಕಿಹೊಳಿ ಹೆಸರಿಲ್ಲ. ಇದೂ ಸಹ ಸತೀಶ್​ ಮುಖ್ಯಮಂತ್ರಿ ಆಗ್ಬೇಕು ಅನ್ನೋದಕ್ಕೆ ಶಕ್ತಿಯಾಗಿ ಕಾಣುತ್ತದೆ.

ಸತೀಶ್​​ ಶಕ್ತಿ 3 : ಜನ+ಹಣದ ಪ್ರಭಾವ

ಹೆಸರಲ್ಲೇ ಸಾಹುಕಾರರಾಗಿರೋ ಸತೀಶ್​​ ಜಾರಕಿಹೊಳಿ ಸಿಎಂ ಸ್ಥಾನಕ್ಕೇರಬೇಕು ಅನ್ನೋದಾದರೇ ಬಹುಮುಖ್ಯವಾಗಿ ಎರಡೂ ಪ್ರಭಾವಗಳಿವೆ. ಒಂದು ಜನ ಬಲ ಮತ್ತೊಂದು ಹಣ ಬಲ. ಈ ವಿಚಾರದಲ್ಲಿ ಸತೀಶ್​​ ಜಾರಕಿಹೊಳಿ ರಾಜ್ಯದ ಪ್ರಭಾವಿ ಸಮಾಜದ ಅಗ್ರಗಣ್ಯ ನಾಯಕರಾಗಿ ಈ ಕ್ಷಣಕ್ಕೂ ಕಾಣುತ್ತಿದ್ದಾರೆ. ಇನ್ನು, ಹಣ ಬಲದ ವಿಚಾರಕ್ಕೆ ಬರೋ ಮಾತೇ ಇಲ್ಲ. ಇವತ್ತು ರಾಜ್ಯದಲ್ಲಿ ಅಹಿಂದ ರಣಕೇಕೆ ಹಾಕುತ್ತಿದೆ ಅಂದರೇ ಅದಕ್ಕೆ ಮೊದಲು ಹಣ ನೀಡಿದ್ದು ಇಬ್ಬರು. ಒಬ್ಬರು ಈಡಿಗ ಸಮಾಜದ ಆರ್​ಎಲ್ ಜಾಲಪ್ಪ. ಮತ್ತೊಬ್ಬರು ವಾಲ್ಮೀಕಿ ನಾಯಕ ಸಮಾಜದ ಸತೀಶ್​​ ಜಾರಕಿಹೊಳಿ.

ಇದನ್ನೂ ಓದಿ: ದೇಶಪಾಂಡೆ CM ಆದರೆ ಸ್ವಾಗತ ಎಂದ ಹೆಬ್ಬಾರ್, ನನಗೂ ಖುಷಿ ಎಂದ ವೈದ್ಯ; ಎಲ್ಲರಿಗೂ ಡಿಕೆ ಶಿವಕುಮಾರ್ ಕೌಂಟರ್..!

ಸತೀಶ್​​ ಶಕ್ತಿ 4 ;ಸೈಲೆಂಟ್​ ಗೇಮರ್​

ಸತೀಶ್​​ ಜಾರಕಿಹೊಳಿ ರಾಜಕಾರಣ ಇನ್ನುಳಿದ ನಾಯಕರಿಗಿಂತ್ಲೂ ಭಿನ್ನ. ಎಲ್ಲವೂ ಸೈಲೆಂಟಾಗಿಯೇ ಇರುತ್ತದೆ. ರಾಜ್ಯ ರಾಜಕಾರಣದ ಸರ್ಜಿಕಲ್ ಸ್ಟ್ರೈಕ್ ಎಕ್ಸ್​​ಪರ್ಟ್​​ ಯಾರಾದ್ರೂ ಇದ್ರೆ ಅದು ಸತೀಶ್​​ ಜಾರಕಿಹೊಳಿಯೇ. ಯಾಕಂದ್ರೆ, ರಾಜಕೀಯ ಎದುರಾಳಿಯ ಮಹಬಲಕ್ಕೂ, ಮಾಸ್ಟರ್​ ಮೈಂಡ್​ಗೂ ಮುಟ್ಟಿ ನೋಡಿಕೊಳ್ಳುವಂಥಾ ರಣತಂತ್ರದ ರೂವಾರಿ ಇದೇ ಸತೀಶ್​​. ಈ ಸೈಲೆಂಟ್​​ ಗೇಮ್​​ ಕೂಡ ಸತೀಶ್​​ ಪಾಲಿಗೆ ಮಹಾಶಕ್ತಿಯಾಗಿದೆ.

