newsfirstkannada.com

WATCH: ಆಸ್ಪತ್ರೆ ಲಿಫ್ಟ್​ನಲ್ಲಿ ಸಿಲುಕಿ ಪರದಾಡಿದ ಸಚಿವ ಸತೀಶ್‌ ಜಾರಕಿಹೊಳಿ ಪುತ್ರ; ಏನಾಯ್ತು?

Share :

Published August 21, 2023 at 4:55pm

    ಬಿಮ್ಸ್ ಆಸ್ಪತ್ರೆಯ ಲಿಫ್ಟ್​ನಲ್ಲಿ ಸಿಲುಕಿಕೊಂಡು ಪರದಾಡಿದ ಸಚಿವರ ಪುತ್ರ

    ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಗೋಳಾಟ

    15ಕ್ಕೂ ಹೆಚ್ಚು ಮಂದಿಯ ಭಾರ ತಾಳಲಾರದೆ ಅರ್ಧಕ್ಕೆ ನಿಂತ ಆಸ್ಪತ್ರೆ ಲಿಫ್ಟ್!

ಬೆಳಗಾವಿ: ಆಸ್ಪತ್ರೆಯೊಂದರ ಲಿಫ್ಟ್‌ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ಸಿಲುಕಿಕೊಂಡಿರೋ ಘಟನೆ ಜಿಲ್ಲೆಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ರಾಹುಲ್ ಜಾರಕಿಹೊಳಿ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು, ಹಾಲು ವಿತರಣೆ ಮಾಡಲು ತೆರಳಿದ್ದರು.

ಸತೀಶ್ ಜಾರಕಿಹೊಳಿ ಪುತ್ರ ಹಾಗೂ ಇನ್ನಿತರ ಕಾರ್ಯಕರ್ತರು ಹೆರಿಗೆ ವಾರ್ಡ್​ಗೆ ಹೋಗಲು ಲಿಫ್ಟ್​ ಹತ್ತಿದ್ದಾರೆ. ಆದರೆ 15ಕ್ಕೂ ಹೆಚ್ಚು ಜನ ಏಕಕಾಲಕ್ಕೆ ಲಿಫ್ಟ್​ನಲ್ಲಿ ಹೋಗಿದ್ದಕ್ಕೆ ಭಾರ ಹೆಚ್ಚಾಗಿ ಅರ್ಧಕ್ಕೆ ನಿಂತು ಬಿಟ್ಟಿದೆ.​ ಈ ಘಟನೆಯಾಗಿ 15 ನಿಮಿಷ ಬಳಿಕ ತಂತ್ರಜ್ಞರನ್ನು ಕರೆಸಿ ಲಿಫ್ಟ್​ನಿಂದ ಎಲ್ಲರನ್ನು ಹೊರಕ್ಕೆ ಕರೆತರಲಾಗಿದೆ. ಅದರಲ್ಲೂ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಸುರಕ್ಷಿತರಾಗಿ ಹೊರ ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಆಸ್ಪತ್ರೆ ಲಿಫ್ಟ್​ನಲ್ಲಿ ಸಿಲುಕಿ ಪರದಾಡಿದ ಸಚಿವ ಸತೀಶ್‌ ಜಾರಕಿಹೊಳಿ ಪುತ್ರ; ಏನಾಯ್ತು?

https://newsfirstlive.com/wp-content/uploads/2023/08/sathish.jpg

Load More