newsfirstkannada.com

VIDEO: ಬಡ ಕಾರ್ಮಿಕನ ಜೀವ ಉಳಿಸಲು ಹೆಲಿಕಾಪ್ಟರ್ ಲ್ಯಾಂಡ್​ ಮಾಡಿದ ಸರ್ಕಾರ.. ಆ್ಯಂಬುಲೆನ್ಸ್​ ಬರಲಿಲ್ಲ ಯಾಕೆ?

Share :

25-08-2023

    ಸೌದಿ ಅರೇಬಿಯಾ ಸರ್ಕಾರದ ದಿಢೀರ್ ಸ್ಪಂದನೆಗೆ ಎಲ್ಲೆಡೆ ಶ್ಲಾಘನೆ

    ಕಾಲ್ ಮಾಡಿದರೂ ಸಮಯಕ್ಕೆ ಸರಿಯಾಗಿ ಬರಲಿಲ್ಲ ಆ್ಯಂಬುಲೆನ್ಸ್

    ಹೆಲಿಕಾಪ್ಟರ್ ಬಂದ ಮೇಲೆ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ ವ್ಯಕ್ತಿಗೆ ಶಾಕ್

ಸಾಮಾನ್ಯ ಕಾರ್ಮಿಕನ ಪ್ರಾಣ ಉಳಿಸಲು ಸೌದಿ ಅರೇಬಿಯಾ ಸರ್ಕಾರ ಹೆಲಿಕಾಪ್ಟರ್​ ಅನ್ನು ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದೆ.

ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಕಾರ್ಮಿಕರೊಬ್ಬರು ಅಸ್ವಸ್ಥನಾಗಿ ನೆಲಕ್ಕೆ ಬಿದ್ದಿದ್ದರು. ಈ ವೇಳೆ ಅಲ್ಲಿಯೇ ಇದ್ದ ಆತನ ಸಹ ಕಾರ್ಮಿಕ ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ದಾನೆ. ಅದರಂತೆ ಆಂಬ್ಯುಲೆನ್ಸ್​​ ವೇಗವಾಗಿ ರಸ್ತೆಯಲ್ಲಿ ಬರುತ್ತಿದ್ದಾಗ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಲಾಗಿಲ್ಲ. ಅಸ್ವಸ್ಥನಾದ ವ್ಯಕ್ತಿಯ ಆರೋಗ್ಯ ಕ್ಷೀಣಿಸುತ್ತ ಬಂದಿದೆ. ಹೀಗಾಗಿ ಸೌದಿ ಸರ್ಕಾರ ಕಾರ್ಮಿಕನ ಜೀವ ಉಳಿಸಲು ನೇರವಾಗಿ ಏರ್ ಆಂಬ್ಯುಲೆನ್ಸ್ ಅನ್ನು ಕಳುಹಿಸಿದ್ದು ಕೇವಲ 15 ನಿಮಿಷದಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಇನ್ನು ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ದ ಯೆಮೆನ್ ಕಾರ್ಮಿಕನಿಗೆ ಹೆಲಿಕಾಪ್ಟರ್​ ಬಂದಿರುವುದನ್ನು ನೋಡಿ ಶಾಕ್​ಗೆ ಒಳಗಾಗಿದ್ದಾನೆ. ಕೇವಲ ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ರೆ ಹೆಲಿಕಾಪ್ಟರ್ ಬಂದಿದೆಯಲ್ಲವೆಂದು ಆಶ್ಚರ್ಯವಾಗಿದ್ದಾನೆ. ರಸ್ತೆಯಲ್ಲಿ ಏರ್ ಆಂಬ್ಯುಲೆನ್ಸ್​ ಬಂದು ಲ್ಯಾಂಡ್ ಆಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೇ ಅಸ್ವಸ್ಥನಾದ ಕಾರ್ಮಿಕ ಪಾಕ್​ ಮೂಲದ ವ್ಯಕ್ತಿ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬಡ ಕಾರ್ಮಿಕನ ಜೀವ ಉಳಿಸಲು ಹೆಲಿಕಾಪ್ಟರ್ ಲ್ಯಾಂಡ್​ ಮಾಡಿದ ಸರ್ಕಾರ.. ಆ್ಯಂಬುಲೆನ್ಸ್​ ಬರಲಿಲ್ಲ ಯಾಕೆ?

https://newsfirstlive.com/wp-content/uploads/2023/08/SOUDI_AREBIA.jpg

Load More