ಸತೀಶ್​​ ಶಕ್ತಿ 5; ಸೌಮ್ಯ ಸ್ವಭಾವ, ಚಾಣಕ್ಯ ಸತೀಶ್

ಚಂದ್ರಗುಪ್ತ ಮೌರ್ಯ ಅನ್ನೋ ದೊರೆ ಚಾಣಕ್ಯನಿಂದಾಗಿ ದೊರೆಯಾದ. ಆದರೇ, ದೊರೆಯೇ ಚಾಣಕ್ಯನಾಗಿದ್ದರೆ. ಅದರಲ್ಲೂ ಕಡುಕೋಪದ ವಿಷ್ಣುಗುಪ್ತನಿಗಿಂತ ಸೌಮ್ಯ ಸ್ವಭಾವದ ರಣತಂತ್ರಗಾರ ಗುಣ ಸತೀಶ್​​ರಲ್ಲಿದೆ. ಈ ವಿಷಯಕ್ಕೆ ಬಂದರೇ ಎಂತಹ ಅಪಮಾನವನ್ನಾದರೂ ನಗುತ್ತಲೇ ಸಹಿಸಿ, ಎದುರಾಳಿಗೆ ಜಂಘಾಬಲವನ್ನೇ ನಡುಗಿಸೋ ಸೋಲುಣಿಸುವ ಚಾಣಾಕ್ಷ ಗುಣ ಸತೀಶ್​​ ಪಾಲಿಗೆ ಮಹಾ ಶಕ್ತಿ. ಹೌದು, ಸತೀಶ್​ ಸಿಎಂ ಆಗ್ಬೇಕು ಅನ್ನೋದಕ್ಕೆ ಈ ಅಂಶವೂ ಮುಖ್ಯವಾಗುತ್ತದೆ.

ಸತೀಶ್​​ ಶಕ್ತಿ 6; ಹೈಕಮಾಂಡ್​​ಗೆ ಅಚ್ಚುಮೆಚ್ಚು

ಹಳ್ಳಿಯಲ್ಲಿ ಎಷ್ಟೇ ಸ್ಟ್ರಾಂಗ್ ಇದ್ರೂ ಡೆಲ್ಲಿಯಲ್ಲೂ ಮೆಚ್ಚುಗೆ ಆಗಬೇಕು. ಇದು ಕಾಂಗ್ರೆಸ್​​ ಪಾಲಿನ ಬಹುಮಖ್ಯ ಸಂಗತಿ. ಸಿದ್ದರಾಮಯ್ಯರೊಂದಿಗೆ ಕಾಂಗ್ರೆಸ್​​ ಸೇರಿದಾಗಿನಿಂದ ಇಲ್ಲಿಯ ತನಕ ಹೈಕಮಾಂಡ್​​ ಸಂಸ್ಕೃತಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಹೈಕಮಾಂಡ್​​ ಜೊತೆ ಅದ್ಭುತವಾಗಿದ್ದಾರೆ. ಇದು ಸಿಎಂ ಆಗೋ ಸತೀಶ್​​ ಹಾದಿಗೆ ವರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಆಗಲು ಸಾಹುಕಾರ್​​ಗಿದೆ ಸುವರ್ಣಾವಕಾಶ; ಸತೀಶ್​​ ಜಾರಕಿಹೊಳಿಗಿರೋ ಆ ಶಕ್ತಿಗಳೇನು?

https://newsfirstlive.com/wp-content/uploads/2024/09/SATISH-JARKIHOLI.jpg

Load More